Asianet Suvarna News Asianet Suvarna News

ಹಾವು ಕಚ್ಚಿದ್ರೆ ಏನಾಗಲ್ಲ ಎಂದು ಹುಚ್ಚಾಟ ಆಡಿದವ ಹಾವು ಕಚ್ಚಿ ಸಾವು!

ಹಾವುಗಳನ್ನು ಹಿಡಿದು ಅವುಗಳೊಂದಿಗೆ ಸಾರ್ವಜನಿಕವಾಗಿ ಹುಚ್ಚಾಟ ಮೆರೆಯುತ್ತಿದ್ದ ವ್ಯಕ್ತಿಗೆ ಹಾವು ಕಚ್ಚಿ ಸಾವು| ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದ ಘಟನೆ|     

Person Dies for Snake Bite in Ron in Gadag District grg
Author
Bengaluru, First Published Feb 9, 2021, 9:02 AM IST

ರೋಣ(ಫೆ.09): ಕುಷ್ಟರೋಗ ಇದ್ದವರಿಗೆ ಹಾವು ಕಚ್ಚುವುದಿಲ್ಲ, ಕಚ್ಚಿದರೂ ವಿಷ ತಗುಲುವುದಿಲ್ಲ ಎಂಬ ಹುಚ್ಚು ನಂಬಿಕೆಯಿಂದ ಕಂಡ ಕಂಡ ಹಾವುಗಳನ್ನು ಹಿಡಿದು ಅವುಗಳೊಂದಿಗೆ ಸಾರ್ವಜನಿಕವಾಗಿ ಹುಚ್ಚಾಟ ಮೆರೆಯುತ್ತಿದ್ದ ಪಟ್ಟಣದ ಕಲ್ಯಾಣನಗರ ಬಡಾವಣೆ ನಿವಾಸಿ ಮಕ್ತುಂಸಾಬ್‌ ರಾಜೆಖಾನ(70) ಕೊನೆಗೂ ಹಾವು ಕಚ್ಚಿಸಿಕೊಂಡೇ ಸಾವಿಗೀಡಾಗಿದ್ದಾರೆ.

ಒಂದೂವರೆ ವರ್ಷದ ಹಿಂದೇ ತನಗೆ ಅಂಗವಿಕಲರ ಮಾಸಾಶನ ಪಾವತಿ ವಿಳಂಬವಾಗಿದೆ ಎಂದು ನಾಗರ ಹಾವೊಂದನ್ನು ಕೊರಳಲ್ಲಿ ಹಾಕಿ ಪಟ್ಟಣದಾದ್ಯಂತ ಸುತ್ತಾಡಿ, ಬಳಿಕ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಭಾನುವಾರ ಸಂಜೆಯೂ ಪಟ್ಟಣದ ಮಿನಿ ವಿಧಾನಸೌಧ ಹತ್ತಿರ ಅಡಗಿದ್ದ ನಾಗರಹಾವನ್ನು ಮಕ್ತುಂಸಾಬ್‌ ಹಿಡಿದು ಪಟ್ಟಣದ ವಿವಿಧೆಡೆ ಸುತ್ತಾಡಿದ್ದಾರೆ.

ಈ ಗ್ರಾಮಸ್ಥರಿಗೆ ಹಳ್ಳದ ದಂಡೆಯೇ ರುದ್ರಭೂಮಿ: ಶವಸಂಸ್ಕಾರಕ್ಕೆ ಪರದಾಟ..!

ಈ ವೇಳೆ ಹಾವು ಮಕ್ತುಂಸಾಬ್‌ ಕಚ್ಚಿದೆ. ಹೀಗಿದ್ದಾಗ್ಯೂ ಆಸ್ಪತ್ರೆಗೆ ತೆರಳದ ಅವರು, ನನಗೆ ಹಾವು ಕಚ್ಚಿದರೆ ವಿಷ ಏರೊಲ್ಲ, ಏನೂ ಆಗೊಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ನಿಧಾನವಾಗಿ ವಿಷ ಏರುತ್ತಿದಂತೆ, ಸಾರ್ವಜನಿಕರೇ ಮಕ್ತುಂಸಾಬನನ್ನು ಪಟ್ಟಣದ ಡಾ.ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಕ್ತುಂಸಾಬ ಮೃತಪಟ್ಟಿದ್ದಾರೆ.
 

Follow Us:
Download App:
  • android
  • ios