ಬೆಂಗಳೂರು(ಏ.12): ಲಾಕ್‌ಡೌನ್ ನಡುವೆಯು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿಸಿದ  ಘಟನೆ ಮೈಸೂರು ರಸ್ತೆಯಲ್ಲಿ ಇಂದು(ಭಾನುವಾರ) ನಡೆದಿದೆ. ಭಾನುವಾರ ಬಂದರೆ ಸಾಕು ಚಿಕನ್‌, ಮಟನ್‌, ಫಿಶ್‌ಗೆ ಭಾರೀ ಬೇಡಿಕೆ ಬರುತ್ತದೆ. 

ಜನರು ಸಾಲುಗಟ್ಟಿ ನಿಂತು ಮಟನ್‌ ಖರೀದಿಸಿದ್ದಾರೆ. ಮಾಸ್ಕ್ ಇಲ್ಲದೆ ಬಂದ್ರೇ ಮಟನ್ ಇಲ್ಲ ಎಂದು ಅಂಗಡಿ ಮಾಲೀಕರು ಬೋರ್ಡ್‌ ಹಾಕಿದ್ದಾರೆ. ಹೀಗಾಗಿ ಜನರು ಶಿಸ್ತಿನ ಸಿಪಾಯಿಗಳಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಸಿ ಮಟನ್ ಖರೀದಿಸಿದ್ದಾರೆ. 

ಭಾನುವಾರದ ಬಾಡೂಟ, ಮೈಸೂರಿನಲ್ಲಿ ಕೊಳೆತ ಚಿಕನ್ ಮಾರಾಟ!

ಲಾಕ್‌ಡೌನ್‌ ಇರುವುದರಿಂದ ಮಾಂಸದ ಬೆಲ್ ಹೆಚ್ಚಾಗಿದೆ. ಚಿಕನ್ ಬೆಲೆ ಕೆಜಿಗೆ 160 ಆದರೆ, ಮಟನ್ ಕೆಜಿಗೆ 750 ರು. ಆಗಿದೆ. ಬೆಲೆ ಎಷ್ಟೇ ಹೆಚ್ಚಾದರೂ ಮಾಂಸ ಮಾರಾಟ ಕಡಿಮೆಯಾಗಿಲ್ಲ. ಇಂದು ಭಾನುವಾರ ಆಗಿದ್ದರಿಂದ ಮಾಂಸ ಮಾರಾಟದಲ್ಲಿ ತುಸು ಹೆಚ್ಚಾಗಿದೆ.