Asianet Suvarna News Asianet Suvarna News

ಮೋದಿ ಮನಸೆಳೆದ ಕಲಬುರಗಿ ಸಂತೋಷಿ ಮಾತು

*  ಪ್ರಧಾನಿ ಜತೆ ಸಂವಾದ
*  ಆಯುಷ್ಮಾನ್‌ ಭಾರತ್‌ ಸೌಲಭ್ಯದ ಬಗ್ಗೆ ವಿವರಿಸಿ ಪ್ರಧಾನಿಗೆ ಅಭಿನಂದನೆ
*  ಸಂತೋಷಿ ಮಾತಿಗೆ ಮೋದಿ ಮೆಚ್ಚುಗೆ

PM Narendra Modi Appreciate to Santoshi Speech grg
Author
Bengaluru, First Published Jun 1, 2022, 5:43 AM IST

ಕಲಬುರಗಿ/ಶಿಮ್ಲಾ(ಜೂ.01): ‘ನೀವು ನಿಮ್ಮ ಅಭಿಪ್ರಾಯ ಹಂಚಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನೀವೇನಾದರೂ ಬಿಜೆಪಿಯ ಕಾರ್ಯಕರ್ತರಾಗಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಳ್ಳುತ್ತಿದ್ದೆ’, ಜಿಲ್ಲೆ ಕಮಲಾಪುರ ತಾಲೂಕಿನ ಕಿಣ್ಣಿಸಡಕ್‌ ಗ್ರಾಮದ ಸಂತೋಷಿ ಅವರ ಮಾತುಗಳನ್ನು ಕೇಳಿ ವಿಸ್ಮಿತರಾದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಹೀಗೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಯಶಸ್ವಿ 8 ವರ್ಷಗಳನ್ನು ಪೂರೈಸಿದ ಅಂಗವಾಗಿ ಮಂಗಳವಾರ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಗರೀಬ್‌ ಕಲ್ಯಾಣ್‌ ರಾರ‍ಯಲಿ ವೇಳೆ ದೇಶದ ಬೇರೆ ಬೇರೆ ರಾಜ್ಯಗಳ ಫಲಾನುಭವಿಗಳ ಜೊತೆ ವರ್ಚುವಲ್‌ ಸಂವಾದ ನಡೆಸಿದರು.

ಸಂವಾದದಲ್ಲಿ ಮೊದಲು ಮಾತನಾಡಿದ ಮೋದಿ, ‘ಸಂತೋಷಿ ಅವರೇ ನಿಮಗೆ ಯಾವ ಸವಲತ್ತಿನಿಂದ ಸಂತೋಷವಾಗಿದೆ?’ ಎಂದು ಕೇಳಿದಾಗ ಸಂತೋಷಿ ಕನ್ನಡದಲ್ಲೇ ಮಾತನಾಡಿದರು. ‘ನಾವು ವಾಸವಿರುವ ಕಿಣ್ಣಿಸಡಕ್‌ ಕುಗ್ರಾಮ. ಮನೆಯಲ್ಲಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಯಿಂದ ಬಳಲುತ್ತಿದ್ದವರೇ ಹೆಚ್ಚು. ಇವರಿಗೆಲ್ಲ ಔಷಧಿ ತರಲು 10 ಕಿ.ಮೀ. ಪಕ್ಕದ ಊರಿಗೆ ಬರಬೇಕಿತ್ತು. ದುಬಾರಿ ಔಷಧಿಗಳಿಂದಾಗಿ ನಮಗೆ ಚಿಕಿತ್ಸೆಯೇ ಬಹುದೊಡ್ಡ ಸವಾಲಾಗಿತ್ತು. ಈ ಹಂತದಲ್ಲಿ ಆಯುಷ್ಮಾನ್‌ ಭಾರತ ಯೋಜನೆಯಡಿ ಎಲ್ಲಾ ಕಡೆ ಆರಂಭವಾದ ವೆಲ್‌ನೆಸ್‌ ಸೆಂಟರ್‌ ಬಗ್ಗೆ ಮಾಹಿತಿ ಗೊತ್ತಾಯ್ತು. ನಾವೀಗ ಮನೆ ಪಕ್ಕದಲ್ಲೇ ನಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ, ಔಷಧಿ ಸುಲಭದಲ್ಲಿ ಪಡೆಯುವಂತಾಗಿದೆ. ಇದಕ್ಕಾಗಿ ನಿಮಗೆ ಧನ್ಯವಾದಗಳು.’ ಎಂದು ಸಂತೋಷಿ ತುಂಬಾ ಭಾವುಕರಾಗಿ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಮುಸಲ್ಮಾನರ ಅಟ್ಟಹಾಸ ಹೆಚ್ಚಾಗಿದೆ: ಸಿದ್ಧಲಿಂಗ ಶ್ರೀ

ಅದಕ್ಕೆ ಉತ್ತರಿಸಿದ ಮೋದಿ, ‘ಸಂತೋಷಿ ಅವರೇ ನೀವು ಕನ್ನಡದಲ್ಲಿ ಮಾತನಾಡಿದ್ದೀರಿ. ಕನ್ನಡ ನನಗೆ ಅರ್ಥ ಆಗದಿರಬಹುದು. ಆದರೆ ನಿಮ್ಮ ಭಾವನೆಗಳು ನನಗೆ ಅರ್ಥವಾಗಿವೆ. ಆಯುಷ್ಮಾನ್‌ ಯೋಜನೆಯ ಲಾಭವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನೀವು ಅಭಿಪ್ರಾಯ ಹಂಚಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನೀವೇನಾದರೂ ಬಿಜೆಪಿಯ ಕಾರ್ಯಕರ್ತರಾಗಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಳ್ಳುತ್ತಿದ್ದೆ. ಆದರೂ ನಿಮಗೆ ಗ್ರಾಮದ ಮುಖಂಡಳಾಗುವ ಎಲ್ಲ ಅವಕಾಶಗಳಿವೆ’ ಎಂದು ಚಟಾಕಿ ಹಾರಿಸಿದರು.

ಇದು ಬಹುದೊಡ್ಡ ಸೌಭಾಗ್ಯ: ಸಂತೋಷಿ

ನಾನು ಪ್ರಧಾನಿ ಜೊತೆ ಮಾತನಾಡುತ್ತೇನೆಂದು ಕನಸು ಮನಸಲ್ಲೂ ಯೋಚಿಸಿರಲಿಲ್ಲ, ವಿಡಿಯೋ ಮೂಲಕ ಅವರೊಂದಿಗೇ ನೇರವಾಗಿ ಮಾತನಾಡಿರುವುದು ನನಗಂತೂ ಬಹುದೊಡ್ಡ ಸೌಭಾಗ್ಯದ ಸಂಗತಿಯಾಗಿದೆ ಎಂದು ಕಿಣ್ಣಿಸಡಕ್‌ ಗ್ರಾಮದ ಸಂತೋಷಿ ಹೇಳಿದ್ದಾರೆ. ಮೋದಿಯವರು ನಿಮ್ಮನ್ನೇ ಲೀಡರ್‌ ಮಾಡುವುದಾಗಿ ಹೇಳಿದ್ದಾರಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ ನಾನು ಬಿಜೆಪಿ ಪರ ಒಲವು ಇರುವವಳೇ ಆಗಿದ್ದೇನೆ. ನನಗೆ ಎಲ್ಲರು ಸೇರಿ ಚುನಾವಣೆಗೆ ನಿಲ್ಲಿಸಿದರೆ ನಿಲ್ಲುವೆ. ಜನರ ಕೆಲಸ ಮಾಡಲು ಇದಕ್ಕಿಂತ ಹೆಚ್ಚಿನ ಅವಕಾಶ ಇನ್ನೇನು ಬೇಕು ಎಂದು ಸಂತೋಷಿ ಪ್ರಶ್ನಿಸಿದರು.

ಒಂದೂವರೆ ವರ್ಷದ ಕಂದಮ್ಮಗೆ ಯಶಸ್ವಿ ಮೆದುಳು ಶಸ್ತ್ರಚಿಕಿತ್ಸೆ: ವೈದ್ಯರ ಸಾಧನೆಗೆ ಪ್ರಶಂಸೆ

ಸಂತೋಷಿ ಹೇಳಿದ್ದು....

ನಮ್ಮ ಕುಗ್ರಾಮದ ಜನ ಔಷಧಿ ತರಲು 10 ಕಿ.ಮೀ. ದೂರದ ಪಕ್ಕದ ಊರಿಗೆ ಬರಬೇಕಿತ್ತು. ದುಬಾರಿ ಔಷಧಿಗಳಿಂದಾಗಿ ನಮಗೆ ಚಿಕಿತ್ಸೆಯೇ ಬಹುದೊಡ್ಡ ಸವಾಲಾಗಿತ್ತು. ಈ ಹಂತದಲ್ಲಿ ಆಯುಷ್ಮಾನ್‌ ಭಾರತ ಯೋಜನೆಯಡಿ ಎಲ್ಲಾ ಕಡೆ ಆರಂಭವಾದ ವೆಲ್‌ನೆಸ್‌ ಸೆಂಟರ್‌ ಬಗ್ಗೆ ಮಾಹಿತಿ ಗೊತ್ತಾಯ್ತು. ನಾವೀಗ ಮನೆ ಪಕ್ಕದಲ್ಲೇ ನಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ, ಔಷಧಿ ಸುಲಭದಲ್ಲಿ ಪಡೆಯುವಂತಾಗಿದೆ.

ಮೋದಿ ಹೇಳಿದ್ದು...

‘ಸಂತೋಷಿ ಅವರೇ ನೀವು ಕನ್ನಡದಲ್ಲಿ ಮಾತನಾಡಿದ್ದೀರಿ. ಕನ್ನಡ ನನಗೆ ಅರ್ಥ ಆಗದಿರಬಹುದು. ಆದರೆ ನಿಮ್ಮ ಭಾವನೆಗಳು ನನಗೆ ಅರ್ಥವಾಗಿವೆ. ಆಯುಷ್ಮಾನ್‌ ಯೋಜನೆಯ ಲಾಭವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನೀವು ಅಭಿಪ್ರಾಯ ಹಂಚಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನೀವೇನಾದರೂ ಬಿಜೆಪಿಯ ಕಾರ್ಯಕರ್ತರಾಗಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಳ್ಳುತ್ತಿದ್ದೆ. ಆದರೂ ನಿಮಗೆ ಗ್ರಾಮದ ಮುಖಂಡಳಾಗುವ ಎಲ್ಲ ಅವಕಾಶಗಳಿವೆ’
 

Follow Us:
Download App:
  • android
  • ios