Asianet Suvarna News Asianet Suvarna News

'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್‌ ಸೇರ್ಪಡೆ'

*  ಪ್ರತಿ ಹಳ್ಳಿ, ಹಳ್ಳಿಯಲ್ಲಿಯೂ ಕಾಂಗ್ರೆಸ್‌ ಸೇರ್ಪಡೆ
*  ಶಾಸಕ ಹಿಟ್ನಾಳ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ ಯುವಕರು
*  ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ರಾಘವೇಂದ್ರ ಹಿಟ್ನಾಳ 
 

BJP Activists Join Congress Says MLA Raghavendra Hitnal grg
Author
Bengaluru, First Published Oct 7, 2021, 2:18 PM IST
  • Facebook
  • Twitter
  • Whatsapp

ಕೊಪ್ಪಳ(ಅ.07):  ಬಿಜೆಪಿ(BJP) ಪಕ್ಷದ ದುರಾಡಳಿತದಿಂದ ಬೇಸತ್ತು ಅನೇಕರು ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಪ್ರತಿ ಹಳ್ಳಿ, ಹಳ್ಳಿಯಲ್ಲಿಯೂ ಅನೇಕರು ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ಹೇಳಿದ್ದಾರೆ. 

ಅಳವಂಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ತೊರೆದು ಅನೇಕರು ಶಾಸಕ ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಅಳವಂಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌(Congress) ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದು ಅಳವಂಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಿ ಜೋಳದ್‌, ರೈತ ಮುಖಂಡರಾದ ಗೂಳರಡ್ಡಿ ತವದಿ, ಗ್ರಾಪಂ ಸದಸ್ಯ ಹನಮಂತ ಮೂಲಿಮನಿ, ಪರಶುರಾಮ ವಡ್ಡರ, ಸಚಿನ್‌ ತವದಿ ಹಾಗೂ ಘಟ್ಟರಡ್ಡಿಹಾಳ ಗ್ರಾಮದ ಶಿವಪ್ಪ ಬೆನಳ್ಳಿ ದೇವಪ್ಪ ಡಂಬಾಳ, ಸುರೇಶ ಡಂಬಳ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಗಂಗಾವತಿ: 'ಕೈ' ಬೆಂಬಲಿಗನ ಮೇಲೆ ಟ್ರ್ಯಾಕ್ಟರ್‌ ಹಾಯಿಸಿದ ಬಿಜೆಪಿ ಕಾರ್ಯಕರ್ತ

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ: ದಢೇಸಗೂರ ಹೇಳಿದ್ದಿಷ್ಟು

ಇತ್ತೀಚೆಗೆ ಕೆಲ ಗ್ರಾಮಗಳಲ್ಲಿ ಕೆಲವರು ಕಾಂಗ್ರೆಸ್‌ ಸೇರಿದ್ದನ್ನೇ ನೆಪವಾಗಿಟ್ಟುಕೊಂಡು ಕನಕಗಿರಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬಿಜೆಪಿ(BJP) ಕಾರ್ಯಕರ್ತರು ಕಾಂಗ್ರೆಸ್‌(Congress) ಸೇರಲಿದ್ದಾರೆ ಎಂದು ವದಂತಿ ಹಬ್ಬಿಸುತ್ತಾ ತಿರುಗುತ್ತಿದ್ದಾರೆ. ಆದರೆ, ಅದೆಲ್ಲ ಸುಳ್ಳು ಎಂದು ಶಾಸಕ ಬಸವರಾಜ ದಢೇಸಗೂರ(Basavaraj Dadesugur) ಹೇಳಿದ್ದರು. 

ಇತ್ತೀಚೆಗೆ ಬಿಜೆಪಿ ಕಚೇರಿಯಲ್ಲಿ ನಡೆದ ಕೆಲ ಗ್ರಾಮಗಳ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ತಂಗಡಗಿ ಹೆಸರು ಪ್ರಸ್ತಾಪಿಸದೆ ಟೀಕೆ ಮಾಡಿದ್ದರು. 
 

Follow Us:
Download App:
  • android
  • ios