ಬೆಳಿಗ್ಗೆ 4 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್| ಸಂಜೆ ಇದೇ ಕಾಮಗಾರಿಗೆ ಚಾಲನೆ ನೀಡಿದ್ದ ಶಾಸಕ ಅನಿಲ್ ಬೆನಕೆ| ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಿಲಿಗೀಡಾದ ಇಬ್ಬರೂ ಶಾಸಕರು|  

ಬೆಳಗಾವಿ(ಜ.20): ಒಂದೇ ಕಾಮಗಾರಿಗೆ ಕಾಂಗ್ರೆಸ್, ಬಿಜೆಪಿ ಶಾಸಕರು ಪ್ರತ್ಯೇಕವಾಗಿ ಚಾಲನೆ ನೀಡಿ ನಗೆಪಾಟಿಲಿಗೀಡಾದ ಘಟನೆ ನಗರದ ಎಪಿಎಂಸಿ ಆವರಣದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಎಪಿಎಂಸಿ ಆವರಣದಲ್ಲಿ 4 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

- ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಅಭಿವೃದ್ಧಿ ಪಡಿಸುವ ಹಿತದೃಷ್ಟಿಯಿಂದ ಇವತ್ತು ನಾಲ್ಕು ಕೋಟಿ (4 Crs)...

Posted by Laxmi Hebbalkar on Tuesday, 19 January 2021

ಎಪಿಎಂಸಿ ಅಭಿವೃದ್ಧಿಗೆ ಮಂಜೂರಾದ ಅನುದಾನದಡಿ ಕೈಗೊಂಡ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ(ಮಂಗಳವಾರ) ಮಧ್ಯಾಹ್ನ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿಗೆ ಚಾಲನೆ ನೀಡಿದ ವಿವರವನ್ನ ಶಾಸಕಿ ಹೆಬ್ಬಾಳ್ಕರ್ ಫೇಸ್‌ಬುಕ್‌‌ನಲ್ಲಿ ಪೋಸ್ಟ್ ಮಾಡಿದ್ದರು. 

ರೈಲು ಡಿಕ್ಕಿಯಾಗಿ ಕಾಡುಕೋಣ ಮೃತ, ಅರಣ್ಯ ಸಿಬ್ಬಂದಿಯಿಂದ ಅಂತ್ಯಸಂಸ್ಕಾರ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಅಭಿವೃದ್ಧಿ ಪಡಿಸುವ ಹಿತದೃಷ್ಟಿಯಿಂದ ಇವತ್ತು ನಾಲ್ಕು ಕೋಟಿ (4 Crs) ರೂ,ಗಳ ವೆಚ್ಚದಲ್ಲಿ ಮುಖ್ಯ...

Posted by Anil Benake on Tuesday, January 19, 2021

ಸಂಜೆ ಇದೇ ಕಾಮಗಾರಿಗೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಕೂಡ ಚಾಲನೆ ನೀಡಿದ್ದಾರೆ. ಅದೇ ವಿವರವನ್ನ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಫೇಸ್‌ಬುಕ್‌ನಲ್ಲೂ ಅದೇ ವಿವರ, ಶಾಸಕರ ಹೆಸರು ಮಾತ್ರ ಚೇಂಜ್ ಆಗಿದೆ. ಅದೇ ಕಾಮಗಾರಿ, ಅದೇ ಜೆಸಿಬಿ, ಅದೇ ಮುಖಂಡರು ಶಾಸಕರು ಮಾತ್ರ ಬದಲಾವಣೆ ಆಗಿದ್ದಾರೆ. ಒಂದೇ ಕಾಮಗಾರಿಗೆ ಚಾಲನೆ ನೀಡಿದ್ದರಿಂದ ಇಬ್ಬರೂ ಶಾಸಕರೂ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಿಲಿಗೀಡಾಗಿದ್ದಾರೆ.