Asianet Suvarna News Asianet Suvarna News

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬುದು ಜನರ ಬಯಕೆ: ಶಾಸಕ ಹಿಟ್ನಾಳ

*  ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ
*  ಕೇಂದ್ರದಲ್ಲೂ ಆಡಳಿತದಿಂದ ಭ್ರಮನಿರಸನಗೊಂಡ ಜನ
*  ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಬೇಡ 
 

People Want Siddaramaiah to Become CM Again in Karnataka Says MLA Raghavendra Hitnal grg
Author
Bengaluru, First Published Oct 11, 2021, 1:12 PM IST
  • Facebook
  • Twitter
  • Whatsapp

ಕೊಪ್ಪಳ(ಅ.11):  ರಾಜ್ಯದಲ್ಲಿ(Karnataka) ಹದಗೆಟ್ಟು ಹೋಗಿರುವ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರಲು ಈಗಾಗಲೇ ಉತ್ತಮ ಆಡಳಿತ ನೀಡಿದ ಅನುಭವ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರೇ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಜನ ಬಯಸುತ್ತಿದ್ದಾರೆ ಎಂದು ಕೊಪ್ಪಳ(Koppal) ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಮಾತನ್ನು ನಾನಲ್ಲ, ಜನರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಕೇಂದ್ರದಲ್ಲೂ ಉತ್ತಮ ಆಡಳಿತ ಇಲ್ಲ. ಹೀಗಾಗಿ ಜನ ಭ್ರಮನಿರಸನಗೊಂಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌(Congress) ಸರ್ಕಾರ(Government) ಬರಬೇಕು. ಅತ್ಯುತ್ತಮ ಆಡಳಿತ ನೀಡಿದ, ಆರ್ಥಿಕ ಶಿಸ್ತು ಕಾಪಾಡಿದ, ಜನಪರ ಯೋಜನೆ ನೀಡಿದ ಸಿದ್ದರಾಮಯ್ಯ ಸಿಎಂ ಆಗಬೇಕೆನ್ನುವುದು ಜನರ ಬಯಕೆ’ ಎಂದರು.

'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್‌ ಸೇರ್ಪಡೆ'

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಬೇಡ. ಅವರು ಇಲ್ಲೇ ಇರಲಿ ಎಂಬುದು ಜನರ ಅಭಿಪ್ರಾಯ. ಆದರೆ, ಹೈಕಮಾಂಡ್‌(HighCommand) ಶಾಸಕರ ಅಭಿಪ್ರಾಯ ಪಡೆದು, ಯಾರನ್ನು ಸಿಎಂ ಮಾಡಬೇಕೆಂಬುದನ್ನು ತೀರ್ಮಾನಿಸುತ್ತದೆ. ಅದನ್ನು ಎಲ್ಲರೂ ಗೌರವಿಸುತ್ತೇವೆ ಎಂದರು.
 

Follow Us:
Download App:
  • android
  • ios