'ಬಿಜೆಪಿ ಬಲಗೊಳ್ಳಲು ಕಾರಣವೇ ಇದು'
ಬಿಜೆಪಿ ಅತ್ಯಂತ ಹೆಚ್ಚು ಪ್ರಭಲ ಪಕ್ಷವಾಗಿ ಬೆಳೆದಿದೆ. ಸದ್ಯ 14 ಕೋಟಿ ಸದಸ್ಯತ್ವವನ್ನು ಹೊಂದಿದ್ದು ರಾಷ್ಟ್ರೀಯವಾದಿ ಚಿಂತನೆಗಳೇ ಪಕ್ಷ ಬೆಳೆಯಲು ಕಾರಣ ಎಂದು ಮುಕಂಡರು ಹೇಳಿದ್ದಾರೆ.
ಮೈಸೂರು (ಏ.08): 14 ಕೋಟಿ ಸದಸ್ಯತ್ವವನ್ನು ಹೊಂದಿರುವ ಬಿಜೆಪಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಪಕ್ಷ ಹೊಂದಿರುವ ರಾಷ್ಟ್ರೀಯವಾದಿ ಚಿಂತನೆಗಳ ಪಕ್ಷ ಬಲಗೊಳ್ಳಲು ಪ್ರಮುಖ ಕಾರಣವಾಗಿದ್ದು, ಪಕ್ಷದ ಕಾರ್ಯಕರ್ತರು ಪಕ್ಷದ ಸೈದ್ಧಾಂತಿಕ ನಿಲುವುಗಳಿಗೆ ಬದ್ಧರಾಗಿ ಇನ್ನಷ್ಟುಪಕ್ಷ ಸಂಘಟನೆಗೆ ಒತ್ತು ಕೊಡಬೇಕೆಂದು ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಹೇಳಿದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಬಿಜೆಪಿಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವತಿಯಿಂದ ಜಯಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಹಾಗೂ ಇನ್ನಿತರ ಪದಾಧಿಕಾರಿ ಮನೆಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ಅವರು ಮಾತನಾಡಿದರು.
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಬಿಜೆಪಿಗೆ ಗುಡ್ ಬೈ ಹೇಳಿದ ನಾಯಕಿ ...
ಪಕ್ಷದ ಬೆಳವಣಿಗೆ ಹಿಂದೆ ಶ್ಯಾಮ… ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಅವಿರತ ಶ್ರಮ ಅಡಗಿದೆ. ಲೋಕಸಭೆಯಲ್ಲಿ ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ ಪಕ್ಷ ಇಂದು 300ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದು, ದೇಶದ ಬಗ್ಗೆ ಬಿಜೆಪಿಗೆ ಇರುವ ಸೈದ್ಧಾಂತಿಕ ಬದ್ಧತೆ ಇದಕ್ಕೆ ಕಾರಣವಾಗಿದೆ. 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಧನೆಯನ್ನು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಕೇವಲ 7 ವರ್ಷದಲ್ಲಿ ಮಾಡಿದೆ, ಇಡೀ ವಿಶ್ವವೇ ಮೆಚ್ಚುವ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ. ಜಾಗತಿಕವಾಗಿ ಭಾರತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಬಿಜೆಪಿ ಹಿರಿಯ ಕಾರ್ಯಕರ್ತರಾದ ಗೋಪಾಲ… ರಾವ್, ಶ್ರೀನಿವಾಸ್, ಕ್ಷೇತ್ರದ ಉಪಾಧ್ಯಕ್ಷ ವೃಷಭೇಂದ್ರ, ಶಿವ ಮಲ್ಲಿಕಾರ್ಜುನ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್, ಯುವ ಮೋರ್ಚಾ ಅಧ್ಯಕ್ಷ ಚೇತನ್ ಕುಮಾರ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇವಣ್ಣ, ಶ್ರೀರಾಂಪುರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಯಸಿಂಹ, ಪ್ರಸನ್ನ ಮಲ್ಲಿಕಾರ್ಜುನ, ಚಂದ್ರು, ಮಣಿಕಂಠ, ಮನು ಇದ್ದರು.