'ಕೊರೋನಾ ಪರೀಕ್ಷೆ ಮಾಡುವುದು ನಿಲ್ಲಿಸಿದರೆ ಜನ ಸಾಯುತ್ತಾರೆ'
- ರಾಜ್ಯ ಸರ್ಕಾರ ಕೊರೋನಾ ಪರೀಕ್ಷೆ ಮಾಡುವುದನ್ನು ನಿಲ್ಲಿಸಿದರೆ ಭಾರೀ ಡೇಂಜರ್
- ಶಾಸಕ ಸಿ.ಎಸ್ ಪುಟ್ಟರಾಜು ಎಚ್ಚರಿಕೆ
- ಪರೀಕ್ಷೆಯನ್ನೆ ನಡೆಸದೇ ಸೋಂಕು ನಿಯಂತ್ರಣ ಹೇಗೆ ಎಂದು ಅಸಮಾಧಾನ
ಮಂಡ್ಯ (ಮೇ.21): ರಾಜ್ಯ ಸರ್ಕಾರ ಕೊರೋನಾ ಪರೀಕ್ಷೆ ಮಾಡುವುದನ್ನು ನಿಲ್ಲಿಸಿದರೆ ಮನೆ ಮನೆಯಲ್ಲಿ ಜನ ಸಾಯುತ್ತಾರೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಎಚ್ಚರಿಕೆ ನೀಡಿದರು.
ಗುರುವಾರ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಕೊರೋನಾ ನಿಯಂತ್ರಣ ಸಭೆಯಲ್ಲಿ ಮಾಯನಾಡಿದ ಅವರು ಕೊರೋನಾ ಪರೀಕ್ಷೆಯನ್ನು ಏಕೆ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಟೆಸ್ಟಿಂಗ್ ನಿಲ್ಲಿಸುವಂತೆ ಆದೇಶ ಮಾಡಿದೆಯೇ? ನಿನ್ನೆಯಿಂದ ನನ್ನ ಕ್ಷೇತ್ರದಲ್ಲಿ ಟೆಸ್ಟಿಂಗ್ ನಿಲ್ಲಿಸಲಾಗಿದೆ. ಪರೀಕ್ಷೆಯನ್ನೆ ನಡೆಸದೇ ಸೋಂಕು ನಿಯಂತ್ರಣ ಹೇಗೆ ಎಂದು ಅಸಮಾಧಾನ ಹೊರಹಾಕಿದರು.
ಪ್ರತಿದಿನ 45 ಲಕ್ಷ ಕೋವಿಡ್ ಟೆಸ್ಟ್ : ಹೆಚ್ಚಿಸಿ ಸೋಂಕಿನ ಓಟಕ್ಕೆ ಬ್ರೇಕ್
ಕೊರೋನಾ ಪರೀಕ್ಷೆ ಮಾಡಿಸುವುದಕ್ಕೆ ಶಾಸಕರಾಗಿದ್ದು ಏನು ಪ್ರಯೋಜನ ಎಂದು ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಸೇರಿದಂತೆ ಅಧಿಕಾರಿಗಳು ಸುಖಾಸುಮ್ಮನೆ ಓಡಾಡಿಕೊಮಡಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಪುಟ್ಟರಾಜು ಹೇಳಿದರು.
ಈ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ ಅವರು ಡಿಎಚ್ಇ ಡಾ. ಮಂಚೇಗೌಡ ಅವರನ್ನು ಪ್ರಶ್ನಿಸಿದಾ ಟೆಸ್ಟಿಂಗ್ ಕಿಟ್‌ಗಳು ಖಾಲಿಯಾಗಿದ್ದವು. ಇವತ್ತು ಬರಲಿವೆ. ನಾಳೆಯಿಂದಲೇ ಪರೀಕ್ಷೇ ಅರಂಭ ಮಾಡಲಾಗುವುದು ಎಂದರು. ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ ಖಾಲಿ ಆಗುವವರೆಗೂ ನೀವೇನು ಮಾಡುತ್ತಿದ್ದಿರಿ ಎಂದು ಪ್ರಶ್ನೆ ಮಾಡಿದರು. ಒಂದು ವಾರಕ್ಕೆ ಆಗುವಷ್ಟು ದಾಸ್ತಾನು ಇಟ್ಟುಕೊಳ್ಳಬೇಕಲ್ಲವೇ ಎಂದು ಅವರು ಹೇಳಿದರು.