ಮಂಡ್ಯ(ಮೇ 10): ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 17ರಿಂದ 14ಕ್ಕೆ ಇಳಿಕೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಕೊರೋನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿಲ್ಲ.

ಇದು ನೆಮ್ಮದಿ ಸಂಗತಿಯಾದರೆ, ಅದರೊಂದಿಗೆ ಇಂದು ಮೂರು ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ 17 ಪ್ರಕರಣಗಳ ಪೈಕಿ ಮಂಡ್ಯದಲ್ಲಿ ಈಗ 14 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಡುಗಡೆಯಾದವರ ಪೈಕಿ ಪಿ. 324, ಪಿ.442, ಪಿ.443 ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

7 ಜನರಿಗೆ ಸೋಂಕು ತಗುಲಿಸಿದ ಪಿ.179

ಮಳವಳ್ಳಿಯ ತಬ್ಲಿಘಿಗಳಿಂದ ಸೋಂಕಿತರಾಗಿದ್ದ ಪಿ. 179 ವ್ಯಕ್ತಿ ಜಿಲ್ಲೆಯ ಸೂಪರ್‌ ಸ್ಪೈಡರ್‌ ಎಂಬ ಖ್ಯಾತಿಗೆ ಒಳಗಾಗಿದ್ದಾನೆ. ಈತ 7 ಜನರಿಗೆ ಸೋಂಕನ್ನು ತಗುಲಿಸಿದ್ದಾರೆ. ಗುಣಮುಖನಾಗಿ ಆಸ್ಪತ್ರೆಯಿಂದಲೂ ಬಿಡುಗಡೆಯಾಗಿದ್ದಾನೆ.

ಕ್ವಾರೆಂಟೈನ್ ಎಂದು ಕೂಡಿ ಹಾಕಿದಲ್ಲಿ ನಡೆಯುತ್ತಿದೆಯಾ ಮತಾಂತರ..?

ಪಿ.179 ಇವನಿಂದ ಸ್ನೇಹಿತರು, ಕುಟುಂಬಸ್ಥರಿಗೆ ಸೋಂಕು ತಗುಲಿದೆ. ಪಿ.237, 238, 239, 570,571, 572, 573 ಸೋಂಕಿತರೆಲ್ಲರೂ ಈಗ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿ.179 ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದಾನೆ. ತಬ್ಲಿಘಿ ಜಮಾದಿಯಲ್ಲಿ ಪಾಲ್ಗೊಂಡಿದ್ದ ಈತ ಮಳವಳ್ಳಿಗೆ ಧರ್ಮಗುರುಗಳನ್ನು ಕರೆತರುವಲ್ಲಿ ಪ್ರಮುಖನಾಗಿದ್ದಾನೆ ಎಂದು ಹೇಳಲಾಗಿದೆ.