ಮಂಗಳೂರು(ಏ.29): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಲೇಷಿಯಾದಲ್ಲಿ ಬಾಕಿಯಾದ ಮಂಗಳೂರು ಮೂಲದ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ದಿನಸಿ ಸಾಮಗ್ರಿಗಾಗಿ ಪರದಾಡುತ್ತಿದ್ದಾರೆ.

ಮಂಗಳೂರು ಮೂಲದ ನವೀನ್‌ ಮಲ್ಯ ಮತ್ತು ಮಹಿಮಾ ಗುಪ್ತಾ ಎಂಬ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಲಾಕ್‌ಡೌನ್‌ ತೊಂದರೆಗೆ ಒಳಗಾದವರು. ಇವರಿಬ್ಬರು ಮಂಗಳೂರು ಕೆಎಂಸಿ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು. ಇವರು ಸರ್ಜಿಕಲ್‌ ಇಂಟರ್ನ್‌ಶಿಪ್‌ಗೆ ಮಾ.12ರಂದು ಮಲೇಷಿಯಾ ತಲುಪಿದ್ದರು.

ತಬ್ಲಿಘಿ ಘಟನೆ ಪೋಸ್ಟ್ ಹಾಕಿದರವ್ರನ್ನ ಕೆಲಸದಿಂದ ಕಿತ್ತು ಹಾಕಿದ ಕೊಲ್ಲಿ ರಾಷ್ಟ್ರ

ಮಾ.13ರಿಂದ ಏ.9ರ ವರೆಗೆ ಅಲ್ಲಿನ ಅಂತಾರಾಷ್ಟ್ರೀಯ ಮೆಡಿಕಲ್‌ ವಿವಿಯಲ್ಲಿ ಇಂಟರ್ನ್‌ಶಿಪ್‌ ಇತ್ತು. ಆದರೆ ಮಾ.17ರಂದು ಮಲೇಷಿಯಾದಲ್ಲಿ ಕೊರೋನಾ ಕಾಣಿಸಿದ ಪರಿಣಾಮ, ಅಲ್ಲಿನ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು. ಭಾರತಕ್ಕೆ ಮರಳಲು ಟಿಕೆಟ್‌ ಕಾಯ್ದಿರಿಸಲು ಮುಂದಾದಾಗ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಈ ವಿದ್ಯಾರ್ಥಿಗಳು ಮಲೇಷಿಯಾದಲ್ಲೇ ದಿನ ಕಳೆಯುವಂತಾಗಿದೆ.

ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!

ಎರಡು ವಾರಗಳ ಇಂಟರ್ನ್‌ಶಿಪ್‌ಗೆ ತೆರಳಿದ ಈ ವಿದ್ಯಾರ್ಥಿಗಳು ತತ್ಕಾಲಕ್ಕೆ ವಿವಿಗೆ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿರುವ ಕಲ್ಯಾಣ ಮಂಟಪ, ಗುರುದ್ವಾರಗಳಲ್ಲಿ ಅನಿವಾಸಿ ಭಾರತೀಯರಿಗೆ ವಸತಿ ಸೌಕರ್ಯ ಏರ್ಪಡಿಸುತ್ತಿದ್ದಾರೆ. ಆದರೆ ಇವರು ಕೊರೋನಾ ಸೋಂಕಿನ ಭೀತಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಮನೆ ಮಂದಿಯ ಸೂಚನೆ ಮೇರೆಗೆ ಮನೆಯಲ್ಲೇ ಇದ್ದಾರೆ.

ಕೊಡಂಗಳ ನದಿಯಲ್ಲಿ ಪಿಪಿಇ ಪತ್ತೆ, ಕೊರೋನಾ ಭೀತಿ

ತಟ್ಟಿದ ಆರ್ಥಿಕ ಸಂಕಷ್ಟ: ಈಗಲೇ ಅವಧಿ ಮುಕ್ತಾಯಗೊಂಡರೂ ಅನಿವಾರ್ಯ ಕಾರಣಕ್ಕೆ ಬಾಡಿಗೆ ಮನೆಯಲ್ಲೇ ಕಳೆಯಬೇಕಾಗಿದೆ. ಆದರೆ ದುಬಾರಿ ಬಾಡಿಗೆ ತೆರಬೇಕಾಗಿರುವುದರಿಂದ ದುಡ್ಡಿಗೆ ಸಂಕಷ್ಟಬಂದೊದಗಿರುವುದಾಗಿ ಈ ವಿದ್ಯಾರ್ಥಿಗಳು ಕಳುಹಿಸಿದ ವಿಡಿಯೋ ತುಣುಕಿನಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿಗಳ ಪೋಷಕರು ನೆರವಾಗಿದ್ದಾರೆ. ಆದರೆ ಲಾಕ್‌ಡೌನ್‌ ಇನ್ನೆಷ್ಟುದಿನ ಹೀಗೆಯೇ ಮುಂದುವರಿಯುತ್ತದೆ ಎಂದು ಹೇಳಲಾಗುತ್ತಿಲ್ಲ ಎಂದು ವಿದ್ಯಾರ್ಥಿ ನವೀನ್‌ ಮಲ್ಯ ಕನ್ನಡಪ್ರಭ ಜೊತೆ ಆತಂಕ ತೋಡಿಕೊಂಡರು.

ತಾಯ್ನಾಡಿಗೆ ಮರಳಲು 6 ಸಾವಿರ ಭಾರತೀಯರ ನೋಂದಣಿ

ಮಲೇಷಿಯಾ ಅಧಿಕಾರಿಗಳು ಲಾಕ್‌ಡೌನ್‌ ತೆರವುಗೊಳಿಸುವ ಬಗ್ಗೆ ಪದೇ ಪದೇ ದಿನಾಂಕಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಲಾಕ್‌ಡೌನ್‌ ತೆರವಿನ ಲಕ್ಷಣ ಕಾಣುತ್ತಿಲ್ಲ. ಭಾರತದಲ್ಲಿ ಮೇ 3ರ ವರೆಗೂ ಲಾಕ್‌ಡೌನ್‌ ಇರುವುದರಿಂದ ಅಷ್ಟರೊಳಗೆ ವಿದೇಶದಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯರನ್ನು ಕರೆತರಲು ತುರ್ತು ವಿಮಾನ ಕಾರ್ಯಾಚರಣೆ ನಡೆಸುವಂತೆ ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಟ್ವೀಟ್‌ ಮೂಲಕ ವಿನಂತಿಸಿದ್ದಾರೆ.

ಕೊರೋನಾ ನಿಗ್ರಹಕ್ಕೆ ಪೂರ್ತಿ ಗ್ರಾಮವೇ ಉಪವಾಸ..!

ಲಾಕ್‌ಡೌನ್‌ ಅವಧಿಯಲ್ಲಿ ಆಗಾಗ ದಿನಸಿ ಸಾಮಗ್ರಿ ಕೊರತೆಯೂ ತಲೆದೋರಿದೆ. ನಾಲ್ಕೈದು ದಿನಗಳ ಕಾಲ ನಾವು ಕೇವಲ ಬ್ರೆಡ್‌ ಮತ್ತು ಹಣ್ಣು ತಿಂದು ದಿನ ಕಳೆದಿದ್ದೇವೆ. ಹಗಲು ವೇಳೆ ಅಡುಗೆ ಮಾಡಿ, ಪುಸ್ತಕ ಓದಿಕೊಂಡು ದಿನ ಕಳೆಯುತ್ತಿದ್ದೇವೆ. ನಮ್ಮಂತೆ 500ಕ್ಕೂ ಅಧಿಕ ಮಂದಿ ಕನ್ನಡಿಗರು ಇಲ್ಲಿದ್ದಾರೆ ಎಂದು ಕೆಎಂಸಿ ಮೆಡಿಕಲ್‌ ಕಾಲೇಜು ವೈದ್ಯಕೀಯ ವಿದ್ಯಾರ್ಥಿ ನವೀನ್‌ ಮಲ್ಯ ತಿಳಿಸಿದ್ದಾರೆ.

-ಆತ್ಮಭೂಷಣ್‌