Asianet Suvarna News Asianet Suvarna News

ನಕಲಿ ಪಾಸ್‌ಪೋರ್ಟ್‌ ಬಳಸಿ 25 ದೇಶ ಸುತ್ತಿದ್ದ ತೀರ್ಥಹಳ್ಳಿ ವ್ಯಕ್ತಿ ಅರೆಸ್ಟ್‌

ನಕಲಿ ಪಾಸ್‌ಪೋರ್ಟ್ ಇಟ್ಟುಕೊಂಡು 25 ದೇಶ ಸುತ್ತಿದ ಭೂಪ ಕಡೆಗೂ ಪೊಲೀಸರ ಅತಿಥಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಷಫಿ ಅಹ್ಮದ್‌ ಬಂಧಿತ ಆರೋಪಿ.

Person From Thirthahalli Arrested Who Visited 25 Countries Using Fake Passport
Author
Bengaluru, First Published Nov 27, 2019, 8:46 AM IST

ಶಿವಮೊಗ್ಗ (ನ. 27): ನಕಲಿ ಪಾಸ್‌ಪೋರ್ಟ್‌ ಬಳಸಿ 25ಕ್ಕೂ ಹೆಚ್ಚು ದೇಶ ಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹಾಜೀ ಕಾಂಪ್ಲೆಕ್ಸ್‌ನ ಮಾಲೀಕ, ಹಾಜೀ ಕೈಮರ ಅವರ ಹಿರಿಯ ಪುತ್ರ ಷಫಿ ಅಹಮದ್‌ ಬಂಧಿತ ಆರೋಪಿ. ಜಿಲ್ಲಾ ಅಪರಾಧ ದಳದ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 5 ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಿಜೆಪಿ 8 ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡ್ತೀರಾ?

ಷಫಿ ತನ್ನ ತಂದೆ-ತಾಯಿ ಹೆಸರು ಮರೆಮಾಚಿ ಗೋವಾ ನಿವಾಸಿಗಳ ಹೆಸರು ಬಳಸಿ ಪಾಸ್‌ಪೋರ್ಟ್‌ ಪಡೆದಿದ್ದಾನೆ. ಈ ಪಾಸ್‌ಪೋರ್ಟ್‌ ಮೂಲಕ 25ಕ್ಕೂ ಹೆಚ್ಚಿನ ಮುಸ್ಲಿಂ ರಾಷ್ಟ್ರಗಳಲ್ಲಿ ಸಾಕಷ್ಟುವರ್ಷಗಳಿಂದ ಸಂಚರಿಸಿದ್ದಾನೆ. ತಿಂಗಳ ಹಿಂದೆ ಷಫಿ ಸಹೋದರ ಜಬ್ಬಾರ್‌ ವಾಸವಾಗಿರುವ ಸುರಾನಿ ಗ್ರಾಮದಲ್ಲಿ ಉಪಗ್ರಹ ಚಾಲಿತ ಫೋನ್‌ ಬಳಕೆಯಾದ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿತ್ತು.

ಆ ಸಮಯದಲ್ಲೇ ಷಫಿಯ ಶಂಕಾಸ್ಪದ ಪ್ರವಾಸ ಮತ್ತು ವ್ಯವಹಾರಗಳ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿತ್ತು. ಅದರಂತೆ ವಿದೇಶದಲ್ಲಿದ್ದ ಷಫಿಯನ್ನು ವಾಪಸ್‌ ಹುಟ್ಟೂರಿಗೆ ಕರೆಸಿಕೊಂಡು ಸೋಮವಾರ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಷಫಿಯನ್ನು ಈಗ ಹೆಚ್ಚಿನ ವಿಚಾರಣೆಗಾಗಿ ಗೋವಾಗೆ ಕರೆದೊಯ್ಯಲಾಗಿದೆ.

ಅಧಿಕಾರಿಗಳೇ ಮುಂದೆ ನಿಂತು ಕೆರೆ ಒಡೆಸಿದರು: ಪ್ರತ್ಯಕ್ಷದರ್ಶಿ

ಎರ​ಡು ವರ್ಷದ ಹಿಂದೆ ಇಸ್ಲಾಂ ಧರ್ಮ ಪ್ರಚಾರಕ್ಕಾಗಿ ಉತ್ತರ ಭಾರತದ ಕೆಲ ರಾಜ್ಯಗಳಿಗೆ ತೆರಳಿದ್ದಾಗ, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಷಫೀ ತಂದೆ ಹಾಜೀ ಕೈಮರ ಬಾಪೂ ಕಣ್ಮರೆಯಾಗಿದ್ದರು.

Follow Us:
Download App:
  • android
  • ios