ಶೇ. 3 ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ
: ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆಯನ್ನು ಶೇ. 3 ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪುರಸಭೆಯ ಆಡಳಿತ ಮಂಡಳಿ ಯಾವ ಕಾರಣಕ್ಕೆ ಈ ನಿರ್ಧಾರ ಮಾಡಿದೆ ಎಂದು ಜನ ಸಾಮಾನ್ಯರು ಚುನಾಯಿತ ವರ್ಗವನ್ನು ಪ್ರಶ್ನೆ ಮಾಡುತಿದೆ.
ಟಿ. ನರಸೀಪುರ : ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆಯನ್ನು ಶೇ. 3 ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪುರಸಭೆಯ ಆಡಳಿತ ಮಂಡಳಿ ಯಾವ ಕಾರಣಕ್ಕೆ ಈ ನಿರ್ಧಾರ ಮಾಡಿದೆ ಎಂದು ಜನ ಸಾಮಾನ್ಯರು ಚುನಾಯಿತ ವರ್ಗವನ್ನು ಪ್ರಶ್ನೆ ಮಾಡುತಿದೆ.
ಸೋಮವಾರ ಪುರಸಭೆ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆಯನ್ನು ಏಕಾಏಕಿ ಶೇ. 3ರಷ್ಟು ಹೆಚ್ಚಳ ಮಾಡಿತು. ಈ ಬಗ್ಗೆ ಸಾರ್ವಜನಿಕರು ಪುರಸಭೆ ಆಡಳಿತ ಮಂಡಳಿಯ ತೀರ್ಮಾನಕ್ಕೆ ಹಲವಾರು ರೀತಿಯಲ್ಲಿ ಬೇಸರ ವ್ಯಕ್ತಪಡಿಸುವುದರ ಜೊತೆಗೆ ಪುರಸಭೆಯಲ್ಲಿ ಆಗುತ್ತಿರುವ ಸೋರಿಕೆಯ ಬಗ್ಗೆಯೂ ಸಹ ಟೀಕೆ ಮಾತುಗಳನ್ನ ಆಡುವ ಮೂಲಕ ಹಿಡಿ ಶಾಪ ಹಾಕುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯ ಆಲಗೂಡು, ಭೈರಾಪುರ, ಶ್ರೀರಾಮಪುರ ಬೀದಿ, ವಿನಾಯಕ ಕಾಲೋನಿ, ಇಂದ್ರ ಕಾಲೋನಿ, ಪೇಟೆಕೇರೆ, ಹಳೇ ಕುರುಬರ ಬೀದಿ ಸೇರಿದಂತೆ ಶೇ. 70 ಭಾಗ ಬಡವರೇ ಇದ್ದಾರೆ, ದಿನನಿತ್ಯ ಕೂಲಿ ನಾರಿ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಎಷ್ಟೊಜನ ತಾವಿರುವ ಜೊಪಡಿಗಳಿಗೆ ಈಗಿರುವ ಕಂದಾಯವನ್ನೆ ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ, ಇಂತಹ ಪರಿಸ್ಥಿತಿ ಇರುವಾಗ ಆಸ್ತಿ ತೆರೆಗೆಯನ್ನು 3 ರಷ್ಟುಹೆಚ್ಚಳ ಮಾಡುವ ಅವಶ್ಯಕತೆ ಏನಿತ್ತು, ಇವರಿಗೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಈಗಲೂ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಾಗುತಿಲ್ಲ, ಸ್ವಚ್ಛತೆ ಇಲ್ಲ, ಬೀದಿ ದೀಪ ವ್ಯವಸ್ಥೆ ಸರಿಯಾಗಿ ಇಲ್ಲ ಪಟ್ಟಣದ ರಸ್ತೆಗಳಂತು ಹೇಳ ತೀರದಾಗಿದೆ, ಪಪಂಯಿಂದ ಮೇಲ್ದರ್ಜೆಗೇರಿ 5 ವರ್ಷ ಕಳೆದರು ಅತ್ಯವಶ್ಯಕ ದಿನನಿತ್ಯದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗದ
ಪುರಸಭೆ ಆಡಳಿತ ಮಂಡಳಿ ಯಾವ ಪುರುಷಾರ್ಥಕ್ಕೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದೆ ಎಂದು ಶಪಿಸುತ್ತಿದ್ದಾರೆ.
ಆದಾಯದ ಮೂಲ ಇದೇ ಪ್ರಯೋಜನ ಇಲ್ಲ : ಪುರಸಭೆಗೆ ತನ್ನದೇ ಆದ ಆದಾಯದ ಮೂಲ ಇದೆ, ಪಟ್ಟಣದ ಲಿಂಕ್ ರಸ್ತೆ ಮತ್ತು ಖಾಸಗಿ ಬಸ್ ನಿಲ್ದಾಣ ಹಾಗೂ ಹಳೇ ಮಾರುಕಟ್ಟೆರಸ್ತೆಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ, ಇವುಗಳ ಬಾಡಿಗೆ ಸರಿಯಾಗಿ ವಸೂಲಿ ಮಾಡುತಿಲ್ಲ, ಇದಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ ಪೆಟ್ರೋಲ್ ಬಂಕ್‌ಗಳು, ಫ್ಯಾಕ್ಟರಿ, ಲಾಡ್ಜ್‌ಗಳು, ಕ್ಲಬ…, ವೈನ್‌ಸ್ಟೋರ್, ಚಿತ್ರ ಮಂದಿರಗಳು, ರೈಸ್ ಮಿಲ… ಸೇರಿದಂತೆ ಅನೇಕ ವಾಣಿಜ್ಯ ಅಂಗಡಿಗಳಿವೆ ಇವುಗಳ ಪರವಾನಿಗೆ ಶುಲ್ಕ ಮತ್ತು ತೆರೆಗೆಯನ್ನು ಸರಿಯಾಗಿ ವಸೂಲಿ ಮಾಡುತಿಲ್ಲ, ಇದೆಲ್ಲವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಸಾಕು ನರಸೀಪುರ ಅಭಿವೃದ್ಧಿಗೆ ಎಂದು ನಾಗರೀಕರ ಮಾತಾಗಿದೆ.
------
ಸರ್ಕಾರದ ಮಾರ್ಗದರ್ಶನ ಮತ್ತು ಆದೇಶದಂತೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ, ಆಸ್ತಿ ತೆರಿಗೆ ಪರಿಷ್ಕರಣೆ ಮಾಡದಿದ್ದರೆ ಮುಂದಿನ ಏಪ್ರಿಲ… ತಿಂಗಳಿಂದ ಯಾವುದೇ ಆಸ್ತಿಗೆ ಕಂದಾಯ ಕಟ್ಟಿಸಿಕೊಳ್ಳಲು ಅವಕಾಶ ಇರುವುದಿಲ್ಲ, ಹಾಗಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ
- ಟಿ.ಎಂ. ನಂಜುಂಡ ಸ್ವಾಮಿ, ಅಧ್ಯಕ್ಷರು, ಟಿ. ನರಸೀಪುರ ಪುರಸಭೆ.
ಸಧ್ಯದ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಅವಶ್ಯಕತೆ ಇರಲಿಲ್ಲ, ಹಾಲಿ ಇರುವ ತೆರಿಗೆಯನ್ನೆ ಮುಂದು ವರಿಸೋಣ ಎಂಬ ಸಲಹೆಯನ್ನು ಅಧ್ಯಕ್ಷರಿಗೆ ನೀಡಿದೆ. ಆದರೆ ಅಧ್ಯಕ್ಷರು ಸರ್ಕಾರದ ನಿರ್ದೇಶನವನ್ನು ಮೀರಲು ಸಾಧ್ಯವಿಲ್ಲ ಎಂದು ಹೇಳಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದ್ದಾರೆ.
- ಎಸ್.ಕೆ. ಕಿರಣ…, 23 ನೇ ವಾರ್ಡ್‌ನ ಪುರಸಭೆ ಸದಸ್ಯರು.
ಕೋವಿಡ್ ದಾಳಿಯಿಂದ ಹೈರಾಣಾಗಿರುವ ಜನತೆ, ಆಹಾರ ಪದಾರ್ಥಗಳ ಏರಿಕೆಯ ಬಿಸಿಯಲ್ಲಿ ಬೇಯುತಿರುವಾಗಲೇ ಪುರಸಭೆಯವರು ಆಸ್ತಿ ತೆರೆಗೆಯನ್ನು ಹೆಚ್ಚಳ ಮಾಡಿ ಶಾಕ್ ನೀಡಿದ್ದಾರೆ, ಇಂದಿನ ಪರಿಸ್ಥಿತಿಯಲ್ಲಿ ಶೇ. 3 ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಅವಶ್ಯಕತೆ ಇರಲಿಲ್ಲ ಒಂದು ವೇಳೆ ಸರ್ಕಾರದ ಆದೇಶದಂತೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಿದ್ದರೆ ಶೇ.1 ರಷ್ಟುಮಾಡಿದ್ದರೆ ಸಾಕಾಗಿತ್ತು.
- ರೇಣುಕಾ ನಾಗರಾಜು, ಜಿಪಂ ಮಾಜಿ ಸದಸ್ಯರು, ಆಲಗೂಡು.