Asianet Suvarna News Asianet Suvarna News

ಸಾರ್ವಜನಿಕ ಸ್ಥಳದಲ್ಲಿ‌ ಮದ್ಯಸೇವನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕುಡುಕರಿಂದ‌ ವ್ಯಕ್ತಿ ಮೇಲೆ ಹಲ್ಲೆ!

ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ನಾಲ್ಕೈದು ಜನ ಕುಡುಕರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಕೂಡು ಪಟ್ಟಣದಲ್ಲಿ ನಡೆದಿದೆ.

person was attacked by a drukens in harakalagudu at hassan rav
Author
First Published Sep 13, 2023, 1:37 PM IST

ಹಾಸನ (ಸೆ.13) :ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ನಾಲ್ಕೈದು ಜನ ಕುಡುಕರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಕೂಡು ಪಟ್ಟಣದಲ್ಲಿ ನಡೆದಿದೆ.

ವಸಂತ ಕುಮಾರ ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ವ್ಯಕ್ತಿ. ಅರಕಲಗೂಡು ಪಟ್ಟಣದ ಮಲ್ಲಿಪಟ್ಟಣ ರಸ್ತೆಯ ಎಂಎಸ್ಐಎಲ್ ಮದ್ಯದಂಗಡಿ ಬಳಿ ನಡೆದಿರೋ ಘಟನೆ. ಮದ್ಯದಂಗಡಿಯ ಪಕ್ಕದಲ್ಲೆ ಇರುವ ಬಿಲ್ಡಿಂಗ್‌ನ ಮುಂಭಾಗ ಕಾರು ನಿಲ್ಲಿಸಿ ಮದ್ಯಸೇವನೆ ಮಾಡುತ್ತಿದ್ದ ಪುಂಡರು. ಕಾರಿನಲ್ಲಿ ಕುಳಿತು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಬಾರದು ಎಂದಿದ್ದ 

ಬಿಲ್ಡಿಂಗ ಮಾಲೀಕ ವಸಂತ ಕುಮಾರ. ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪಾನಮತ್ತ ಪುಂಡರು ನಾಲ್ಕೈದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಬಿಲ್ಡಿಂಗ್ ಮಾಲೀಕ ವಸಂತಕುಮಾರ್ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆ ಮಾಡಿರುವ ಪುಂಡರನ್ನು ಬಂಧಿಸಬೇಕು ಹಾಗೆಯೇ ಇಲ್ಲಿಂದ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

'ಬೆಳಗ್ಗೆ ಮತ್ತು ಸಂಜೆ ಫ್ರೀ ನೈಂಟಿ ಕೊಡಿ..' ಕುಡುಕರಿಂದ ಸರ್ಕಾರಕ್ಕೆ ಡಿಮಾಂಡ್‌!

Follow Us:
Download App:
  • android
  • ios