Asianet Suvarna News Asianet Suvarna News

ಬೀದಿ ಬದಿ ಮಲ​ಗಿದ್ದ ಮಹಿಳೆ ಕೊಂದು,ಅತ್ಯಾ​ಚಾ​ರ : ಹಾಸನದಲ್ಲೊಂದು ಪೈಶಾಚಿಕ ಕೃತ್ಯ

ರಸ್ತೆ ಬದಿಯಲ್ಲಿ ಮಲಗಿದ್ದ ನಿರ್ಗತಿಕ ಮಹಿಳೆಯನ್ನು ಕೊಂದು ಶವದ ಮೇಲೆ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ಹಾಸನದಲ್ಲಿ ನಡೆದಿದೆ. 

Beggar Woman Rape And Murder Case recorded in CCTv At Hassan
Author
Bengaluru, First Published Aug 26, 2020, 9:34 AM IST

ಹಾಸನ (ಆ.26): ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಮಹಿಳೆಯೊಬ್ಬ​ಳನ್ನು ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಆಕೆ​ಯ ಮೇಲೆ ಅತ್ಯಾ​ಚಾರ ನಡೆ​ಸಿದ ರಾಕ್ಷಸೀ ಕೃತ್ಯ ನಗ​ರ​ದ ಹಳೇ ಶಾಂತಿ ಸ್ಟೋರ್‌ ವೃತ್ತ​ದಲ್ಲಿ ಸೋಮ​ವಾರ ತಡ​ರಾತ್ರಿ ನಡೆ​ದಿ​ದೆ. 

ಮೊದ​ಲಿಗೆ ಅತ್ಯಾ​ಚಾರ ನಡೆಸಿ ಕೊಲೆ ನಡೆ​ಸಿರಬ​ಹು​ದೆಂದು ಅಂದಾ​ಜಿ​ಸ​ಲಾ​ಗಿತ್ತಾದರೂ ಪಕ್ಕದ ಕಟ್ಟ​ಡ​ದ​ಲ್ಲಿದ್ದ ಸಿ.ಸಿ.​ಟೀ​ವಿ ಪರಿ​ಶೀ​ಲಿ​ಸಿದ ಬಳಿಕ ಆರೋ​ಪಿಯ ಪೈಶಾ​ಶಿಕ ಕೃತ್ಯ ಬಯ​ಲಾ​ಗಿ​ದೆ.

ಆಗಿ​ದ್ದೇ​ನು?: ನಗರದ ಬಿ.ಎಂ.ರಸ್ತೆಯಲ್ಲಿರುವ ಕನ್ನಿಕಾಪರಮೇಶ್ವರಿ ಸಹಕಾರಿ ಬ್ಯಾಂಕ್‌ ಬಾಗಿಲ ಮುಂದೆ ನಿರ್ಗ​ತಿಕ ಮಹಿ​ಳೆ​ಯೊ​ಬ್ಬರು ಮಲ​ಗಿದ್ದು, ಈ ವೇಳೆ ತಡ​ರಾತ್ರಿ ಅಲ್ಲಿಗೆ ಬಂದ ಪಾನ​ಮತ್ತ ವ್ಯಕ್ತಿ​ಯೊಬ್ಬ ಆಕೆ​ಯ​ನ್ನು ಎಬ್ಬಿ​ಸಲು ಪ್ರಯ​ತ್ನಿ​ಸು​ತ್ತಾನೆ. 

ಲಾಕ್‌ಡೌನ್‌ನಿಂದ ಸಂಕಷ್ಟ: ಮನೆ ಮಾಲೀಕಳನ್ನೇ ಹತ್ಯೆಗೈದು ದರೋಡೆ ಮಾಡಿದ್ದ ದಂಪತಿ!.

ನಂತರ ಅಲ್ಲೇ ಪಕ್ಕ​ದಲ್ಲಿದ್ದ ಸಿಮೆಂಟ್‌ ಇಟ್ಟಿ​ಗೆ​ಯೊಂದನ್ನು ತಂದು ಆಕೆಯ ತಲೆ ಮೇಲೆ ಎತ್ತಿ​ಹಾಕುತ್ತಾ​ನೆ. ಈ ವೇಳೆ ಆಕೆಯ ರಕ್ತದ ಮಡು​ವಿ​ನಲ್ಲಿ ಬಿದ್ದು ಒದ್ದಾ​ಡುತ್ತಾ ಪ್ರಾಣ​ಬಿ​ಟ್ಟಿ​ದ್ದರೂ ಈ ಕಾಮ​ಪಿ​ಶಾಷಿ ಮಹಿ​ಳೆಯ ನಿರ್ಜೀವ ಶವದ ಮೇಲೂ ರಾಕ್ಷ​ಸ​ನಂತೆ ಎರಗಿ ತನ್ನ ಕಾಮ​ದಾಹ ತೀರಿ​ಸಿ​ಕೊಳ್ಳುತ್ತಾ​ನೆ. 

ಈ ಎಲ್ಲ ಘಟನೆ ಪಕ್ಕ​ದಲ್ಲೇ ಇದ್ದ ಕಟ್ಟ​ಡದ ಸಿ.ಸಿ.​ಟೀ​ವಿ​ಯಲ್ಲಿ ದಾಖ​ಲಾ​ಗಿ​ದ್ದು, ಇಡೀ ಹಾಸ​ನ​ವನ್ನು ಬೆಚ್ಚಿ​ಬೀ​ಳಿ​ಸಿ​ದೆ. ಆರೋಪಿ ಮತ್ತು ಮಹಿಳೆ ಇಬ್ಬರ ಗುರುತೂ ಪತ್ತೆ​ಯಾ​ಗಿಲ್ಲ. ಆರೋ​ಪಿ​ಗಾಗಿ ಪೊಲೀ​ಸರು ಹುಡು​ಕಾಟ ಮುಂದು​ವ​ರಿ​ಸಿ​ದ್ದಾ​ರೆ.

Follow Us:
Download App:
  • android
  • ios