Asianet Suvarna News Asianet Suvarna News

ಹಾವೇರಿ: ಭಾನುವಾರ ಲಾಕ್‌ಡೌನ್‌, ಖರೀದಿಗಾಗಿ ಜನರ ಓಡಾಟ ಜೋರು

ಭಾನುವಾರ ಸಂಪೂರ್ಣ ಲಾಕ್‌ಡೌನ್‌| ಶನಿವಾರ ಜನ ಹಾಗೂ ವಾಹನ ಸಂಚಾರ ಎಂದಿಗಿಂತ ಹೆಚ್ಚಿತ್ತು| ಮಾರುಕಟ್ಟೆ ಪ್ರದೇಶಗಳಲ್ಲಿ ದಿನಸಿ, ತರಕಾರಿ ಖರೀದಿಸುವವರ ಸಂಖ್ಯೆ ಹೆಚ್ಚಿತ್ತು| ಇಂದು ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌, ಆಟೋ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ಬಂದ್‌|
 

People Rush to purchase of essential items in Haveri Due ti Sunday Lockdown
Author
Bengaluru, First Published Jul 5, 2020, 8:28 AM IST

ಹಾವೇರಿ(ಜು. 06): ಕೊರೋನಾ ನಿಯಂತ್ರಣಕ್ಕಾಗಿ ಇಂದು(ಭಾನುವಾರ) ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ಜಿಲ್ಲೆಯಲ್ಲಿ ಶನಿವಾರ ಜನರು ಮುಗಿಬಿದ್ದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಮಾರುಕಟ್ಟೆ ಪ್ರದೇಶಗಳಲ್ಲಿ ಎಂದಿನಂತೆ ವಹಿವಾಟು ನಡೆದಿತ್ತು.ಆದರೆ, ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುವುದರಿಂದ ಮುನ್ನಾ ದಿನವಾದ ಶನಿವಾರ ಜನ ಹಾಗೂ ವಾಹನ ಸಂಚಾರ ಎಂದಿಗಿಂತ ಹೆಚ್ಚಿತ್ತು. ಮಾರುಕಟ್ಟೆಪ್ರದೇಶಗಳಲ್ಲಿ ದಿನಸಿ, ತರಕಾರಿ ಖರೀದಿಸುವವರ ಸಂಖ್ಯೆ ಹೆಚ್ಚಿತ್ತು.

ಭಾನುವಾರ ಖಾಸಗಿ, ಸರ್ಕಾರಿ ವಾಹನಗಳ ಸಂಚಾರ ಸೇರಿದಂತೆ ದಿನವಿಡಿ ಕರ್ಪ್ಯೂ ಇರುವುದರಿಂದ ಶನಿವಾರದೇ ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ಜನ ತೊಡಗಿಕೊಂಡಿದ್ದಾರೆ. ಪ್ರತಿ ದಿನ ರಾತ್ರಿ 8 ಗಂಟೆಯಿಂದಲೇ ಕರ್ಪ್ಯೂ ಇರುವುದರಿಂದ ಇನ್ನು ಏನಾದರೂ ದಿನಬಳಕೆ ಸಾಮಗ್ರಿ ಬೇಕಾದರೆ ಸೋಮವಾರದವರೆಗೆ ಕಾಯಬೇಕಾಗುತ್ತದೆ ಎಂದುಕೊಂಡು ಜನ ಅಗತ್ಯಕ್ಕಿಂತ ಹೆಚ್ಚೇ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡುಬಂತು.

ರಾಣಿಬೆನ್ನೂರು: ಬಸ್‌ ತಂಗುದ್ದಾಣದಲ್ಲಿ ಕೊರೋನಾ ಶಂಕಿತನ ಶವ ಇಟ್ಟು ಹೋದರು!

ಭಾನುವಾರ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌, ಆಟೋ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ಬಂದ್‌ ಇರಲಿದೆ. ಅದೇ ರೀತಿ ಅಂಗಡಿ ಮುಂಗಟ್ಟುಗಳೂ ಬಂದ್‌ ಇರಲಿವೆ. ಈಗಾಗಲೇ ಪೊಲೀಸರು ಭಾನುವಾರದ ಲಾಕ್‌ಡೌನ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
 

Follow Us:
Download App:
  • android
  • ios