ಲಾಕ್‌ಡೌನ್‌ನಲ್ಲೂ ಮೀನು ಮಾರಾಟ ಜೋರು
ಲಾಕ್‌ಡೌನ್ ಇದ್ದರೂ ನಗರದ ಹಳೇ ಬಸ್ ನಿಲ್ದಾಣ, ಯಡಳ್ಳಿ ಸಮೀಪದ ಮೀನು ಮಾರಾಟ ಸ್ಥಳದಲ್ಲಿ ಜನದಟ್ಟಣೆ ಕಂಡುಬಂತು. ವಿಷಯ ತಿಳಿದ ಅಧಿಕಾರಿಗಳು, ಪೊಲೀಸರು ಹಳೇ ಬಸ್ ನಿಲ್ದಾಣದ ಮೀನು ಮಾರುಕಟ್ಟೆಗೆ ತೆರಳಿ, ಮಳಿಗೆಗಳಿಗೆ ಬೀಗ ಜಡಿದರು.
ಶಿರಸಿ(ಏ.07): ಲಾಕ್‌ಡೌನ್ ಇದ್ದರೂ ನಗರದ ಹಳೇ ಬಸ್ ನಿಲ್ದಾಣ, ಯಡಳ್ಳಿ ಸಮೀಪದ ಮೀನು ಮಾರಾಟ ಸ್ಥಳದಲ್ಲಿ ಜನದಟ್ಟಣೆ ಕಂಡುಬಂತು. ವಿಷಯ ತಿಳಿದ ಅಧಿಕಾರಿಗಳು, ಪೊಲೀಸರು ಹಳೇ ಬಸ್ ನಿಲ್ದಾಣದ ಮೀನು ಮಾರುಕಟ್ಟೆಗೆ ತೆರಳಿ, ಮಳಿಗೆಗಳಿಗೆ ಬೀಗ ಜಡಿದರು.
ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಾರೆ. ಆದರೆ, ಬೆಳಗ್ಗೆ 7 ಗಂಟೆಗಾಗಲೇ ಮೀನು ಖರೀದಿಗೆಂದು ಜನರು ಮಾರುಕಟ್ಟೆಬಳಿ ಸೇರಿದ್ದರು. ಪೊಲೀಸರು ಬರುತ್ತಿದ್ದಂತೆ ಎಲ್ಲರೂ ಚದುರಿದರು. ಡಿವೈಎಸ್ಪಿ ಜಿ.ಟಿ. ನಾಯಕ, ಸಿಪಿಐ ಪ್ರದೀಪ ಬಿ.ಯು. ಅವರು ಮೀನು ಮಾರಾಟಗಾರರರಿಗೆ ಎಚ್ಚರಿಕೆ ನೀಡಿ, ಮಾರುಕಟ್ಟೆಯ ಬಾಗಿಲಿಗೆ ಬೀಗ ಹಾಕಿದರು.
ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ಮತ್ತೆ 28 ದಿನ ಲಾಕ್‌ಡೌನ್!
ಔಷಧ, ಆಸ್ಪತ್ರೆಗಾಗಿ ಹಳ್ಳಿಯಿಂದ ಬಂದವರ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ. ಆದರೆ ಅನಗತ್ಯವಾಗಿ ಓಡಾಡುವವರು, ಲಾಕ್‌ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರದೀಪ ಬಿ.ಯು. ಹೇಳಿದ್ದಾರೆ.
ಜಿಲ್ಲೆಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಒಂದೇ ವಾಹನದಲ್ಲಿ ಬಂದ ಭಟ್ಕಳದ ದಿನೇಶ ನಾಯ್ಕ, ಯೋಗೀಶ ದೇವಾಡಿಗ, ಗಜಾನನ ನಾಯ್ಕ, ನಾಗರಾಜ ನಾಯ್ಕ, ಸತೀಶ ನಾಯ್ಕ, ಮಂಜುನಾಥ ನಾಯ್ಕ, ಜಗದೀಶ ನಾಯ್ಕ, ಗಿರೀಶ ನಾಯ್ಕ, ಗಣಪತಿ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.