ಮಂಗಳೂರು(ಜೂ.11): ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮ ಬುಧವಾರದಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ. ಸರ್ಕಾರದ ನಿರ್ದೇಶನದಂತೆ ಪಿಲಿಕುಳ ಜೈವಿಕ ಉದ್ಯಾನ, ಲೇಕ್‌ ಗಾರ್ಡನ್‌, ಕುಶಲಕರ್ಮಿಗಳ ಗ್ರಾಮ, ಗುತ್ತುಮನೆ ಇತ್ಯಾದಿ ವಿಭಾಗಗಳಿಗೆ ಸಂದರ್ಶಕರಿಗೆ ಅವಕಾಶ ಒದಗಿಸಲಾಗಿದೆ.

370 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಪಿಲಿಕುಳ ನಿಸರ್ಗಧಾಮ ಮಾಚ್‌ರ್‍ 25ರಿಂದ ಲಾಕ್‌ಡೌನ್‌ ಜಾರಿಯಾದ ಬಳಿಕ ಮುಚ್ಚಲ್ಪಟ್ಟಿತ್ತು. ಜನರ ಓಡಾಟ ಇಲ್ಲದೆ ಇದ್ದುದರಿಂದ ಅಲ್ಲಿನ ವನ್ಯ ಪ್ರಾಣಿಗಳು ಲವಲವಿಕೆಯಿಂದ ಕೂಡಿದ್ದವು. ಇದೀಗ ಮತ್ತೆ ಜನರ ಓಡಾಟ ಆರಂಭವಾಗಿದೆ. ಸಾರ್ವಜನಿಕರಿಗೆ ನಿಸರ್ಗಧಾಮವನ್ನು ತೆರೆಯುವ ಮೊದಲು ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಲ್ಲಿ ನಿರಂತರ ಮಳೆ, ಮುಂದಿನ 4 ದಿನ ಆರೆಂಜ್‌ ಅಲರ್ಟ್‌

ಬುಧವಾರ ಮೊದಲ ದಿನವಾಗಿದ್ದರಿಂದ ಸಂದರ್ಶಕರ ಸಂಖ್ಯೆ ಹೆಚ್ಚಿರಲಿಲ್ಲ. ಬುಧವಾರ ಬೆಳಗ್ಗಿನಿಂದ ಮಳೆಯಾಗುತ್ತಿದ್ದುದೂ ಇದಕ್ಕೆ ಕಾರಣ ಇರಬಹುದು. ಮುಂದಿನ ದಿನಗಳಲ್ಲಿ ಸಂದರ್ಶಕರ ಸಂಖ್ಯೆ ಸುಧಾರಿಸುವ ಸಾಧ್ಯತೆಯಿದೆ ಎಂದು ಪಿಲಿಕುಳ ಜೈವಿಕ ಉದ್ಯಾನ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು

ಪ್ರವಾಸಿಗರು 6 ಅಡಿ ಭೌತಿಕ ದೂರವನ್ನು ಕಾಯ್ದುಕೊಳ್ಳುವುದು ಕಡ್ಡಾಯ. ಮಾಸ್ಕ್‌ ಧರಿಸದೇ ಇದ್ದರೆ ಉದ್ಯಾನವನಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಎಲ್ಲರನ್ನೂ ಥರ್ಮಲ್‌ ಸ್ಕ್ಯಾ‌ನಿಂಗ್‌ಗೆ ಒಳಪಡಿಸಿಯೇ ಒಳಬಿಡಲಾಗುತ್ತದೆ. ಜ್ವರ, ಕೆಮ್ಮು, ಶೀತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಪ್ರವೇಶವಿಲ್ಲ. ಮಕ್ಕಳು ಸರೋವರದಲ್ಲಿ ಆಟವಾಡಲು ಅನುಮತಿಯಿಲ್ಲ ಎಂದು ಅವರು ಹೇಳಿದ್ದಾರೆ.