ಬೆಂಗಳೂರು [ಆ.15]: ರಾಜ್ಯ ರಾಜಕೀಯ ಮತ್ತು ಪೊಲೀಸ್‌ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಪೋನ್‌ ಕದ್ದಾಲಿಕೆ ಪ್ರಕರಣದ ಸಂಬಂಧ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಶಿಫಾರಸು ಮಾಡಿದ್ದಾರೆ. 

ಈ ಪ್ರಕರಣದ ಸಂಬಂಧ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಸಲ್ಲಿಸಿದ ಮಧ್ಯಂತರ ವಿಚಾರಣೆ ವರದಿಯಲ್ಲಿ ಸ್ವತಂತ್ರ ಸಂಸ್ಥೆಯಿಂದ ವಿಚಾರಣೆ ಮುಂದುವರಿಕೆಗೆ ಕೋರಿದ್ದರು. 

'ಫೋನ್ ಟ್ಯಾಪಿಂಗ್ ಮಾಡೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು'

ಇದಕ್ಕೆ ಸಮ್ಮತಿಸಿದ ಭಾಸ್ಕರ್‌ ರಾವ್‌ ಅವರು, ವಿಚಾರಣಾ ವರದಿ ಜೊತೆ ಟಿಪ್ಪಣಿ ಬರೆದು ಡಿಜಿಪಿ ಅವರಿಗೆ ಕಳುಹಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ