ಇಳಕಲ್ಲ(ಅ.29): ನಗರದ ಹುಚನೂರ ಕ್ರಾಸ್‌ ಹತ್ತಿರ ವ್ಯಕ್ತಿಯೋರ್ವನ ಕೊಲೆ ಮಾಡಿದ ಘಟನೆ ಬುಧವಾರ ಸಂಭವಿಸಿದೆ. ನಗರದ ನಿವಾಸಿ, ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಬಸವರಾಜ ದೊಡ್ಡಪ್ಪ ಬಿರಾದಾರ (42) ಕೊಲೆಗೀಡಾದ ದುರ್ದೈವಿ. 

ಈತ ಇಳಕಲ್ಲ ನಗರದ ಬಿಡಿಸಿಸಿ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಹಕಾರನಾಗಿ ಕಾರ್ಯ ನಿರ್ವಹಿಸುತಿದ್ದನು ಎಂದು ತಿಳಿದು ಬಂದಿದೆ. ವ್ಯಕ್ತಿ ಕೊಲೆ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. 

ಬೆಂಗಳೂರಿನಲ್ಲಿ ಕೊಲೆ, ಉತ್ತರ ಪ್ರದೇಶದಲ್ಲಿ ಹಂತಕ: ಡಿಎನ್‌ಎ ಟೆಸ್ಟ್‌ನಿಂದ ಸುಳಿವು!

ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಜಗಲಾಸರ್‌, ಸಿಪಿಐ ಅಯ್ಯನಗೌಡ, ನಗರ ಪಿಎಸ್‌ಐ ರಮೇಶ ಜಲಗೇರಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಇಳಕಲ್ಲ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.