Asianet Suvarna News Asianet Suvarna News

Covid Vaccine Drive: ಲಸಿಕಾ ಮೇಳಕ್ಕೆ ಸಿಗದ ಸ್ಪಂದನೆ: ತಲುಪದ ಗುರಿ

*  4.5 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ
*  ಕೇವಲ 71000 ಮಂದಿಗೆ ಮಾತ್ರ ಲಸಿಕೆ
*  ಹಲವು ಲಸಿಕಾ ಕೇಂದ್ರಗಳಲ್ಲಿ ಒಂದೇ ಒಂದು ಲಸಿಕೆಯನ್ನೂ ಕೂಡ ನೀಡಲಾಗಿಲ್ಲ
 

People Unresponsive to Covid Vaccine Drive in Bengaluru grg
Author
Bengaluru, First Published Dec 9, 2021, 11:25 AM IST

ಬೆಂಗಳೂರು(ಡಿ.09):  ಪಾಲಿಕೆ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಲಸಿಕಾ ಮೇಳದಲ್ಲಿ(Covid Vaccine Drive) ನಿಗದಿತ ಪ್ರಮಾಣದಲ್ಲಿ ಲಸಿಕೆ ನೀಡುವ ಗುರಿ ತಲುಪಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ(BBMP) ಸಾಧ್ಯವಾಗಿಲ್ಲ. ಲಸಿಕಾ ಮೇಳದಲ್ಲಿ ಬುಧವಾರ ದಿನ 4.5 ಲಕ್ಷ ಜನರಿಗೆ ಲಸಿಕೆ(Vaccine) ನೀಡುವ ಗುರಿ ಹೊಂದಲಾಗಿತ್ತಾದರೂ ಜನರು ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಕೇವಲ 71 ಸಾವಿರ ಡೋಸ್‌ ಲಸಿಕೆ ಹಾಕಲಾಗಿದೆ.

ಸಾರ್ವಜನಿಕ ಸ್ಥಳಗಳು, ಖಾಸಗಿ ಆಸ್ಪತ್ರೆಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 577 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ನಿತ್ಯ ಸರಾಸರಿ 65 ಸಾವಿರಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಲಸಿಕಾ ಮೇಳದಲ್ಲಿ 4.5 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ(Department of Health) ಬಿಬಿಎಂಪಿಗೆ ನೀಡಿತ್ತು. ಇದುವರೆಗೂ ಒಂದೂ ಡೋಸ್‌ ಲಸಿಕೆ ಪಡೆಯದವರು, ಮೊದಲ ಡೋಸ್‌ ಲಸಿಕೆ ಪಡೆದು 83 ದಿನ ಪೂರ್ಣಗೊಂಡವರು (ಕೋವ್ಯಾಕ್ಸಿನ್‌ 28 ದಿನ) ಸಮೀಪದ ಲಸಿಕಾ ಶಿಬಿರಕ್ಕೆ ಆಗಮಿಸಿ ಲಸಿಕೆ ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Covid-19 Vaccine Certificate: 2 ಡೋಸ್‌ ಪಡೆದಿದ್ರೂ ಸಿಗ್ತಿಲ್ಲ ಪ್ರಮಾಣಪತ್ರ..!

ಶೂನ್ಯ ಲಸಿಕಾಕರಣ:

ಆದರೆ, ಹಲವು ಲಸಿಕಾ ಕೇಂದ್ರಗಳಲ್ಲಿ ಒಂದೇ ಒಂದು ಲಸಿಕೆಯನ್ನೂ ಕೂಡ ನೀಡಲಾಗಿಲ್ಲ. ಕೌಟುಂಬಿಕ ನ್ಯಾಯಾಲಯ ಹೊಂಬೇಗೌಡ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಯಲಚೇನಹಳ್ಳಿ, ತಣಿಸಂದ್ರ, ಕೆಜಿಹಳ್ಳಿ, ವಾರ್ಡ್‌ 92 ಕಚೇರಿ(ಶಿವಾಜಿನಗರ), ಮಹಮ್ಮದ್‌ ಸಾಬ್‌ ಪಾಳ್ಯ, ಗೋವಿಂದರಾಜನಗರ ವಾರ್ಡ್‌ 104, ಸುಲ್ತಾನ್‌ಪಾಳ್ಯ ವಾರ್ಡ್‌ ಕಚೇರಿ, ಸಹಕಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಗಂಗಾನಗರ ವಾರ್ಡ್‌ 20 ಸೇರಿದಂತೆ ಬಹುತೇಕ ಕಡೆಗಳಲ್ಲಿ ಬುಧವಾರ ಶೂನ್ಯ ಲಸಿಕಾಕರಣವಾಗಿದೆ.

ಆದರೆ ಸಿಂಗಸಂದ್ರ 713, ಅಮೃತಹಳ್ಳಿ 860, ಬೇಗೂರು 530, ಮಲ್ಲತ್ತಹಳ್ಳಿ 600, ಎಪಿಟಿಎಸ್‌ 246, ಸಹಕಾರ ನಗರ 639, ಹುಳಿಮಾವು ಸರ್ಕಾರಿ ಶಾಲೆ 425, ಕೆ.ಸಿ.ಜನರಲ್‌ ಆಸ್ಪತ್ರೆ 138, ನಂದಿನಿ ಲೇಔಟ್‌ 653, ಥಣಿಸಂದ್ರ 589, ನಾರಾಯಣಪ್ಪ ಶೆಟ್ಟಿಪಾಳ್ಯ 300, ಕೆ.ಎಸ್‌.ಲೇಔಟ್‌ 361, ಅಟ್ಟೂರು 566, ಹೆಗ್ಗನಹಳ್ಳಿ 428, ಪುಟ್ಟೇನಹಳ್ಳಿ 501, ಶ್ರೀರಾಮಪುರ 420, ಕೋಣನಕುಂಟೆ 426, ರಾಜಗೋಪಾಲ ನಗರ 600 ಸೇರಿದಂತೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮವಾಗಿಯೇ ಲಸಿಕಾಕರಣವಾಗಿದೆ(Vaccination).

1.45 ಕೋಟಿ ಡೋಸ್‌ ಲಸಿಕೆ

ಬುಧವಾರ 71,302 ಡೋಸ್‌ ಲಸಿಕೆ ನೀಡುವ ಮೂಲಕ ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1,45,92,260 ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 82,32,997 ಮೊದಲ ಡೋಸ್‌, 63,59,263 ದ್ವಿತೀಯ ಡೋಸ್‌ ಲಸಿಕೆ ಹಾಕಲಾಗಿದೆ.

ಇದುವರೆಗೆ 18-44 ವಯೋಮಿತಿ ಒಳಗಿನವರಿಗೆ 98,58,945 ಡೋಸ್‌, 45-60 ವರ್ಷದ ಒಳಗಿನವರಿಗೆ 30,11,223 ಡೋಸ್‌ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 17,22,092 ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 80,22,860 ಪುರುಷರು ಮತ್ತು 65,66,076 ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ. ಅದರಲ್ಲಿ 1,25,36,964 ಡೋಸ್‌ ಕೋವಿಶೀಲ್ಡ್‌ ಮತ್ತು 19,86,908 ಕೋವ್ಯಾಕ್ಸಿನ್‌ ಡೋಸ್‌ ನೀಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Omicron Threat: ಕೊರೋನಾ ಲಸಿಕೆ ಪಡೆಯದವರಿಗೆ ಮನೆ ಮನೆ ಹುಡುಕಾಟ..!

ಕೋವಿಡ್‌ ಸೋಂಕು, ಲಸಿಕೆ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನ

ಮಡಿಕೇರಿ: ಕೊಡಗು(Kodagu) ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ, ಯುನಿಸೆಫ್‌ ಮತ್ತು ಐಐಎಚ್‌ಎಂಆರ್‌, ಬೆಂಗಳೂರು ಹಾಗೂ ಜನರಲ್‌ ಕಾರ್ಯಪ್ಪ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್‌ ವೈರಸ್‌ ಹಾಗೂ ಕೋವಿಡ್‌ ಲಸಿಕೆ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ(Students) ಕೊರೋನಾ ವೈರಸ್‌(Coronavirus), ಮಾಸ್ಕ್‌(Mask) ಮತ್ತು ಲಸಿಕೆಯ ವೇಷಭೂಷಣಗಳನ್ನು ಧರಿಸಿ ಸಾರ್ವಜನಿಕರಿಗೆ ಜಾಗೃತಿ(Awareness) ಮೂಡಿಸಲು ಜಾಥಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಈ ಜಾಥಾವನ್ನು ಜಿ.ಪಂ. ಸಿಇಒ ಭನ್ವರ್‌ಸಿಂಗ್‌ ಮೀನಾ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌. ವೆಂಕಟೇಶ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಆನಂದ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಗೋಪಿನಾಥ್‌ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಚೇತನ್‌, ಜಿಲ್ಲಾ ಸಂಯೋಜಕರಾದ ಡಾ.ಬಿ. ರವೀಶ್‌, ಎಂಟಮಾಲಜಿಸ್ಟ್‌ ಮಂಜುನಾಥ್‌, ಎನ್‌ಸಿಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ. ಶಾಂಭವಿ, ಎನ್‌ಟಿಸಿಪಿ ವಿಬಾಗದ ಸಮಾಜ ಕಾರ್ಯಕರ್ತರಾದ ಆರ್‌. ಮಂಜುನಾಥ್‌, ಐಡಿಎಸ್‌ಪಿ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ರಾಜೇಶ್‌ ಬೈಂದೂರು, ಜನರಲ್‌ ಕಾರ್ಯಪ್ಪ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೋಲಿಸ್‌ ಸಿಬ್ಬಂದಿಗಳು ಇತರರು ಇದ್ದರು.
 

Follow Us:
Download App:
  • android
  • ios