ಕೊರೋನಾ ವೈರಸ್‌ ನಿಯಂತ್ರಿಸಲು ವಿಶ್ವದಾದ್ಯಂತ ಅನುಸರಿಸಲಾಗುತ್ತಿರುವ ಲಾಕ್‌ಡೌನ್‌ ಪ್ರಕ್ರಿಯೆ ಹೇಗಿರಬೇಕೆಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರೊಟೋಕಾಲ್‌ ಬಿಡುಗಡೆ ಮಾಡಿದ್ದು, ಭಾರತ ಅನುಸರಿಸರಿಸುತ್ತಿರುವ ಕ್ರಮವೂ ಅದೇ ತರನಾಗಿದೆ ಎಂಬ ಪ್ರಕಟಣೆಯೊಂದು ವೈರಲ್‌ ಆಗುತ್ತಿದೆ.

ಅದರಲ್ಲಿ ಮೊದಲನೇ ಹಂತದಲ್ಲಿ ಒಂದು ದಿನ ಲಾಕ್‌ ಡೌನ್‌, ಎರಡನೇ ಹಂತದಲ್ಲಿ 21ದಿನ, ಅನಂತರ 5 ದಿನ ಬಿಡುವು. ಮೂರನೇ ಹಂತದಲ್ಲಿ 28 ದಿನ ಲಾಕ್‌ ಡೌನ್‌ ಮತ್ತೆ 5 ದಿನ ಬಿಡುವು ನಾಲ್ಕನೇ ಹಂತದಲ್ಲಿ 15 ದಿನ ಲಾಕ್‌ಡೌನ್‌ ಮಾಡಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

Fact Check: ಮೇ 4 ರ ವರೆಗೂ ಮುಂದುವರೆಯುತ್ತಾ ಲಾಕ್‌ಡೌನ್‌?

ಭಾರತ ಸರ್ಕಾರವೂ ಲಾಕ್‌ಡೌನ್‌ ವೇಳೆ ಇದೇ ಶಿಷ್ಟಾಚಾರವನ್ನು ಅನುಸರಿಸುತ್ತಿದೆ. ಏಪ್ರಿಲ್‌ 14ಕ್ಕೆ ಲಾಕ್‌ಡೌನ್‌ ಮುಗಿದ ನಂತರ ಮತ್ತೆ 5 ದಿನ ಬಿಡುವು ನೀಡಿ ಏಪ್ರಿಲ್‌ 20ರಿಂದ ಮೇ 18ರ ವರೆಗೆ 28 ದಿನ ಲಾಕ್‌ಡೌನ್‌ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಡಬ್ಲ್ಯು ಎಚ್‌ಒ ಲೋಗೋದೊಂದಿಗೆ ಇದು ವಾಟ್ಸ್‌ಆ್ಯಪ್‌, ಟ್ವೀಟರ್‌, ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ.

Scroll to load tweet…

ಆದರೆ ಇದು ನಿಜವೇ ಎಂದು ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು ಎಂಬುದು ಖಚಿತವಾಗಿದೆ. ಬೂಮ್‌, ಡಬ್ಲ್ಯು ಎಚ್‌ಒ ಪ್ರತಿನಿಧಿಯೊಂದಿಗೆ ಸ್ಪಷ್ಟನೆ ಪಡೆದಿದ್ದು ಅವರು ಈ ಸುದ್ದಿ ಸುಳ್ಳು, ಡಬ್ಲ್ಯುಎಚ್‌ಒ ಲಾಕ್‌ಡೌನ್‌ ಬಗ್ಗೆ ಯಾವುದೇ ಪ್ರೊಟೋಕಾಲ್‌ ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಲಾಕ್‌ಡೌನ್‌ ಮುಂದುವರಿಕೆ/ ಹಿಂತೆಗೆತದ ಬಗ್ಗೆ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಏಪ್ರಿಲ್‌ 10ರ ನಂತರ ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ ಈ ಸುದ್ದಿ ಸುಳ್ಳು.