ಮದುವೆ ತಂದಿದ್ದ ಆತಂಕ ಠುಸ್, ಗ್ರೀನ್‌ ಝೋನ್‌ನಲ್ಲಿ ಕೊಪ್ಪಳ ಸೇಫ್..!

ಕಳೆದೆರಡು ದಿನಗಳಿಂದ ಕೊಪ್ಪಳ ಜಿಲ್ಲೆಯ ಜನರ ನಿದ್ದೆ‌ ಕೆಡಿಸಿದ್ದ ಕೊಪ್ಪಳ ಜಿಲ್ಲೆ ನಿಲೋಗಲ್ ಗ್ರಾಮದ 18 ಜನರ ಸ್ಯಾಂಪಲ್‌ಗಳ ವರದಿ ಬಂದಿದೆ.

koppala safe from corona tension after Comes 18 Peoples suspected Report negative

ಕೊಪ್ಪಳ, (ಮೇ.10): ಕಳೆದೆರಡು ದಿನಗಳಿಂದ ಕೊಪ್ಪಳ ಜಿಲ್ಲೆಯ ಜನರ ನಿದ್ದೆ‌ ಕೆಡಿಸಿದ್ದ ನಿಲೋಗಲ್ ಗ್ರಾಮದ 18 ಜನರ ಸ್ಯಾಂಪಲ್‌ಗಳ ವರದಿ ನೆಗೆಟಿವ್ ಬಂದಿದ್ದು, ಜನರು ನಿರಾಳರಾಗಿದ್ದಾರೆ.

ಮೇ 9ರ ರಾತ್ರಿ ಕೊಪ್ಪಳ ಜಿಲ್ಲೆಯ ಸ್ಯಾಂಪಲ್ಸ್ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಬಂದಿವೆ. ಈ ಮೂಲಕ ಕೊಪ್ಪಳ ಜಿಲ್ಲೆ ಗ್ರೀನ್‌ ಝೋನ್‌ನಲ್ಲಿ ಸೇಫಾಗಿದೆ.

ಬಾಗಲಕೋಟೆಯಲ್ಲಿ ಕೊರೋನಾ ಅಟ್ಟಹಾಸ: ಕೊಪ್ಪಳದಲ್ಲೂ ಟೆನ್ಶನ್‌..!

ಬಾಗಲಕೋಟೆ ಜಿಲ್ಲೆಯಲ್ಲಿ ಮೇ 6ರಂದು 13 ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರ ಪೈಕಿ ಸೋಂಕು ದೃಢಪಟ್ಟಿರುವ ವ್ಯಕ್ತಿಯೊಬ್ಬನ ಮಗಳ ಮದುವೆ ಈಚೆಗೆ ನಡೆದಿತ್ತು. ಆ ಮದುವೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೊಗಲ್ ಗ್ರಾಮದ ಸುಮಾರು 20 ಜನರು ಪಾಲ್ಗೊಂಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿತ್ತು. 

ಈ ಮಾಹಿತಿಯನ್ನರಿತ ಜಿಲ್ಲಾಡಳಿತ ತಕ್ಷಣವೇ ಅಧಿಕಾರಿಗಳ ತಂಡವನ್ನು ನಿಲೋಗಲ್ ಗ್ರಾಮಕ್ಕೆ ಕಳುಹಿಸಿ, ಮದುವೆಯಲ್ಲಿ ಪಾಲ್ಗೊಂಡಿದ್ದ 18 ಜನರನ್ನು ಕ್ವಾರಂಟೈನ್ ಮಾಡಿ, ಅವರ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳಿಸಿತ್ತು.

ಇದರಿಂದ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ನಿಲೋಗಲ್ ಪ್ರಕರಣದ ವರದಿಗೆ ಇಡೀ ಜಿಲ್ಲೆಯ ಕಾದು ಕುಳಿತಿತ್ತು. ಹಸಿರು ವಲಯದಲ್ಲಿರುವ ಕೊಪ್ಪಳ ಕೇಸರಿ ವಲಯಕ್ಕೆ ಬರುತ್ತಾ ಎನ್ನುವ ಆತಂಕ ಜನರಲ್ಲಿತ್ತು.

ಹಾಗಾಗಿ ಮೇ 8 ರಂದು ಬರಬೇಕಿದ್ದ ವರದಿ ಬಗ್ಗೆ ಸಿಕ್ಕಾಪಟ್ಟೆ‌ ಕುತೂಹಲ ಇತ್ತು. ಆದ್ರೆ, ಇದೀಗ ವರದಿ ಒಂದು ದಿನ ತಡವಾಗಿ ಬಂದಿದ್ದರೂ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಈವರೆಗೂ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಜಿಲ್ಲೆಯ ಜನರು ಆತಂಕಕ್ಕೊಳಗಾಗಬೇಡಿ. ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮನವಿ ಮಾಡಿದ್ದಾರೆ. 

Latest Videos
Follow Us:
Download App:
  • android
  • ios