ಬಳ್ಳಾರಿ: ಚಿರತೆ, ಕರಡಿ ಕಾಟಕ್ಕೆ ಹೈರಾಣಾದ ಜನತೆ..!

ಬಳ್ಳಾರಿ ನಗರದಲ್ಲಿರೋ ಗುಡ್ಡದಲ್ಲಿವೆ ಎರಡು ಚಿರತೆಗಳು, ಹಲಕುಂದಿ ಗ್ರಾಮಕ್ಕೆ ನಿತ್ಯ ಎಂಟ್ರಿ ನೀಡೋ ಜಾಂಬುವಂತ

People Fear About Leopard and Bear in Ballari grg

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ 

ಬಳ್ಳಾರಿ(ಆ.11):  ಬಳ್ಳಾರಿಯ ಜನವಸತಿ ಪ್ರದೇಶಗಳು ಒಂದು ರೀತಿಯಲ್ಲಿ ಕಾಡು ಪ್ರಾಣಿಗಳ ವಾಸಸ್ಥಾನವಾಗಿ ಮಾರ್ಪಾಡಾಗುತ್ತಿವೆಯೇ..? ಎನ್ನುವ ಅನುಮಾನ ಕಾಡುತ್ತಿದೆ. ಯಾಕಂದ್ರೆ, ಒಂದು ಕಡೆ ಚಿರತೆ, ಕಾಟ ಮತ್ತೊಂದು ಕಡೆ ಕರಡಿ ಕಾಟ.. ಹೀಗೆ ನಗರವನ್ನು ಸುತ್ತುವರೆದಿರೋ ಪ್ರಾಣಿಗಳ ಕಾಟದಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಅದರಲ್ಲೂ ನಗರದ ಹೃದಯ ಭಾಗದಲ್ಲಿ ಗುಡ್ಡಗಳ ಮೇಲೆ ಎರಡು ಚಿರತೆಗಳು ವಾಸ ಮಾಡುತ್ತಿದ್ದು, ಆಗೊಮ್ಮೆ ಈಗೊಮ್ಮೆ ಹೊರಗೆ ಬಂದು ಪೋಸ್ ಕೊಡುತ್ತಿವೆ. ಇನ್ನು ನಗರಕ್ಕೆ ಅಂಟಿಕೊಂಡಂತೆ ಇರೋ ಹಲಕುಂದಿ ಗ್ರಾಮದಲ್ಲಿ ರಾತ್ರಿಯ ವೇಳೆ ಕರಡಿ ಓಡಾಟ ಮಾಡ್ತಿರೋದು ಕೂಡ ಬಳ್ಳಾರಿ ಜನರ ನಿದ್ದೆಗೆಡಿಸುವಂತೆ ಮಾಡಿದೆ.

ನಿತ್ಯ ಸಂಜೆಯ ವೇಳೆ ಗುಡ್ಡದ ಮೇಲೆ ಬಂದು ಪೋಸ್ ಕೊಡುವ ಚಿರತೆ

ಹೀಗೆ ಎರಡು ಕಡೆ ಗುಡ್ಡದ ಮೇಲೆ ಬಂದು ಆಗೋಮ್ಮೆ ಈಗೋಮ್ಮೆ ಪೋಜ್ ಕೊಡುತ್ತಿರೋ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದೊಂದು ವಾರದಿಂದ ಹರಸಾಹಸ ಪಡುತ್ತಿದ್ದಾರೆ. ಆದ್ರೇ, ಜನರ ಕಣ್ಣಿಗೆ ಕಾಣೋ ಚಿರತೆ ಮಾತ್ರ ಅರಣ್ಯ ಇಲಾಖೆ ಇಟ್ಟಿರೋ ಬೋನಿಗೆ ಮಾತ್ರ ಬಿಳುತ್ತಿಲ್ಲ. ಹೀಗಾಗಿ ಗುಡ್ಡದ ಕೆಳ ಭಾಗದಲ್ಲಿರೋ ಸಂಜಯ್ ಗಾಂಧಿನಗರ, ಇಂಧ್ರ ನಗರದ ಬಳಿ ವಾಸ ಮಾಡೋ ಜನರು ಮನೆಯಿಂದ ಹೊರಗೆ ಬರೋದಕ್ಕೆ ಹೆದರುತ್ತಿದ್ದಾರೆ. ಇನ್ನೂ ಚಿರತೆ ಸೆರೆಯಾಗೋವರೆಗೂ ರಾತ್ರಿಯ ವೇಳೆ ಯಾರು ಕೂಡ ಒಬ್ಬೊಬ್ಬರಾಗಿ ಓಡಾಡಬೇಡಿ ಎಂದು ಪೊಲೀಸರು ಅನೌನ್ಸ್ ಮಾಡೋ ಮೂಲಕ ಜನರನ್ನು ಎಚ್ಚರಿಸೋ ಕೆಲಸವನ್ನು ಮಾಡ್ತಿದ್ದಾರೆ. ಒಂದು ಕಡೆ ಚಿರತೆ ಮತ್ತೊಂದು ಕಡೆ ಕರಡಿ ಎರಡನ್ನು ಸೆರೆಹಿಡಿಯುವಲ್ಲಿ ವಿಫಲವಾಗಿರೋದು ಜನಾಕ್ರೋಶಕ್ಕೆ ಕಾರಣವಾಗಿದೆ.

ಬಳ್ಳಾರಿ ಹೃದಯ ಭಾಗದ ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷ!

ಬೋನಿಟ್ರು ಬೀಳದ ಚಾಣಾಕ್ಷ ಚಿರತೆ

ಇನ್ನು ನಗರದ ಇನ್‌ಫ್ಯಾಂಟ್ರಿ ರಸ್ತೆಯ ದಯಾ ಕೇಂದ್ರದ ಬಳಿಯ ಗುಡ್ಡ ಪ್ರದೇಶದಲ್ಲಿರೋ ಚಿರತೆ  ಮಾತ್ರ ಕಳೆದ ಗುರುವಾರದಿಂದ ನಿತ್ಯ ಸಂಜೆ ಹೊರಗಡೆ ಬರೋದು ಒಂದಷ್ಟು ಪೋಜ್ ಕೊಡೋದು ಜನರ ಕಣ್ಣಿಗೆ ಕಾಣಿಸೋದು ಮಾಡುತ್ತಿದೆ. ಆದ್ರೇ, ತದನಂತರ ನಾಪತ್ತೆಯಾಗೋ ಚಿರತೆ ಎಲ್ಲಿಗೆ ಹೋಗ್ತದೆ ಅನ್ನೊದೇ ಗೊತ್ತಾಗೋದಿಲ್ಲ. ಹೀಗಾಗಿ ಜನರು ನಿತ್ಯ ಅತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಚಿರತೆಯಷ್ಡೇ ಅಲ್ಲ ಕರಡಿ ಕಾಟವೂ ಇದೆ

ಇದಿಷ್ಟು ಚರತೆ ಕಥೆಯಾದ್ರೇ, ಮತ್ತೊಂದು ಕಡೆ ನಗರಕ್ಕೆ ಅಂಟಿಕೊಂಡಂತೆ ಇರೋ ಹಲಕುಂದಿ ಗ್ರಾಮದಲ್ಲಿ ನಿತ್ಯ ರಾತ್ರಿಯ ವೇಳೆ ಮನೆಯ ಮುಂದೆ ಬರೋ ಕರಡಿ ಹೊರಗಡೆ ಇಡೋ ಆಹಾರ ಸೇರಿದಂತೆ ಇನ್ನಿತರ  ಪದಾರ್ಥಗಳನ್ನು ಹೊತ್ತುಕೊಂಡು ಹೋಗ್ತಿದೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರಾತ್ರಿಯ ವೇಳೆ ನಾಯಿಗಳು ಕೂಗಿಕೊಂಡಾಗ ಜನರು ಹೊರಗೆ ಬಂದು ನೇರವಾಗಿ ಕರಡಿಗಳನ್ನು ನೋಡಿದ್ದಾರೆ. ಬಡಿಗೆ ಮತ್ತು ಕಲ್ಲುಗಳಿಂದ ಹೊಡೆಯೋ ಮೂಲಕ ಕರಡಿಯನ್ನು ಊರಿನಿಂದಾಚೆ ಕಳುಹಿಸೋ ಕೆಲಸ ಮಾಡ್ತಿದ್ದಾರೆ‌. ಜನರು ಬಂದಾಗ ಓಡಿ ಹೋಗೋ ಕರಡಿ ರಾತ್ರಿಯಾದ್ರೇ ಮತ್ತೆ ಗ್ರಾಮದ ಕಡೆ ಬರುತ್ತಿದೆ.

ಕರಡಿ, ಚಿರತೆ ಎರಡನ್ನೂ ಸೆರೆ ಹಿಡಿಯಲು ಆಗ್ರಹ

ಸದ್ಯ ಬಳ್ಳಾರಿಯಲ್ಲಿರೋ ಎರಡು ಗುಡ್ಡದಲ್ಲಿ ಎರಡು ಚಿರತೆ ಸೇರಿದಂತೆ ಕರಡಿಯೊಂದು ನಗರವನ್ನು ಸುತ್ತುವರಿದಂತೆ ಕಾಣುತ್ತಿದ್ದು, ಕೂಡಲೇ ಅನಾಹುತವಾಗೋ ಮುನ್ನವೇ ಇವುಗಳನ್ನು ಸೆರೆಹಿಡಯೋ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡಬೇಕಿದೆ.
 

Latest Videos
Follow Us:
Download App:
  • android
  • ios