Asianet Suvarna News Asianet Suvarna News

ಚಿಕ್ಕಮಗಳೂರಿನ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಂದಿಗೆ ವಾಂತಿ, ಹೊಟ್ಟೆನೋವು

ಕೊರೋನಾ ಭೀತಿಯ ನಡುವೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ಒಂದೇ ದಿನ ಸುಮಾರು 50ಕ್ಕೂ ಹೆಚ್ಚು ಮಂದಿಗೆ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ.

 

People in chikkamagalur village suffers from vomiting and stomach ache
Author
Bangalore, First Published Apr 29, 2020, 10:42 AM IST

ಚಿಕ್ಕಮಗಳೂರು(ಏ.29): ಕೊರೋನಾ ಭೀತಿಯ ನಡುವೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ಒಂದೇ ದಿನ ಸುಮಾರು 50ಕ್ಕೂ ಹೆಚ್ಚು ಮಂದಿಗೆ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ.

ಸೋಮವಾರ ರಾತ್ರಿ ಕೆಲವರು ವಾಂತಿಯಿಂದ ಅಸ್ವಸ್ಥರಾಗಿದ್ದರು. ಮತ್ತೆ ಕೆಲವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮಂಗಳವಾರ ಬೆಳಗ್ಗೆವರೆಗೆ ಒಟ್ಟು 10 ಮಂದಿಯಲ್ಲಿ ವಾಂತಿ, 50 ಜನರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಎಲ್ಲರಿಗೂ ಭಾರತೀಬೈಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಮಂಗಳೂರಿನಿಂದ ಹೊಸದುರ್ಗಕ್ಕೆ ಬಂದ ಕಾರ್ಮಿಕರು: ರೈಲು ಹಳಿಯಲ್ಲಿ ಕಾಲ್ನಡಿಗೆ

ಗ್ರಾಮದಲ್ಲಿ ಸುಮಾರು 200 ಕುಟುಂಬಗಳಿದ್ದು, ಹಲವು ಮಂದಿಗಳಲ್ಲಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಜನರು ಆತಂಕದಲ್ಲಿದ್ದರು. ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ಮೂಡಿಗೆರೆ ತಾ ಆರೋಗ್ಯಾಧಿಕಾರಿ ಡಾ. ಸುಂದ್ರೇಶ್‌, ಈ ಗ್ರಾಮಕ್ಕೆ ತೆರೆದ ಬಾವಿಯಿಂದ ನೀರನ್ನು ಲೀಫ್ಟ್‌ ಮಾಡಿ ಕುಡಿಯಲು ಕೊಡಲಾಗುತ್ತಿದೆ.

ಸೋಮವಾರ ರಾತ್ರಿ ಈ ಭಾಗದಲ್ಲಿ ಮಳೆಯಾಗಿದ್ದು, ಕಲುಷಿತ ನೀರು, ಬಾವಿ ನೀರಿನೊಂದಿಗೆ ಸೇರಿಕೊಂಡು ಈ ಪ್ರಕರಣಗಳು ಕಾಣಿಸಿ ಕೊಂಡಿರಬಹುದೆಂದು ಉಹಿಸಲಾಗಿದೆ. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಲೇಷ್ಯಾದಲ್ಲಿ ಮಂಗಳೂರು ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ

ಮುಂದಿನ 36 ಗಂಟೆಯಲ್ಲಿ ವರದಿ ಬರಲಿದೆ. ನಂತರವಷ್ಟೇ ಖಚಿತವಾದ ಕಾರಣ ತಿಳಿದು ಬರಲಿದೆ. ಒಟ್ಟಾರೆ, ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿರುವ ಎಲ್ಲರೂ ಮಂಗಳವಾರ ಮಧ್ಯಾಹ್ನದ ವೇಳೆಗೆ ಆರೋಗ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios