ಮಲೆನಾಡಿಗರು ಹೆರಾಲ್ಡ್ ಗೆ ಆತಿಥ್ಯ ನೀಡಿದ್ದಾರೆ. ಹಿಂದೂ, ಭಗವದ್ಗೀತೆ, ಅಯೋಧ್ಯೆ, ಶ್ರೀರಾಮನ ಬಗ್ಗೆ ಹೆರಾಲ್ಡ್‌ಗೆ ಮಾಹಿತಿ ನೀಡಿದ್ದಾರೆ. ವಾಸೇಗೌಡ, ಸಂಪತ್ ಎಂಬುವರು ಹೆರಾಲ್ಡ್ ಗೆ ಇಂಗ್ಲಿಷ್‌ನಲ್ಲೇ ಮಾಹಿತಿ ನೀಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಭಿಮಾನ ಹೊಂದ ಹೆರಾಲ್ಡ್ 

ಚಿಕ್ಕಮಗಳೂರು(ಜ.11):  ಇಂಗ್ಲೆಂಡ್‌ ಪ್ರಜೆ ಹೆರಾಲ್ಡ್‌ಗೂ ಮಲೆನಾಡಿಗರು ಅಯೋಧ್ಯೆಯ ಮಂತ್ರಾಕ್ಷತೆ ಹಂಚಿದ್ದಾರೆ. ಹೆರಾಲ್ಡ್ ಅವರು ಕೈಯಲ್ಲಿ ಓಂ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮೂಲದ ಹೆರಾಲ್ಡ್ ಸೈಕಲ್‌ನಲ್ಲೇ 25 ದೇಶ ಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಹೆರಾಲ್ಡ್ ಅವರು, ಮಂತ್ರಾಕ್ಷತೆಯನ್ನ ಇಂಗ್ಲೆಂಡ್‌ಗೆ ಕೊಂಡೊಯ್ಯುತ್ತೇನೆ ಎಂದು ತಿಳಿಸಿದ್ದಾರೆ. ಹೆರಾಲ್ಡ್ ಇದುವರೆಗೆ ಭಾರತಕ್ಕೆ 9ನೇ ಬಾರಿ ಭೇಟಿ ನೀಡಿದ್ದಾರೆ. ಸದ್ಯ ಹೆರಾಲ್ಡ್ ಅವರು ಚಿಕ್ಕಮಗಳೂರು ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ ಕ್ಯಾಂಪ್ ಹಾಕಿದ್ದಾರೆ. 

News Hour: ನಾವು ಕೊಟ್ಟ ಅನ್ನಭಾಗ್ಯ ಅಕ್ಕಿಯಿಂದ ರಾಮಮಂದಿರದ ಮಂತ್ರಾಕ್ಷತೆ!

ಮಲೆನಾಡಿಗರು ಹೆರಾಲ್ಡ್ ಗೆ ಆತಿಥ್ಯ ನೀಡಿದ್ದಾರೆ. ಹಿಂದೂ, ಭಗವದ್ಗೀತೆ, ಅಯೋಧ್ಯೆ, ಶ್ರೀರಾಮನ ಬಗ್ಗೆ ಹೆರಾಲ್ಡ್‌ಗೆ ಮಾಹಿತಿ ನೀಡಿದ್ದಾರೆ. ವಾಸೇಗೌಡ, ಸಂಪತ್ ಎಂಬುವರು ಹೆರಾಲ್ಡ್ ಗೆ ಇಂಗ್ಲಿಷ್‌ನಲ್ಲೇ ಮಾಹಿತಿ ನೀಡಿದ್ದಾರೆ. ಹೆರಾಲ್ಡ್ ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ.