Asianet Suvarna News Asianet Suvarna News

ಅಹಿತಕರ ಘಟನೆ ಮಾಹಿತಿ ಪೊಲೀಸರಿಗೆ ನೀಡಿ : ಎಸ್‌ಪಿ

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾರ್ವಜನಿಕರಿಗೆ ತಿಳಿಸಿದ್ದಾರೆ.

people should inform about suspected incident sayd hassan sp srinivas gowda
Author
Bengaluru, First Published Aug 31, 2020, 10:58 AM IST

ಹಾಸನ (ಆ.31):  ಜಿಲ್ಲೆಯ ಯಾವ ಭಾಗದಲ್ಲಾದರೂ ಅಪರಾಧದಂತಹ ಪ್ರಕರಣಗಳು ಸಂಭವಿಸುತ್ತಿದ್ದರೆ ಸ್ಥಳದಲ್ಲಿರುವ ಜನಸಾಮಾನ್ಯರು ಸೇರಿದಂತೆ ಯಾರಾದರೂ ತಕ್ಷಣದಲ್ಲಿ ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸಿದರೆ ಕೂಡಲೇ ಸ್ಥಳಕ್ಕಾಗಮಿಸಿ ಆಗಬಹುದಾದ ಕೃತ್ಯಗಳನ್ನು ತಡೆಗಟ್ಟಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ ಗೌಡ ಮನವಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಕಛೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಚ್.ಡಿ.ರೇವಣ್ಣರ ಮಾತು ಸಲಹೆ ಎಂದು ತೆಗೆದುಕೊಳ್ಳುವ : ಬಿಜೆಪಿ ಶಾಸಕ...

ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧಂತಹ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಸಂಬಂ​ಸಿದಂತೆ ಆರೋಪಿಗಳನ್ನು ಬಂ​ಧಿಸಲಾಗುತ್ತಿದೆ. ಅಲ್ಲಲ್ಲಿ ಒಬ್ಬೊಬ್ಬರೂ ತಪ್ಪಿಸಿಕೊಂಡಿದ್ದು, ಅವರನ್ನು ಹಿಡಿಯಲು ತಂಡ ರಚನೆ ಮಾಡಲಾಗಿದೆ ಎಂದರು.

ರೌಡಿಗಳಂತಹ ವ್ಯಕ್ತಿಗಳು ಬಾರಿನಲ್ಲಿ ಕುಳಿತಾಗ ಸಂಭವಿಸುವ ಘಟನೆಗಳನ್ನು ಗಣನೆಗೆ ತೆಗೆದುಕೊಂಡು ಮುಂಜಾಗ್ರತೆಯಾಗಿ ಬಾರುಗಳನ್ನು ರಾತ್ರಿ ಸಮಯದಲ್ಲಿ ಬೇಗ ಬಾಗಿಲು ಮುಚ್ಚಲು ಹಾಗೂ ಪರವಾನಗಿ ಇಲ್ಲದಂತಹ ಡಾಬಗಳನ್ನು ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಬೀದಿ ಬದಿ ಮಲ​ಗಿದ್ದ ಮಹಿಳೆ ಕೊಂದು,ಅತ್ಯಾ​ಚಾ​ರ : ಹಾಸನದಲ್ಲೊಂದು ಪೈಶಾಚಿಕ ಕೃತ್ಯ...

ಕೊಲೆ ಮಾಡಿರುವ ವ್ಯಕ್ತಿಗಳು ತಪ್ಪಿಸಿಕೊಂಡು ವಸತಿ ಗೃಹಗಳಂತಹ ಸ್ಥಳಗಳಲ್ಲಿ ಮಲಗಿಕೊಳ್ಳುವುದು ಸಾಮಾನ್ಯವಾಗಿದ್ದು, ಕೆಲ ಪ್ರಕರಣಗಳಲ್ಲಿ ನಾವೆ ಹೋಗಿ ಬಂ​ಧಿಸಿದ ಉದಾಹರಣೆಗಳು ಇದೆ. ಜನರು ಭಯಪಡುವುದು ಬೇಡ. ಎಚ್ಚರದಿಂದ ಇರುವುದು ಉತ್ತಮ. ಕಳೆದ ಮೂರು ತಿಂಗಳಲ್ಲಿ ಮೂರು ಪ್ರಕರಣಗಳನ್ನು ಪತ್ತೆ ಮಾಡಿದ್ದು, ಮೂರು ಕೆಜಿಯಷ್ಟುಗಾಂಜಾ ಜಾಲವನ್ನು ವಶ, ಇತರೆ ಎರಡು ಪ್ರಕರಣವನ್ನು ಬೇ​ಸುವಲ್ಲಿ ಯಶಸ್ವಿಯಾಗಿದ್ದೇವೆ. ಕೆಲ ಪ್ರಕರಣ ತಡವಾಗಿದ್ದು, ಶೀಘ್ರದಲ್ಲೆ ಪತ್ತೆ ಹಚ್ಚಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಎರಡು ದಿನಗಳ ಹಿಂದೆ ನಗರಸಭೆ ಆಯುಕ್ತರ ಜೊತೆ ಸೇರಿ ಚರ್ಚಿಸಿ ನಿರ್ಗತಿಕ ಮಹಿಳೆಯರಿಗಾಗಿ ನಗರ ಸಂಚಾರ ಮಾಡಿದಾಗ ಸುಮಾರು 25 ನಿರ್ಗತಿಕರನ್ನು ಕರೆತರಲಾಗಿದೆ. ಇವರಲ್ಲಿ ಕೆಲವರು ಮಾನಸಿಕವಾಗಿ ಅಸ್ವಸ್ಥರು ಇರುವುದು ಕಂಡುಬಂದಿದೆ. ಮೊನ್ನೆ ರಸ್ತೆ ಬದಿ ನಡುರಾತ್ರಿ ನಡೆದ ಪೈಶಾಚಿಕ ಕೃತ್ಯ ಮಾಡುವವರ ಮನಸ್ಥಿತಿಯನ್ನು ಗಮನಿಸಬೇಕಾಗುತ್ತದೆ. ಇಂಥಾ ಘಟನೆಗಳು ಮತ್ತೆ ನಡೆಯದಂತೆ ಈಗಾಗಲೇ ಪೊಲೀಸ್‌ ಇಲಾಖೆ ಬಿಗಿ ಮಾಡಿದೆ. ಕೊರೋನಾ ಬಂದು ಕರ್ತವ್ಯದಲ್ಲಿದ್ದ ನಮ್ಮ ಪೊಲೀಸ್‌ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದು, ಎಲ್ಲವನ್ನೂಗಮನದಲ್ಲಿರಿಸಿಕೊಂಡು ಇನ್ನು ಹೆಚ್ಚಿನ ಬೀಟ್‌ ಮಾಡಲಾಗುತ್ತಿದೆ ಎಂದರು.

Follow Us:
Download App:
  • android
  • ios