ಬಾಗಲಕೋಟೆ(ಅ.29): ತಂದೆಯ ಅಸ್ತಿ ಬಿಡಲು ಹೋದ ಮಗ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿ ಬುಧವಾರ ಸಂಭವಿಸಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿ ಮಹಾಂತೇಶ ಯಾದವ (45) ಮೃತ ವ್ಯಕ್ತಿ. ಮಲಪ್ರಭಾ ನದಿಯಲ್ಲಿ ಅಸ್ತಿ ಬಿಡಲು ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. 

ಇಳಕಲ್ಲನಲ್ಲಿ ಪಿಗ್ಮಿ ಸಂಗ್ರಹಕಾರನ ಕೊಲೆ: ಕಾರಣ..?

ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ನದಿಯಲ್ಲಿನ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.