ವಿಜಯಪುರ(ಮಾ.16): ಮೆಕ್ಕಾದಿಂದ ವಿಜಯಪುರಕ್ಕೆ ಮರಳಿದ ಯುವಕನೊಬ್ಬನಲ್ಲಿ ಕೊರೋನಾ ಲಕ್ಷಣಗಳ ಶಂಕೆ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವ ಮಾದರಿ (ಥ್ರೋಟ್‌ ಸ್ಕ್ವಾಬ್)ಯನ್ನು ತಪಾಸಣೆಗಾಗಿ ಬೆಂಗಳೂರಿಗೆ ರವಾನಿಸ​ಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ತಿಳಿಸಿದ್ದಾರೆ. 

ಕೊರೋನಾ ಇದ್ದರೂ ಅಮೆರಿಕದ ರಾಜ್ಯದಲ್ಲಿ ನಮಸ್ತೆಗೆ ನಿಷೇಧ!

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 5ರಂದು 28 ವರ್ಷದ ಯುವಕನೋರ್ವ ಮೆಕ್ಕಾದಿಂದ ಮರಳಿದ್ದು, ಆತನ ತಂದೆ-ತಾಯಿ ಧೈರ್ಯ ತುಂಬಿ ಆತನ ಪರೀಕ್ಷೆಗೆ ಒಪ್ಪಿಸಿದ್ದಾರೆ. ಈಗಾಗಲೇ ಈ ಯುವಕನನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ವಿಶೇಷ ಐಸೋಲೇಷನ್‌ ಘಟಕದಲ್ಲಿ ಇರಿಸಲಾಗಿದೆ. ಕೊರೋನಾ ಲಕ್ಷಣಗಳ ಶಂಕೆ ಹಿನ್ನೆಲೆ ಆತನ ಗಂಟಲು ದ್ರವ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸ​ಲಾ​ಗಿದೆ. ವರದಿ ಬಂದ ನಂತರವೇ ಎಲ್ಲ ವಿಷಯ ತಿಳಿಯಲಿದೆ ಎಂದರು.

ಹಾವೇರಿಗೂ ಕೊರೋನಾ ಕಾಟ: ಇಬ್ಬರಲ್ಲಿ ಕೊರೋನಾ ಲಕ್ಷಣ

ವಿದೇಶದಿಂದ ಬಂದಿರುವ ಒಟ್ಟು ಐದು ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಅದರಲ್ಲಿ ನಾಲ್ಕು ಜನರ ರಿಪೋರ್ಟ್‌ ನೆಗೆಟಿವ್‌ ಬಂದಿದ್ದು, ಇನ್ನುಳಿದ ಜನರ ಸ್ಯಾಂಪಲ್‌ ವರದಿ ಇನ್ನೂ ಬರ​ಬೇ​ಕಿದೆ ಎಂದರು.