Asianet Suvarna News Asianet Suvarna News

ಎಚ್.ಡಿ.ರೇವಣ್ಣರ ಮಾತು ಸಲಹೆ ಎಂದು ತೆಗೆದುಕೊಳ್ಳುವ : ಬಿಜೆಪಿ ಶಾಸಕ

ಜೆಡಿಎಸ್ ಮುಖಂಡ ರೇವಣ್ಣ ಅವರ ಮಾತನ್ನು ನಾನು ಸಲಹೆಯಾಗಿ ಪಡೆದುಕೊಳ್ಳುತ್ತೇನೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

BJP MLA preetham Gowda Slams HD Revanna
Author
Bengaluru, First Published Aug 28, 2020, 12:47 PM IST

 ಹಾಸನ (ಆ.28):ಮಾಜಿ ಸಚಿವ ಎಚ್‌.ಡಿ.ರೇವಣ್ಣನವರು ರಾಜಕೀಯವಾಗಿ ನನ್ನ ಮೇಲೆ ಏನೇನು ಆರೋಪಗಳನ್ನು ಮಾಡುತ್ತಿದಾರೋ ಅದನ್ನೆಲ್ಲ ನಾನು ಸಲಹೆ ಎಂದು ಸ್ವೀಕರಿಸುತ್ತೇನೆ ಎಂದು ಶಾಸಕ ಪ್ರೀತಮ್‌ ಜೆ. ಗೌಡ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಮೆಲು ಮಾತಿನಲ್ಲೆ ಟಾಂಗ್‌ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸಬ್‌ ರಿಜಿಸ್ಟರ್‌ ಸ್ಥಾನಕ್ಕೆ ಬಂದಿರುವ ಅ​ಧಿಕಾರಿಯನ್ನು ಮಾಜಿ ಸಚಿವ ಎಚ್‌.ಡಿ.ರೇವಣ್ಣನವರೇ ಹಾಕಿಸಿಕೊಂಡಿರುವವರು. ಮೊದಲು ಹೊಳೆನರಸೀಪುರದಲ್ಲಿ ಇದ್ದರು ಎನ್ನುವ ಮಾಹಿತಿ ನನಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್‌.ಡಿ.ರೇವಣ್ಣನವರು ಅಧಿ​ಕಾರದಲ್ಲಿ ಇದ್ದಾಗ ಸಬ್‌ ರಿಜಿಸ್ಟರ್‌ ಅಧಿ​ಕಾರಿಯನ್ನು ಹಾಸನಕ್ಕೆ ವರ್ಗಾಯಿಸಿದರು. ಹೊಸಬರನ್ನು ಹಾಕಿದರೆ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ಆದರೆ ಇಲ್ಲಿಗೆ ಅವರೆ ಹಾಕಿದ ಅಧಿ​ಕಾರಿ ಬಂದರೆ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುತ್ತಾರೆ. ರೇವಣ್ಣನವರು ರಾಜಕೀಯವಾಗಿ ಏನೇನು ಆರೋಪ ಮಾಡುತ್ತಾರೆ ಅದನ್ನು ನಾನು ಸಲಹೆ ರೂಪದಲ್ಲಿ ಸ್ವೀಕರಿಸಿ ಯಾವ ರೀತಿ ಸಾರ್ವಜನಿಕರಿಗೆ ಅನುಕೂಲವಾಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಬಿಜೆಪಿ ಸೇರಲು ಸಜ್ಜಾದ್ರು ಜೆಡಿಎಸ್ ಹಾಗೂ ಕೈ ಮುಖಂಡರು..

ನನ್ನ ಕ್ಷೇತ್ರದ ನಗರಸಭೆ ಯಾವ ಮೀಸಲಾತಿಗಾದರೂ ಬರಲಿ ಬಿಜೆಪಿ ಸದಸ್ಯ ಯಾರು ಇರುತ್ತಾರೆ ಅವರು ಅಧ್ಯಕ್ಷರಾಗುತ್ತಾರೆ. ಜನರಲ್‌ ಪುರುಷ, ಮಹಿಳೆಯಾಗಲಿ, ಬಿಸಿಎಂ ಮತ್ತು ಬಿಸಿಎಂ (ಎ) ಆಗಲಿ, ಎಸ್‌.ಸಿ. ಮತ್ತು ಎಸ್‌.ಟಿ. ಯಾವ ಕ್ಯಾಟಗರಿ ಬಂದರೂ ನಮ್ಮ ಸದಸ್ಯರೇ ಅಧ್ಯಕ್ಷರಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗ ಯಾವ ಪಕ್ಷಕ್ಕೂ ಕೂಡ ಬಹುಮತ ಇರುವುದಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಕೆಲಸವಾಗಬೇಕಾದರೇ ಸಾಕು ಎಂದರು.

ಹಾಸನ ನಗರದ ಪ್ರಮುಖವಾಗಿರುವ ಹೊಸ ಬಸ್‌ ನಿಲ್ದಾಣಕ್ಕೆ ಹಾದು ಹೋಗುವ ಮಧ್ಯೆ ಮೇಲ್‌ ಸೇತುವೆ ಕೆಲಸ ತಡವಾಗಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಸೇತುವೆಯನ್ನು ತಾಂತ್ರಿಕವಾಗಿ ಮಾಡುವ ಕೆಲಸವಾಗಿದೆ. ಅವಸರದಲ್ಲಿ ಕೆಲಸ ಮಾಡಲು ಹೋಗಿ ಒಮ್ಮೆ ಕುಸಿದು ಬಿದ್ದಿರುವುದನ್ನು ಎಲ್ಲರೂ ಗಮನಿಸಿದ್ದೇವೆ. ಆತುರದ ಕೆಲಸ ಬೇಡ. ತಾಂತ್ರಿಕವಾಗಿ ಕ್ರಿಯಾಶೀಲತೆಯಿಂದ ಮಾಡಬೇಕಾಗಿರುವ ಕೆಲಸವಾಗಿರುವುದರಿಂದ ಉತ್ತಮ ಕಾಮಗಾರಿಯನ್ನು ಮಾಡೋಣ. ಆದರೆ ಆತುರದ ಕೆಲಸ ಬೇಡ ಎಂದರು.

ಮತ್ತೋರ್ವ ಜೆಡಿಎಸ್‌ ಶಾಸಕರೊಬ್ಬರಿಗೆ ಕೊರೋನಾ: ಚೇತರಿಕೆಗೆ ದೇವೇಗೌಡ ಹಾರೈಕೆ...

ಕಳೆದ ಎರಡು ದಿವಸಗಳ ಹಿಂದೆ ನಡೆದ ಘಟನೆ ಬಗ್ಗೆ ಪೊಲೀಸ್‌ ಇಲಾಖೆಯೊಂದಿಗೆ ಮಾತನಾಡಲಾಗಿದೆ. ಮಾನಸಿಕ ಸ್ಥಿತಿಯನ್ನು ಕಳೆದುಕೊಂಡಿರುವ ವ್ಯಕ್ತಿ ಇಂತಹ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಮೇಲ್‌ ನೋಟಕ್ಕೆ ಕಂಡು ಬಂದಿದೆ. ಈ ಘಟನೆ ಬಗ್ಗೆ ಇನ್ನು ಹೆಚ್ಚಿನ ರೀತಿ ತನಿಖೆ ನಡೆಸಿ ಅಪರಾಧಿ​ಯನ್ನು ಶೀಘ್ರವಾಗಿ ಬಂ​ಧಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ಪೊಲೀಸ್‌ ಇಲಾಖೆ ಕಾರ್ಯಾನ್ಮುಕವಾಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಕೆಲಸವಾಗದಂತೆ ಮುಂಜಾಗ್ರತ ಕ್ರಮಕೈಗೊಳ್ಳಲು ಇಲಾಖೆಗೆ ತಿಳಿಸಿರುವುದಾಗಿ ಹೇಳಿದರು.

Follow Us:
Download App:
  • android
  • ios