'ಕೈ ಮುಗಿಯುತ್ತೇನೆ, ಮುಸ್ಲಿಮರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ'

*  ಕೊರೋನಾ ವಾರಿಯರ್ಸ್‌ಗಳಿಗೆ ಸನ್ಮಾನ ಸಮಾರಂಭದಲ್ಲಿ ಸಂಸದ ಸಿದ್ದೇಶ್ವರ ಮನವಿ
*  ಉಪಚುನಾವಣೆಗಳಿಗೂ ತೈಲಬೆಲೆ ಇಳಿಕೆಗೂ ಯಾವುದೇ ಸಂಬಂಧವಿಲ್ಲ 
*  ಶೀಘ್ರ ಅಡುಗೆ ಅನಿಲ ಬೆಲೆ ಇಳಿಕೆ
 

Muslims Should Be Vaccinate Covid Vaccine Says MP GM Siddeshwara grg

ಹರಪನಹಳ್ಳಿ(ನ.07):  ಮುಸ್ಲಿಮರು(Muslim) ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಲಸಿಕೆ(Covid Vaccine) ಹಾಕಿಸಿಕೊಂಡಿಲ್ಲ ಎಂಬ ವರದಿ ಇದೆ. ಆದ್ದರಿಂದ ಕೈಮುಗಿದು ಕೇಳಿಕೊಳ್ಳುತ್ತೇನೆ ಮುಸ್ಲಿಂ ಸಮುದಾಯದವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ...

ಹೀಗೆ ಕೈಮುಗಿದು ಮುಸ್ಲಿಮರಲ್ಲಿ ಮನವಿ ಮಾಡಿದವರು ದಾವಣಗೆರೆ(Davanagere) ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ(GM Siddeshwara). ಪಟ್ಟಣದ ತರಳಬಾಳು ಕಲ್ಯಾಣಮಂಟಪದಲ್ಲಿ ಕೊರೋನಾ ವಾರಿಯರ್ಸ್‌ಗಳ(Corona Warriors) ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಸಿಕೆ ಹಾಕಿಸಿಕೊಳ್ಳುವುದರಿಂದ ಜೀವಕ್ಕೇನು ಅಪಾಯ ಇಲ್ಲ. ಅಪಪ್ರಚಾರ ನಂಬಬೇಡಿ. ಎಷ್ಟೇ ವ್ಯಾಕ್ಸಿನ್‌ ಬೇಕಾದರೂ ತರಿಸಿಕೊಡುತ್ತೇವೆ. ಪ್ರತಿಯೊಬ್ಬರೂ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು. ದೇಶದಲ್ಲಿ(India) 100 ಕೋಟಿ ಜನರಿಗೂ ಹೆಚ್ಚು ಲಸಿಕೆ ಹಾಕಲಾಗಿದೆ. ಪ್ರಪಂಚದಲ್ಲಿಯೇ(World) ಅತಿ ಹೆಚ್ಚು ಲಸಿಕೆ ಹಾಕಿದ ದೇಶ ಭಾರತ. ಅದು ಪ್ರಧಾನಿ ಮೋದಿಯವರ(Narendra Modi) ಹೆಗ್ಗಳಿಕೆ ಎಂದರು.

'ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಹೆಸರಿಡಿ'

ರಾಜ್ಯದಲ್ಲಿ(Karnataka) ಸಿಎಂ ಬೊಮ್ಮಾಯಿ(Basavaraj Bommai) ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್‌(Scholarship) ಮಂಜೂರು, ಮಾಸಾಶನ ಹೆಚ್ಚಳ ಹೀಗೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದರು.

ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ವೈದ್ಯೊ ನಾರಾಯಣ ಹರಿ ಎನ್ನುತ್ತಾರೆ. ಕೊರೋನಾ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೀರಿ. ಮುಂದೆಯೂ ಶಕ್ತಿ ಮೀರಿ ಜನರ ಸೇವೆ ಸಲ್ಲಿಸಿ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಕುಮಾರ ಮಾತನಾಡಿ, ಕೋವಿಡ್‌ ಲಸಿಕೆ ಹಾಕುವ ಕಾರ್ಯ ಶೇ. 80ರಷ್ಟು ಆಗಿದೆ. ಇನ್ನೂ 20ರಷ್ಟು ಇದೆ. ಎಲ್ಲರೂ ಸಹಕಾರ ನೀಡಬೇಕು ಎಂದರು.

ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಮುಂತಾದ ಕೊರೋನಾ ವಾರಿಯರ್ಸ್‌ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಹಸೀಲ್ದಾರ್‌ ಎಲ್‌ .ಎಂ. ನಂದೀಶ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್‌, ಉಪಾಧ್ಯಕ್ಷೆ ಭೀಮವ್ವ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಪುರಸಭಾ ಸದಸ್ಯರಾದ ಕಿರಣ್‌ ಶಾನ್‌ಬಾಗ, ರೊಕ್ಕಪ್ಪ, ತಾರಾಹನುಮಂತಪ್ಪ, ಸುಮಾ ವಾಗೀಶ, ಜಾವೇದ್‌, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಸಿ. ಪ್ರಕಾಶ್‌, ಟಿಎಚ್‌ಒ ದೇವರಾಜ, ಬಿಜೆಪಿ ತಾ. ಅಧ್ಯಕ್ಷ ಸತ್ತೂರು ಹಾಲೇಶ, ರಾಘವೇಂದ್ರ ಶೆಟ್ಟಿ, ಯು.ಪಿ. ನಾಗರಾಜ, ಬಸವರಾಜ ಇತರರು ಇದ್ದರು.

ಹೊಸಪೇಟೆ: ಪುನೀತ್‌ ಪ್ರತಿಮೆ ನಿರ್ಮಾಣಕ್ಕೆ ಸಚಿವ ಆನಂದ್‌ ಸಿಂಗ್‌ ಸಂಕಲ್ಪ

ಶೀಘ್ರ ಅಡುಗೆ ಅನಿಲ ಬೆಲೆ ಇಳಿಕೆ: ಸಿದ್ದೇಶ್ವರ

ಶೀಘ್ರ ಅಡುಗೆ ಅನಿಲ(LPG) ಬೆಲೆ ಸಹ ಇಳಿಕೆಯಾಗುತ್ತದೆ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ ಕಡಿಮೆಯಾಗಿ ದೇಶದ ಆದಾಯ ಹೆಚ್ಚಾಗುತ್ತಲಿದೆ. ತೈಲ ಬೆಲೆ ಕಡಿಮೆ ಮಾಡಲಾಗಿದೆ. ಯಾವಾಗ ಯಾವುದರ ಬೆಲೆ ಕಡಿಮೆ ಮಾಡಬೇಕು ಎಂಬುದು ದೇಶ ನಡೆಸುವರಿಗೆ ಗೊತ್ತು. ಆದಾಯ ನೋಡಿಕೊಂಡು ಬೆಲೆ ಇಳಿಕೆ ಮಾಡುತ್ತಾರೆ. ಮುಂದೆ ಅಗತ್ಯ ವಸ್ತುಗಳ ಬೆಲೆ ಸಹ ಕಡಿಮೆಯಾಗುತ್ತದೆ ಎಂದರು.

ಉಪಚುನಾವಣೆಗಳಿಗೂ(Byelection) ತೈಲಬೆಲೆ9Fuel) ಇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದರು. ಹಾನಗಲ್ಲ(Hanagal) ಉಪಚುನಾವಣೆ ಬಿಜೆಪಿ(BJP) ಸೋಲಿಗೆ ಹಲವಾರು ಕಾರಣಗಳಿವೆ. ನಿಮ್ಮ ಮುಂದೆ ಚರ್ಚೆ ಮಾಡಲು ಆಗಲ್ಲ. ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. 2023ಕ್ಕೆ ಕಾದು ನೋಡಿ ಎಂದರು.

ಪುನೀತ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಿ: ಕರುಣಾಕರರೆಡ್ಡಿ

ಪವರ್‌ಸ್ಟಾರ್‌(Powerstar) ಪುನಿತ್‌ ರಾಜಕುಮಾರ(Puneeth Rajkumar) ಅವರಿಗೆ ಯಾವ ಅವಾರ್ಡ್‌ ಕೊಟ್ಟರೂ ಕಡಿಮೆಯೇ ಪದ್ಮಶ್ರೀ(Padma Shri) ಸೇರಿದಂತೆ ಯಾವುದಾದರೂ ಕೊಡಬೇಕು ಎಂದು ಇಲ್ಲಿಯ ಶಾಸಕ ಜಿ. ಕರುಣಾಕರರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರ: 40 ಹಳ್ಳಿಗಳಲ್ಲಿ ‘ಜೀವಜಲ’ಕ್ಕೆ ಬರ

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟನೆ ಜತೆಗೆ ಸದ್ದಿಲ್ಲದೆ ಪುನಿತ್‌ ಸಾಕಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಅವರ ನಿಧನದ ನಂತರ ಬೆಳಕಿಗೆ ಬಂದಿದೆ. ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಮೃತರಾಗಬಾರದಿತ್ತು ಎಂದು ವಿಷಾಧಿಸಿದರು.

ಸಚಿವ ಸ್ಥಾನ ಆಕಾಂಕ್ಷಿ:

ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಪಕ್ಷ ತೀರ್ಮಾನ ಮಾಡಬೇಕು ಎಂದ ಅವರು, ಕೋವಿಡ್‌ನಿಂದ ಅಂತಹ ಅಭಿವೃದ್ಧಿ ಕುಂಠಿತಗೊಂಡಿಲ್ಲ. ಸಹೋದರ ಜನಾರ್ದನರೆಡ್ಡಿ ಅವರ ರಾಜಕೀಯ ಜೀವನದ ಬಗ್ಗೆ ಅವರೇ ತೀರ್ಮಾನ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ನೀಡುವ ಅನುದಾನದಲ್ಲಿ ವಿಜಯನಗರ ಜಿಲ್ಲೆಗೆ ತಾರತಮ್ಯವಾಗುತ್ತಿಲ್ಲ ಎಂದು ಸಮಜಾಯಿಸಿ ನೀಡಿದರು.
ತಾಲೂಕಿನಲ್ಲಿ ಕೆರೆಗಳಿಗೆ ನದಿ ನೀರು, ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜು ಯೋಜನೆ ಪ್ರಗತಿಯಲ್ಲಿದ್ದು, ಬ್ರಿಡ್ಜ್‌ ಕಂ ಬ್ಯಾರೇಜು ಯೋಜನೆಯನ್ನು ಗುತ್ತಿಗೆ ಪಡೆದ ಎಲ್‌ ಆ್ಯಂಡ್‌ ಟಿ ಕಂಪನಿ ವಿಳಂಬ ಮಾಡುತ್ತಿದೆ ಎಂದರು.
 

Latest Videos
Follow Us:
Download App:
  • android
  • ios