ಮಂಡ್ಯ  (ಅ.09): ಮತ್ತೆ ಇದೀಗ ಪ್ಲಾಸ್ಟಿಕ್ ಅಕ್ಕಿ ಹಾವಳಿ ಶುರುವಾಗಿದೆ. ಮಂಡ್ಯದಲ್ಲಿ ನೀಡಿದ ಪಡಿತರ ಅಕ್ಕಿಯಲ್ಲಿಪ್ಲಾಸ್ಟಿಕ್ ಪತ್ತೆಯಾಗಿದೆ.  

ಮಂಡ್ಯದ ಜಿಲ್ಲೆ ಗುರುದೇವರಹಳ್ಳಿ ಕಾಲೋನಿಯಲ್ಲಿ ನೀಡಿದ ಅಕ್ಕಿಯಲ್ಲಿ ರಬ್ಬರ್ ಮಿಶ್ರಣ ಕಂಡು ಬಂದಿದೆ. ಈ ತಿಂಗಳು ನೀಡಿರುವ ಅಕ್ಕಿಯಲ್ಲಿ ಹಳದಿ ಬಣ್ಣದ ಕಾಳುಗಳು ಕಂಡು ಬಂದಿವೆ. 

ಅನ್ನಭಾಗ್ಯದ ಅಕ್ಕಿಯಲ್ಲಿ ಕಡಿತ: ಚೀಟಿದಾರರ ಆಕ್ರೋಶ ..

ಹಳದಿ ಬಣ್ಣದ ಅಕ್ಕಿ ಕಾಳು ನೋಡಿ ಜನರು ಆತಂಕಗೊಂಡಿದ್ದು, ನೀರಿನಲ್ಲಿ ನೆನೆಸಿದರೆ ಬಣ್ಣ ಬಿಟ್ಟುಕೊಂಡು ಕಾಳುಗಳು ಪೇಸ್ಟ್ ರಿತಿ ಆಗುತ್ತಿವೆ. ಇದರಿಂದ ಅಕ್ಕಿ ಬಳಸಲು ಜನರು ಭಯಪಡುತ್ತಿದ್ದಾರೆ.  ಪಡಿತರ ಅಕ್ಕಿಯನ್ನೇ ನಂಬಿಕೊಂಡು ಬದುಕಿರುವ ಜನರು ಇದರಿಂದ ತೀವ್ರ ಆತಂಕಗೊಂಡಿದ್ದಾರೆ.

ಅಲ್ಲದೇ ಇದನ್ನು ತಿಂದು ಆರೋಗ್ಯದ ಮೇಲೆ ದುಷ್ಪರಿಣಾಮ ಆದರೆ ಎಂದು ಆತಂಕಗೊಳ್ಳುತ್ತಿದ್ದಾರೆ.  ಕೂಡಲೇ ಗುಣಮಟ್ಟದ ಅಕ್ಕಿ ವಿತರಣೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.  ಪಡಿತರ ಅಕ್ಕಿ ಜೊತೆ ಪ್ಲಾಸ್ಟಿಕ್ ಮತ್ತು ರಬ್ಬರ್ ಅಕ್ಕಿ ಮಾದರಿ ಕಾಳು ಮಿಕ್ಸ್ ಮಾಡಿರೊರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.