ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು: ಕೃಷಿ ಸಚಿವ ಪಾಟೀಲ

First Published Nov 25, 2020, 12:47 PM IST

ಹಿರೇಕೆರೂರ(ನ.25): ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು. ಜೀವನದಲ್ಲಿ ದುಡಿಯಲಾರದ ಸೋಮಾರಿಗಳು, ದುಡಿದು ಹೆಂಡಿರು ಮಕ್ಕಳನ್ನು ಸಾಕಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ನಿಜವಾಗಿ ಭೂಮಿ ತಾಯಿಯನ್ನು ನಂಬಿದವರು ಇಂತಹ ಹೀನ ಕೃತ್ಯ ಮಾಡುವದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

ಪಟ್ಟಣದಲ್ಲಿ ನಬಾರ್ಡ್‌, ಆರ್‌ಐಡಿಎಫ್‌ 23 ಯೋಜನೆಯಡಿ ನೂತನವಾಗಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಟನಾ ಕಾರ್ಯಕ್ರಮ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ) ಉದ್ಘಾಟನಾ ಮತ್ತು ಕೃಷಿ ಯಂತ್ರೋಪಕರಣಗಳ ಹಾಗೂ ತುಂತುರು ನೀರಾವರಿ ಘಟಕಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರನ್ನು ಕುರಿತು ಮಾತನಾಡಿದರು.

ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಇಲ್ಲಿ ಯಾವುದೆ ಶಹಭಾಷಗಿರಿ ಪಡೆಯಲು ಸಾಧ್ಯವಿಲ್ಲ. ಆದರೂ ಸಹ ನಾನು ಒಬ್ಬ ರೈತನ ಮಾಗನಾಗಿದ್ದರಿಂದ ಈ ಇಲಾಖೆಯನ್ನು ತೆಗೆದುಕೊಂಡಿದ್ದೇನೆ. ರೈತ ಎಂದೂ ಬಿಕ್ಷೆ ಬೇಡಬಾರದು, ದೇಶಕ್ಕೆ ಅನ್ನ ನೀಡುವಂತವರು ಅವರ ಕಷ್ಟನಷ್ಟ ಮತ್ತು ನೋವನ್ನು ಕಡಿಮೆ ಮಾಡಬೇಕು ಎನ್ನುವುದೇ ನನ್ನ ಆಶಯ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಎಲ್ಲ ಇಲಾಖೆಗಳು ಕಾರ್ಯಕ್ಷಮತೆಯನ್ನು ಕಳೆದುಕೊಂಡಿದ್ದರೂ ಸಹ ಕೃಷಿ ಇಲಾಖೆ ಮಾತ್ರ ಸದಾ ಚಟುವಟಿಕೆಯಿಂದ ಇದ್ದು ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ನಿಭಾಯಿಸಿ ರೈತರು ಮುಂಗಾರು ಬೆಳೆಯನ್ನು ಪಡೆಯುವಂತೆ ಮಾಡಿದ್ದು ಇಲಾಖೆಯ ಹೆಮ್ಮೆಯ ವಿಷಯವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ರಾಜ್ಯದ ಮೂವತ್ತೂ ಜಿಲ್ಲೆಗೆ ಪ್ರವಾಸ ಮಾಡಿ ರೈತರ ಸಮಸ್ಯೆಗೆ ಪರಿಹಾರ ನೀಡಲಾಯಿತು. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಕೊರೋನಾ ವಾರಿಯರ್ಸ್‌ ತರಹ ಕೆಲಸ ಮಾಡಿ ಪ್ರತಿ ಹಂತದಲ್ಲೂ ರೈತರಿಗೆ ಸ್ಪಂದಿಸಿದ್ದಾರೆ ಎಂದ ಸಚಿವರು.

ಕೃಷಿಕ ಇಲ್ಲ ಅಂದರೆ ಏನೂ ಇಲ್ಲ. ಆದ್ದರಿಂದ ರೈತರು ಸಮಗ್ರ ಕೃಷಿ ನೀತಿ ಅನುಸರಿಬೇಕು. ಭೂಮಿಯನ್ನು ಬಿತ್ತನೆ ಮಾಡುವ ಮುಂಚೆ ಮಣ್ಣು ಪರೀಕ್ಷೆ ಮಾಡಿಸಬೇಕು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಕೊಟ್ಟಿಗೆ ಗೊಬ್ಬರ ಉಪಯೋಗಿಸಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತದೆ, ಇಳುವರಿ ಕಡಿಮೆಯಾಗುತ್ತದೆ. ಇಂದಿನ ದಿನಮಾನಗಳಲ್ಲಿ ಕೇವಲ ಒಂದು ಬೆಳೆಯನ್ನು ನಂಬಿಕೊಂಡರೆ ಬದುಕುವುದು ಕಷ್ಟ, ಮಿಶ್ರ ಬೆಳೆ ಪದ್ಧತಿ, ಆಧುನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿಯತ್ತ ಗಮನ ಹರಿಸಬೇಕು. ರೈತರು ಭೂಮಿಯಲ್ಲಿ ಬೆಳೆ ಬೆಳೆಯಲು ಸಲಹೆಗಳನ್ನು ಪಡೆಯಲು ಹತ್ತಿರದ ಆಗ್ರೋ ಕೇಂದ್ರಗಳಿಗೆ ಹೋಗದೆ ಕೃಷಿ ಅಧಿಕಾರಿಗಳ ಸಹಾಯ ಪಡೆಯಬೇಕು.

ಮುಂದಿನ ದಿನಗಳಲ್ಲಿ ನಾಡಿನ ಅನ್ನಾದಾತರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ಪ್ರತಿ ಗ್ರಾಪಂಗೆ ಒಂದು ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ಸಂಜಿವಿನಿ ಯೋಜನೆಯಡಿಯಲ್ಲಿ ಮೊಬೈಲ್‌ ಮಣ್ಣು ಪರೀಕ್ಷೆ ವಾಹನ, ಈ ಯೋಜನೆ ಈಗಾಗಲೇ ಕೊಪ್ಪಳದಲ್ಲಿ ಅನಿಷ್ಠಾನಗೊಂಡಿದ್ದು ಇಲ್ಲಿಯೂ ಸಧ್ಯದಲ್ಲಿ ಅನುಷ್ಠಾನಗೊಳ್ಳಲಿದೆ.

ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರ ಧಾರೆ) ಕೃಷಿ ಯಂತ್ರೋಪಕಣ ಖರೀದಿಗೆ ಸಬ್ಸಿಡಿ, ಎನ್‌ಎಂಎಸ್‌ಎ ಯೋಜನೆಯಡಿಯಲ್ಲಿ ಹಸು ನೀಡುವ ಯೋಜನೆ, ಕುರಿ ಸಾಕಾಣಿಕೆ, ಗ್ರಾಮೀಣ ಯಂತ್ರೋಪಕರಣ ಘಟಕ ಯೋಜನೆ ಗ್ರಾಮೀಣ ಮಣ್ಣು ಪರೀಕ್ಷಾ ಪ್ರಯೋಗಾಲಯ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರೈತರು ಎಂತಹ ಸಂದರ್ಭ ಬಂದರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಬೇಡಿ. ನಿಮ್ಮ ಜೊತೆ ಸರ್ಕಾರ ಇದೇ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲಾಗಿರಿ ಎಂದು ಮನವಿ ಮಾಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸೃಷ್ಟಿಪಾಟೀಲ, ಹಾವೇರಿ ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಶಿವಾನಂದ ಕನ್ನಪ್ಪಳವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಜಿಪಂ ಸದಸ್ಯ ಶಿವರಾಜ ಹರಿಜನ, ನೀಲಪ್ಪ ಈಟೇರ, ಸುಮಿತ್ರಾ ಪಾಟೀಲ, ಸುಧಾ ಚಿಂದಿ, ಜಿ. ಶಿವನಗೌಡ್ರ, ಜಿ. ಮಂಜುನಾಥ, ಸ್ಪೂರ್ತಿ ಜಿ.ಎಸ್‌, ಎಂ.ವಿ. ಮಂಜುನಾಥ, ಮಹೇಂದ್ರ ಬಡಳ್ಳಿ, ಎಸ್‌.ಎಸ್‌. ಪಾಟೀಲ ಇದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?