ಹಾವೇರಿ(ನ.26): ತುಂಗಭದ್ರಾ ನದಿಯಲ್ಲಿ ವ್ಯಕ್ತಿಯೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾವನೂರು ಗ್ರಾಮದ ಬಳಿ ಇಂದು(ಗುರುವಾರ) ನಡೆದಿದೆ. ಹೊನ್ನಪ್ಪ ಅನ್ವೇರಿ (30) ಮೃತ ದುರ್ದೈವಿಯಾಗಿದ್ದಾನೆ. 

ಮೃತ ಹೊನ್ನಪ್ಪ ಅನ್ವೇರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮಾಪುರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು: ಕೃಷಿ ಸಚಿವ ಪಾಟೀಲ

ನೀರು ಪಾಲಾದ ಹೊನ್ನಪ್ಪ ಅನ್ವೇರಿ ಶೋಧಕಾರ್ಯ ಆರಂಭಿಸಲಾಗಿದೆ. ಮೀನು ಹಿಡಿಯಲು ಹೋಗಿ ನದಿ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.