ಕೊರೋನಾ ಇದ್ದರೂ ಅಮೆರಿಕದ ರಾಜ್ಯದಲ್ಲಿ ನಮಸ್ತೆಗೆ ನಿಷೇಧ!
ಕೊರೋನಾ ಇದ್ದರೂ ಅಮೆರಿಕದ ರಾಜ್ಯದಲ್ಲಿ ನಮಸ್ತೆಗೆ ನಿಷೇಧ!| ‘ಯೋಗ ಮಸೂದೆ’ಯನ್ನು ಅಂಗೀಕರಿಸಿ ಯೋಗ ಮೇಲಿನ ನಿಷೇಧ ತೆರವು
ವಾಷಿಂಗ್ಟನ್[ಮಾ.16]: ಕೊರೋನಾ ಹರಡುವ ಭೀತಿಯಿಂದಾಗಿ ವಿಶ್ವ ನಾಯಕರು ಅತಿಥಿಗಳನ್ನು ಸ್ವಾಗತಿಸಲು ಭಾರತೀಯ ಸಂಪ್ರದಾಯವಾದ ನಮಸ್ತೆಗೆ ಮೊರೆ ಹೋದರೂ, ಅಮೆರಿಕದ ರಾಜ್ಯವೊಂದು ನಮಸ್ತೆಗೆ ನಿಷೇಧ ಹೇರಿದೆ.
1993ರಲ್ಲಿ ಅಮೆರಿಕದ ಅಲಬಾಮ ರಾಜ್ಯದ ಶಿಕ್ಷಣ ಮಂಡಳಿ, ಯೋಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ಯಾನ ಮಾಡುವುದಕ್ಕೆ ನಿಷೇಧ ಹೇರಿತ್ತು. ಆದರೆ ಈಗ ಹೊಸ ‘ಯೋಗ ಮಸೂದೆ’ಯನ್ನು ಅಂಗೀಕರಿಸಿ ಯೋಗ ಮೇಲಿನ ನಿಷೇಧ ತೆರವುಗೊಳಿಸಿದೆ.
ಆದರೆ ಈ ಮಸೂದೆಯಲ್ಲಿ ನಮಸ್ತೆ ಮೇಲೆ ನಿಷೇಧ ಹೇರಿದೆ. ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮಸ್ತೆಗೆ ಮೊರೆ ಹೋದರೂ, ಅಲ್ಲಿನ ರಾಜ್ಯವೊಂದು ನಮಸ್ತೆಗೆ ನಿಷೇಧ ಹೇರಿದ್ದು ಅಚ್ಚರಿಗೆ ಕಾರಣವಾಗಿದೆ.