Asianet Suvarna News Asianet Suvarna News

Vijayanagara| ಈ ವರ್ಷವೂ ‘Hampi Utsav’ ಆಯೋಜಿಸಿ

*  ಸ್ಥಳೀಯ ಕಲಾವಿದರರಿಂದ ಹೆಚ್ಚಿದ ಕೂಗು
*  ಮುಂದಿನ ವರ್ಷ ಆಚರಣೆಗೆ ಜಿಲ್ಲಾಡಳಿತ ಆಸಕ್ತಿ
*  ಹಂಪಿ ಉತ್ಸವ ನಡೆಸಿದರೆ ಸ್ಥಳೀಯ ಕಲಾವಿದರಿಗೆ ಅನುಕೂಲ
 

People of Vijayanagara District Demaning for Host the Hampi Utsav grg
Author
Bengaluru, First Published Nov 8, 2021, 12:18 PM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ನ.08):  ವಿಜಯನಗರ(Vijayanagara) ಜಿಲ್ಲಾ ಉತ್ಸವ ನಡೆದ ಹಿನ್ನೆಲೆ ಈ ಬಾರಿ ಹಂಪಿ ಉತ್ಸವ(Hampi Utsav) ನಡೆಸಲು ವಿಜಯನಗರ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಉತ್ಸವ ನಡೆಸದಿದ್ದರೆ, ಸ್ಥಳೀಯ ಕಲಾವಿದರಿಗೆ ತೊಂದರೆಯಾಗಲಿದ್ದು, ಉತ್ಸವ ನಡೆಯಲಿ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

ಬರಗಾಲ(Drought), ಉಪಚುನಾವಣೆ(Byelection) ಕೊರೋನಾ(Coronavirus) ನೆಪದಲ್ಲಿ ಕಳೆದ ಎರಡು ಮೂರು ವರ್ಷದಿಂದ ಸರಿಯಾಗಿ ಉತ್ಸವ ಮಾಡಿಲ್ಲ. ಈ ಸಲ ಸರ್ಕಾರ ಉತ್ಸವಕ್ಕಾಗಿ ಐದು ಕೋಟಿ ರು. ಮಂಜೂರು ಕೂಡ ಮಾಡಿದೆ. ಹಾಗಿದ್ದರೂ ಉತ್ಸವ ನಡೆಸಲು ಜಿಲ್ಲಾಡಳಿತ(District Administration)ಮೀನಮೇಷ ಎಣಿಸುತ್ತಿದೆ.

ಮುಂದಿನ ವರ್ಷ ಇತಿಹಾಸ ನೆನಪಿಟ್ಟುಕೊಳ್ಳುವಂತೆ ಹಂಪಿ ಉತ್ಸವ: ಆನಂದ ಸಿಂಗ್‌

ಉತ್ಸವ ಯಾಕಿಲ್ಲ?:

ಅ. 2 ಮತ್ತು 3ರಂದು ಎರಡು ದಿನಗಳವರೆಗೆ ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನಾ ಸಮಾರಂಭ ಹಿನ್ನೆಲೆ ವಿಜಯನಗರ ಜಿಲ್ಲಾ ಉತ್ಸವ ನಡೆಸಲಾಗಿತ್ತು. ಹಾಗಾಗಿ ಈಗ ಮತ್ತೊಮ್ಮೆ ಹಂಪಿ ಉತ್ಸವ ನಡೆಸುವುದು ಕಷ್ಟ, ಮುಂದಿನ ವರ್ಷ ಉತ್ಸವ ನಡೆಸೋಣ ಎಂಬ ಇರಾದೆಯನ್ನು ಜಿಲ್ಲಾಡಳಿತ ಹೊಂದಿದೆ. ಮುಂದಿನ ವರ್ಷ ಅಕ್ಟೋಬರ್‌ 2, 3 ಮತ್ತು 4ರಂದು ಉತ್ಸವ ನಡೆಸುವುದೋ ಇಲ್ಲವೇ ನವೆಂಬರ್‌ 3, 4 ಮತ್ತು 5ರಂದು ಉತ್ಸವ ನಡೆಸುವುದು ಎಂಬ ಚರ್ಚೆಯಲ್ಲಿ ಜಿಲ್ಲಾಡಳಿತ ಮುಳುಗಿದೆ. ಈಗ ಉತ್ಸವಕ್ಕೆ ಅನುದಾನ(Grant) ಬಂದಿದ್ದರೂ ಜಿಲ್ಲಾಡಳಿತ ಉತ್ಸವ ಏಕೆ ನಡೆಸುತ್ತಿಲ್ಲ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.

ಹಣ ಮೀಸಲು:

ಮೈಸೂರು ದಸರಾ(Mysuru Dasara) ಮಾದರಿಯಲ್ಲಿ ಹಂಪಿ ಉತ್ಸವಕ್ಕೆ 10 ಕೋಟಿ ಮೀಸಲಿಡಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಸರ್ಕಾರಕ್ಕೆ(Government of Karnataka) ಪ್ರಸ್ತಾವನೆ(Proposal) ಸಲ್ಲಿಸಿದ್ದಾರೆ. ನ. 8ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ(Cabinet Meeting) ಈ ಬಗ್ಗೆ ಚರ್ಚೆಗೆ ಬರುವ ಸಾಧ್ಯತೆ ಇತ್ತು. ಆದರೆ, ಹಣಕಾಸು ಇಲಾಖೆ ಈ ರೀತಿ ಹಣ ಮೀಸಲಿಡಲು ಬರುವುದಿಲ್ಲ. ಬದಲಿಗೆ ಪ್ರತಿವರ್ಷ ಜಿಲ್ಲಾಡಳಿತ ಉತ್ಸವ ಕುರಿತು ಆರ್ಥಿಕ ವೆಚ್ಚ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಅನುಮೋದಿಸಲಾಗುವುದು ಎಂದು ತಿಳಿಸಿದೆ. ಹಾಗಾಗಿ ಸಚಿವ ಸಂಪುಟದಲ್ಲಿ ಹಂಪಿ ಉತ್ಸವಕ್ಕೆ ಹಣ ಮೀಸಲಿಡುವ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಕಡಿಮೆ ಇದೆ.

ಉತ್ಸವದ ಹಿನ್ನೆಲೆ:

ಹಂಪಿಯನ್ನು (Hampi) ಪರಿಚಯಿಸುವ ಮೊದಲ ಪ್ರಯತ್ನ 1970ರ ಆರಂಭದಲ್ಲಿ ನಡೆಯಿತು. ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಕಮಲ ಮಹಲ್‌ನ ಆವರಣದಲ್ಲಿ ಪ್ರವಾಸಿ ಉತ್ಸವ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಇಂಥ ಪ್ರವಾಸಿ ಉತ್ಸವ ಮುಂದೆ 1987ರಲ್ಲಿ ಕನಕ- ಪುರಂದರ ಉತ್ಸವವಾಗಿ ರೂಪಾಂತರಗೊಂಡಿತು. 1988ರ ಅಕ್ಟೋಬರ್‌ 24ರಿಂದ 26ರ ವರೆಗೆ ಮೂರು ದಿನಗಳ ಕಾಲ ವಿಜಯನಗರ ವೈಭವ ದರ್ಶನ ಹೆಸರಿನಲ್ಲಿ ಉತ್ಸವ ನಡೆಯಿತು. 1997ರಲ್ಲಿ ಪ್ರತಿವರ್ಷ ನವೆಂಬರ್‌ 3, 4, 5ರಂದು ಹಂಪಿ ಉತ್ಸವ ನಡೆಸಲು ಸರ್ಕಾರ ತೀರ್ಮಾನಿಸಿತು.

'ಕೈ ಮುಗಿಯುತ್ತೇನೆ, ಮುಸ್ಲಿಮರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ'

2001ರಲ್ಲಿ ಬರಗಾಲದ ಹಿನ್ನೆಲೆ ಒಂದೇ ದಿನ ಉತ್ಸವ ನಡೆಸಲಾಯಿತು. 2003ರ ಬಳಿಕ 2009ರ ವರೆಗೆ ಪ್ರತಿವರ್ಷ ನವೆಂಬರ್‌ನಲ್ಲೇ ಉತ್ಸವ ನಡೆಸಲಾಯಿತು. 2010ರ ಜನವರಿ 27ರಿಂದ 29ರ ವರೆಗೆ ಶ್ರೀಕೃಷ್ಣದೇವರಾಯರ(Krishnadevaraya) 500ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬರಗಾಲ ಹಿನ್ನೆಲೆ 2011ರ ಬಳಿಕ ಉತ್ಸವ ನಡೆಸಲಾಗಲಿಲ್ಲ. 2014 ಮತ್ತು 2015ರಲ್ಲಿ ಉತ್ಸವ ನಡೆಸಲಾಯಿತು. ಆನಂತರ ಸಂತೋಷ್‌ ಲಾಡ್‌(Santosh Lad) ಅವರು 2016 ಮತ್ತು 2017ರಲ್ಲಿ ಉತ್ಸವ ನಡೆಸಿದರು.

2018ರಲ್ಲಿ ಬರಗಾಲ, ಉಪಚುನಾವಣೆ ಹೆಸರಲ್ಲಿ ಮೂಂದೂಡಲಾಯಿತು. 2018 ಉತ್ಸವವನ್ನು 2019 ಫೆಬ್ರವರಿಯಲ್ಲಿ 2019ರಲ್ಲಿ ಮಾಡಬೇಕಾದ ಉತ್ಸವವನ್ನು 2020ರ ಜನವರಿಯಲ್ಲಿ ಮತ್ತು 2020ರಲ್ಲಿ ಮಾಡಬೇಕಾದ ಉತ್ಸವ 2020ರ ನವೆಂಬರ್‌ 13ರಂದು ಸರಳವಾಗಿ ಒಂದು ದಿನ ಆಚರಣೆ ಮಾಡಲಾಯಿತು.

ಹಂಪಿ ಉತ್ಸವ ಕೂಡ ಪ್ರತಿವರ್ಷ ಮೂರು ದಿನಗಳವರೆಗೆ ನಡೆಯಲಿ ಎಂಬ ಕೂಗು ಈಗ ಕಲಾವಿದರ ವಲಯದಲ್ಲಿ ಎದ್ದಿದೆ. ಆದರೆ, ವಿಜಯನಗರ ಜಿಲ್ಲಾಡಳಿತ ಮಾತ್ರ ಈ ವರ್ಷ ಉತ್ಸವ ನಡೆಸುವುದರತ್ತ ಆಸಕ್ತಿ ತೋರದಂತಾಗಿದೆ.
ಹಂಪಿ ಉತ್ಸವ ನಡೆಸಿದರೆ ಸ್ಥಳೀಯ ಕಲಾವಿದರಿಗೆ(Artist) ಅನುಕೂಲವಾಗಲಿದೆ. ಜತೆಗೆ ಪರಂಪರೆಯನ್ನು(Heritage) ಉಳಿಸಿ ಬೆಳೆಸಿದಂತಾಗಲಿದೆ. ಈ ವರ್ಷವೂ ಸರ್ಕಾರ ಮೂರು ದಿನಗಳವರೆಗೆ ಉತ್ಸವ ನಡೆಸಲಿ ಎಂದು ವಿಜಯನಗರ ಜಿಲ್ಲೆಯ ಸ್ಥಳೀಯ ಕಲಾವಿದರಾದ ಅಂಗಡಿ ವಾಮದೇವ ತಿಳಿಸಿದ್ದಾರೆ. 

ಈಗಾಗಲೇ ವಿಜಯನಗರ ಜಿಲ್ಲಾ ಉತ್ಸವ ನಡೆಸಲಾಗಿದೆ. ಹಾಗಾಗಿ ಮುಂದಿನ ವರ್ಷ ಉತ್ಸವ ನಡೆಸಲಾಗುವುದು. ಉತ್ಸವಕ್ಕೆ ಬಂದಿರುವ ಐದು ಕೋಟಿ ರು.ಯನ್ನು ಹಂಪಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.
 

Follow Us:
Download App:
  • android
  • ios