Asianet Suvarna News Asianet Suvarna News

ನಂದಿ ಬೆಟ್ಟಕ್ಕೆ ಒಂದೇ ದಿನ 9 ಸಾವಿರ ಪ್ರವಾಸಿಗರು

ನಂದಿಬೆಟ್ಟಕ್ಕೆ  ಸಾವಿರಾರು ಮಂದಿ ಜನಸಾಗರವೇ ಹರಿದು ಬಂದಿದೆ. ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಸಾವಿರಾರು ಸಮಖ್ಯೆಯಲ್ಲಿ ತೆರಳಿದ್ದಾರೆ. 

People Rush To Nandi Hill snr
Author
Bengaluru, First Published Nov 16, 2020, 8:45 AM IST

ಚಿಕ್ಕಬಳ್ಳಾಪುರ/ಕೋಲಾರ (ನ.16): ದೀಪಾವಳಿ ಹಿನ್ನಲೆಯಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಸಿಕ್ಕಿರುವುದರ ಜೊತೆಗೆ ಭಾನುವಾರ ವೀಕೆಂಡ್‌ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬೇಟಿ ನೀಡಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯ ಸವಿದರು.

ಭಾನುವಾರ ಒಂದೇ ದಿನ ಗಿರಿಧಾಮಕ್ಕೆ 8 ರಿಂದ 9 ಸಾವಿರ ಪ್ರವಾಸಿಗರು ಆಗಮಿಸಿದ್ದರೆಂದು ನಂದಿಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಇನ್ನೂ ಸೆಲ್ಪಿಸ್ಟಾಟ್‌ ಅವುಲುಬೆಟ್ಟಕ್ಕೆ ಭಾನುವಾರ ಸಾವಿರಕ್ಕೂ ಅಧಿಕ ಯುವಕರು, ಯುವತಿಯರು ಭೇಟಿ ನೀಡಿದ್ದರು.

ಅನ್‌ ಲಾಕ್ ಖುಷಿಯಲ್ಲಿ ನಂದಿ ಬೆಟ್ಟದ ಕಡೆ ಹೊರಟವರು ಎಲ್ಲ ಮರೆತರು! ...

ಕೋಟಿಲಿಂಗೇಶ್ವರಕ್ಕೆ ಭಕ್ತರ ದಂಡು:  ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆದವು. ಶನಿವಾರ ಮತ್ತು ಭಾನುವಾರ ದೀಪಾವಳಿ ಪೂಜೆಗೆ ಹೆಚ್ಚು ಜನ ಆಗಮಿಸಿದ್ದರು. ಶನಿವಾರ ಸುಮಾರು 800 ಮಂದಿ ಆಗಮಿಸಿದರೆ ಭಾನುವಾರ 1 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು ಎಂದು ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ರಮೇಶ್‌ ತಿಳಿಸಿದರು.

ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿಯೂ ಶನಿವಾರ ಮತ್ತು ಭಾನುವಾರು ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮುಳಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ, ಈಶ್ವರ ದೇವಸ್ಥಾನ ಹಾಗು ಕುರುಡುಮಲೆ ವಿನಾಯಕನ ದೇವಸ್ಥಾನಗಳಲ್ಲಿಯೂ ಜನ ಹೆಚ್ಚಾಗಿ ಆಗಮಿಸಿ ಪೂಜೆ ಸಲ್ಲಿಸಿದರು.

Follow Us:
Download App:
  • android
  • ios