ಉಡುಪಿ(ಏ.12): ಜಿಲ್ಲೆಯ ಮೊದಲ ಕೊರೋನ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದು, ಅವರನ್ನು ಶನಿವಾರ ರಾತ್ರಿ 9.10ಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ.

34 ವರ್ಷದ ವ್ಯಕ್ತಿ ದುಬೈ ಪ್ರವಾಸಕ್ಕೆ ಹೋಗಿದ್ದು, ಮಾ.21ಕ್ಕೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿಯಲ್ಲಿ ಮಣಿಪಾಲಕ್ಕೆ ಆಗಮಿಸಿದ್ದರು. ನಂತರ ಹೋಮ್‌ ಕ್ವಾರಂಟೈನ್‌ ನಲ್ಲಿದ್ದ ಅವರು ಕೆಮ್ಮು ಶೀತ ಜ್ವರದ ಕಾರಣಕ್ಕೆ 23ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಕೊರೋನಾ ವಿರುದ್ಧ ಹೋರಾಡಿ ಗೆದ್ದ 10 ತಿಂಗಳ ಕಂದಮ್ಮ, ಈಗ ಸಂಪೂರ್ಣ ಗುಣಮುಖ

ಮಾ.25ಕ್ಕೆ ಅವರಿಗೆ ಕೊರೋನಾ ಇರುವುದು ದೃಢವಾಗಿತ್ತು. ನಂತರ ಅವರಿಗೆ ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಸುಧಾರಿಸಿಕೊಂಡಿದ್ದು, ನಂತರ ನಡೆಸಿದ ಎರಡು ಪರೀಕ್ಷೆಗಳಲ್ಲಿ ವರದಿ ನೆಗೆಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಇನ್ನೂ ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತಿದ್ದು, ಅವರ ಮೊದಲ ವರದಿಗಳು ನೆಗೆಟಿವ್‌ ಬಂದಿದೆ, ಅವರು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ.