ಮೋದಿ ನೇತೃತ್ವದಲ್ಲಿ ಬಿಜೆಪಿ ಹೆಮ್ಮರ'
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಇಂದು ಅತ್ಯಂತ ಹೆಚ್ಚು ಸದಸ್ಯತ್ವವವನ್ನು ಹೊಂದಿದ್ದು ಅತಿ ಹೆಚ್ಚು ಸ್ಥಾನದಲ್ಲಿ ಗೆಲುವನ್ನು ಪಡೆದಿದೆ ಎಂದು ಮುಖಂಡರೋರ್ವರು ಹೇಳಿದರು.
ಚಿಕ್ಕನಾಯಕಹಳ್ಳಿ (ಏ.09) : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಆಚರಣೆಯ ಹಿಂದೆ ಅತ್ಯಂತ ಶ್ರೇಷ್ಠ ಸಾಧನೆ ಅಡಗಿದೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್. ಕಿರಣ್‌ಕುಮಾರ್ ತಿಳಿಸಿದರು.
ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಭಾರತಿಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್‌ಗೆ ಪರ್ಯಾಯವಾಗಿ ಭಾರತೀಯ ಜನಸಂಘವನ್ನು ಶ್ಯಾಂಪ್ರಕಾಶ್ ಮುಖರ್ಜಿ ಹಾಗೂ ದೀನ್‌ದಯಾಳ್ ಉಪಾಧ್ಯಾಯ ಸ್ಥಾಪಿಸಿ ದೇಶಾದ್ಯಂತ ಅತ್ಯಂತ ಶಿಸ್ತಿನ ಪಕ್ಷವಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ, ಸರ್ಕಾರದ ವಿರುದ್ಧ ಎಲ್ಲಾ ಪ್ರಮುಖ ಪಕ್ಷಗಳು ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಒಂದಾಗಿ ರಚನೆಗೊಂಡ ಜನತಾ ಪಕ್ಷದಲ್ಲಿ ಭಾರತೀಯ ಜನಸಂಘವೂ ಅದರಲ್ಲಿ ವಿಲೀನಗೊಂಡಿತ್ತು.
'ಬಿಜೆಪಿ ಬಲಗೊಳ್ಳಲು ಕಾರಣವೇ ಇದು' .
ನಂತರ ಬಂದ ಕಾಂಗ್ರೆಸ್ಸೇತರ ಜನತಾ ಸರ್ಕಾರದಲ್ಲಿ ಎ.ಬಿ. ವಾಜಪೇಯಿ ಹಾಗೂ ಎಲ್ ಕೆ.ಅಡ್ವಾಣಿಯವರೂ ಮಂತ್ರಿಗಳಾಗಿ ಸಮರ್ಥವಾಗಿ ಸರ್ಕಾರ ನಡೆಸಿದ್ದರು. ಆದರೆ 1980 ಮಾರ್ಚ್ 6ರಂದು ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷ ಉದಯವಾಯಿತು. ಲಾಲ್‌ಕೃಷ್ಣ ಅಡ್ವಾಣಿ ನಂತರ ಪ್ರಧಾನ ಮಂತ್ರಿ ಮೋದಿಯವರ ಶ್ರಮದಿಂದ ಬಿಜೆಪಿ ಹೆಮ್ಮರವಾಗಿ ಬೆಳೆದುನಿಂತಿದೆ ಎಂದರು.
1982ರ ಚುನಾವಣೆಯಲ್ಲಿ ಕೇವಲ 2 ಸಂಖ್ಯೆಯಿಂದ ಖಾತೆ ತೆರೆದಿದ್ದ ಪಕ್ಷ 303 ಕ್ಷೇತ್ರದಲ್ಲಿ ಗೆಲುವು ಪಡೆದು ನಾಗಾಲೋಟದಲ್ಲಿ ಮುಂದುವರೆದಿರುವುದು. ಪಕ್ಷದ ಕೋಟ್ಯಂತರ ಕಾರ್ಯಕರ್ತರ ಹಾಗೂ ಸಹಸ್ರಾರು ನಾಯಕರ ಪ್ರಾಮಾಣಿಕ ಪರಿಶ್ರಮದಿಂದಾಗಿ. ಜಗತ್ತಿನಲ್ಲಿ ಅತಿಹೆಚ್ಚು ಸದಸ್ಯತ್ವವನ್ನು ಹೊಂದಿರುವ ಏಕೈಕ ಪಕ್ಷವೆಂಬ ಹೆಗ್ಗಳಿಕೆ ಬಿಜೆಪಿಯದ್ದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ. ಜಗದೀಶ್, ರೈತಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಹನುಮಜಯ, ಹರ್ಷ, ಗೌತಂ ಮುಂತಾದವರಿದ್ದರು.