ಆಲೂರು (ಆ.16):  ಸುರಕ್ಷತೆ, ಆರ್ಥಿಕತೆ ಭದ್ರತೆ, ಘನತೆಯ ಬಾಳು, ಸಾಮಾಜಿಕ ಭದ್ರತೆಯ ವಿಚಾರದಲ್ಲಿ ನಾವು ಈಗಲೂ ಅರೆಬೆಂದ ಸ್ಥಿತಿಯಲ್ಲಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಮಿನಿ ವಿದಾನಸೌಧ ಆವರಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದರೂ ಜನತೆ ತಮ್ಮ ಆದ್ಯತೆಗಳ ಜೊತೆಗೆ ಜೀವನಕ್ರಮವನ್ನೂ ಬದಲಾಯಿಸಿಕೊಂಡಿದ್ದಾರೆ ಎಂದರು.

ಉಪ ಚುನಾವಣಾ ಅಖಾಡಕ್ಕೆ ನಿಖಿಲ್ : ಈ ಕ್ಷೇತ್ರದಿಂದ ಸ್ಪರ್ಧಿಸೋದು ಖಚಿತನಾ..?

ಪ್ರಗತಿಯೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ನಕಲು ಮಾಡುವುದೆಂದು ಕೊಂಡಿದ್ದಾರೆ. ಇದರಿಂದ ಭಾರತೀಯ ಸಂಪ್ರದಾಯ ಹಾಗೂ ಮೌಲ್ಯಗಳು ನೆಲಕಚ್ಚಿವೆ. ಹಲವು ಮಹನೀಯರು ತಮ್ಮ ತತ್ವಾದರ್ಶಗಳ ಮೂಲಕ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರಗಳಿಸಿ ಕೊಟ್ಟಿದ್ದಾರೆ. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸ್ವೇಚ್ಛಾಚಾರವನ್ನು ಬಿಟ್ಟು ಶ್ರಮದಿಂದ ರಾಷ್ಟ್ರದ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಕೊರೋನಾ ರೋಗ ಯಾರೂ ಭಯಪಡಬೇಕಿಲ್ಲ. ಪ್ರತಿಯೊಬ್ಬರೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಉತ್ತಮ ಪೌಷ್ಟಿಕ ಆಹಾರ ಸೇವಿಸಿ. ಪ್ರತಿಯೊಬ್ಬರೂ ಜಾಗ್ರತೆ ವಹಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ತಹಸೀಲ್ದಾರ್‌ ಶಿರೀನ್‌ ತಾಜ್‌ ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು.

ಬೆಂಗಳೂರು ಗಲಭೆಗೆ ಸ್ಥಳೀಯ ಜೆಡಿಎಸ್‌ ನಾಯಕ ಕುಮ್ಮಕ್ಕು; ವಾಜೀದ್‌ಗಾಗಿ ಹುಡುಕಾಟ...

ಮುಖ್ಯ ಭಾಷಣಕಾರರಾಗಿ ಕೆ.ಹೊಸಕೋಟೆ ಎಸ್‌.ಕೆ.ಎನ್‌.ಆರ್‌ ಪದವಿ ಪೂರ್ವ ಉಪನ್ಯಾಸಕ ಭಾಸ್ಕರ್‌ ಮಾತನಾಡಿ, ಭಾರತ ದೇಶಕ್ಕೆ ಸ್ವತಂತ್ರವು ಎಲ್ಲಾ ಧರ್ಮಿಯರ, ಜನಾಂಗದ ಹೋರಾಟ ಫಲದಿಂದ ತೊರೆಕಿದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶೇ 100ರಷ್ಟುಫಲಿತಾಂಶ ಪಡೆದ ಶಾಲೆಗಳಿಗೆ, ಕೊರೋನಾ ವಾರಿಯರ್ಸ್‌ಗಳಾದ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಾಸನ ಎಪಿಎಂಸಿ ಅಧ್ಯಕ್ಷ ಕೆ.ಎಸ್‌.ಮಂಜೇಗೌಡ, ಪಪಂ ಮುಖ್ಯಾಧಿ​ಕಾರಿ ಕೃಷ್ಣಮೂರ್ತಿ, ಮುಖ್ಯ ಕಾರ್ಯನಿರ್ವಣಾಧಿ​ಕಾರಿ ಸತೀಶ್‌, ಕ್ಷೇತ್ರ ಶಿಕ್ಷಣಾಧಿ​ಕಾರಿ ರುದ್ರೇಶ್‌, ದೈಹಿಕ ಪರಿವೀಕ್ಷ ಪ್ರೇಮಾನಂದ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ರೇವಣ್ಣ, ಸಬ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌ ನಾಯ್‌್ಕ ಇದ್ದರು.