ಕೊಪ್ಪಳ: ಹಳ್ಳಿಗೂ ಅಂಟಿದ ಹೈದರಾಬಾದ್‌ ನಂಜು, ಆತಂಕದಲ್ಲಿ ಜನತೆ

ಯುವತಿ ತನ್ನ ಅಣ್ಣ ಹಾಗೂ ಅತ್ತಿಗೆ ಜತೆ ಬೇಸಿಗೆ ರಜೆಯಲ್ಲಿ ಹೈದರಾಬಾದ್‌ಗೆ ಹೋಗಿದ್ದಳು| ಜು. 1ರಂದು ಹಳೇಬಂಡಿಹರ್ಲಾಪುರ ಗ್ರಾಮಕ್ಕೆ ವಾಪಾಸ್‌ ಆಗಿದ್ದು, ಗ್ರಾಮಕ್ಕೆ ಬರುವ ಮುನ್ನ ಅದೇ ದಿನದಂದು ಗಂಗಾವತಿ ಆಸ್ಪೆತ್ರೆಯಲ್ಲಿ ಮೂವರು ಗಂಟಲು ದ್ರವ ತೆಗೆದುಕೊಳ್ಳಲಾಗಿತ್ತು| ವರದಿಯಲ್ಲಿ ಯುವತಿಗೆ ಸೋಂಕು ಇರುವುದು ದೃಢಪಟ್ಟಿದೆ|

People in anxiety for Coronavirus Positive Cases in Munirabad in Koppal district

ಮುನಿರಾಬಾದ್‌(ಜು.06):ಸಮೀಪದ ಹಳೇಬಂಡಿಹರ್ಲಾಪುರದಲ್ಲಿ ಭಾನುವಾರ ಒಂದು ಕೊರೋನಾ ಸೋಂಕು ಪತ್ತೆಯಾಗಿದೆ. ಹೈದರಾಬಾದ್‌ ನಂಟಿನಿಂದ ಗ್ರಾಮಕ್ಕೆ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಇದು ಗ್ರಾಮದಲ್ಲಿ ಮೊದಲ ಪ್ರಕರಣವಾಗಿದೆ. ಮುನಿರಾಬಾದ್‌ನ ಹಾಲೋಬ್ಲಾಕ್‌ ಪ್ರದೇಶದಲ್ಲಿ ಸಹ ಒಂದು ಪ್ರಕರಣ ಪತ್ತೆಯಾಗಿದೆ.

ಗ್ರಾಮದಲ್ಲಿ ವಾಸವಾಗಿರುವ ಯುವತಿ ತನ್ನ ಅಣ್ಣ ಹಾಗೂ ಅತ್ತಿಗೆ ಜತೆ ಬೇಸಿಗೆ ರಜೆಯಲ್ಲಿ ಹೈದರಾಬಾದ್‌ಗೆ ಹೋಗಿದ್ದಳು. ಜು. 1ರಂದು ಹಳೇಬಂಡಿಹರ್ಲಾಪುರ ಗ್ರಾಮಕ್ಕೆ ವಾಪಾಸ್‌ ಆಗಿದ್ದು, ಗ್ರಾಮಕ್ಕೆ ಬರುವ ಮುನ್ನ ಅದೇ ದಿನದಂದು ಗಂಗಾವತಿ ಆಸ್ಪೆತ್ರೆಯಲ್ಲಿ ಮೂವರು ಗಂಟಲು ದ್ರವ ತೆಗೆದುಕೊಳ್ಳಲಾಗಿತ್ತು. ವರದಿಯಲ್ಲಿ ಯುವತಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಿಟ್ನಾಳನ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನೆರವಿನೊಂದಿಗೆ ಆ ಯುವತಿಯ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದು ಯುವತಿಯ ಅಣ್ಣ ಮತ್ತು ಅತ್ತಿಗೆಯನ್ನು ಕ್ವಾರಂಟೈನ್‌ನಲ್ಲಿ ಇರಿಸಿದ್ದು ಯುವತಿಯನ್ನು ಚಿಕಿತ್ಸೆಗಾಗಿ ಕೊಪ್ಪಳಕ್ಕೆ ದಾಖಲಿಸಲಾಗಿದೆ.

ಕೊಪ್ಪಳ: ಕೊರೋನಾ ಅಟ್ಟಹಾಸ, 22 ಪಾಸಿಟಿವ್‌ ಕೇಸ್‌ ಪತ್ತೆ..!

ಮುನಿರಾಬಾದ್‌ನ ಹಾಲೋಬ್ಲಾಕ್‌ ನಿವಾಸಿ ಹಾಗೂ ಎಚ್‌ಆರ್‌ಜಿ ಕಾರ್ಖಾನೆಯಲ್ಲಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಈತ ವಾಹನ ಚಾಲಕನಾಗಿದ್ದು ಕಾರ್ಖಾನೆಯ ಸಿಬ್ಬಂದಿಯನ್ನು ಕರೆದುಕೊಳ್ಳುತ್ತಿದ್ದ. ಆತನೊಂದಿಗೆ ಇರುವ ಪ್ರಥಮ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಹಾಲೋಬ್ಲಾಕ್‌ನ್ನು ಅಧಿಕಾರಿಗಳು ಸೀಲ್ಡ್‌ಡೌನ್‌ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios