ಬೆಳಗಾವಿ (ಸೆ.07): ಪೀರ​ನ​ವಾಡಿ ಆಯ್ತು, ಈಗ ಸುವರ್ಣ ವಿಧಾನಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿ​ವೀ​ರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ಭಾನುವಾರ ‘ಸಂಕಲ್ಪ ಯಾತ್ರೆ’ ನಡೆ​ಸ​ಲಾ​ಯಿ​ತು. 

ಜಿಲ್ಲೆಯ ಮೂಡಲಗಿಯ ಶ್ರೀಮಂತ ಶಿವಯೋಗಿ ಮಹಾರಾಜರ ನೇತೃತ್ವದಲ್ಲಿ ಮೂಡಲಗಿ ಪಟ್ಟಣದಿಂದ ಆರಂಭವಾದ ಸಂಕಲ್ಪ ಯಾತ್ರೆ ಬೆಳಗಾವಿ ನಗರದ ಚನ್ನಮ್ಮ ವೃತ್ತಕ್ಕೆ ಬಂದು ತಲುಪಿತು. ಅಲ್ಲಿ ಪ್ರತಿಭಟಿಸಿ, ಪೀರನವಾಡಿಯತ್ತ ತೆರಳಿತು. 

ರಾಯಣ್ಣನ ಪ್ರತಿಮೆ ಸ್ಥಳಕ್ಕೆ ಶಿವಾಜಿ ಚೌಕ ನಾಮಕರಣ .

ಬೆಳಗಾವಿ ಸುವರ್ಣಸೌಧದ ಎದುರು ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಶೂರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಲಾಯಿತು.

ಮೂಡಲಗಿಯ ಶ್ರೀಮಂತ ಶಿವಯೋಗಿ ಮಹಾರಾಜರು ಸೇರಿ ಹಲವು ಗಣ್ಯ​ರು, ವಿವಿಧ ಕನ್ನ​ಡಪರ ಸಂಘ​ಟ​ನೆ​ಗಳು ಪಾಲ್ಗೊಂಡಿ​ದ್ದ​ವು.