ಹಾಸನ [ಮಾ.20]: ನಗರದ ಗುಂಡೇಗೌಡನಕೊಪ್ಪಲು ಬಡಾವಣೆಯಲ್ಲಿ ಇರುವ ಬೃಹತಾಕಾರದ ಅರಳಿಮರದಿಂದ ಗುರುವಾರ ರಾತ್ರಿ ಕೆಲ ಹಕ್ಕಿಗಳು ಬಿದ್ದು ಸಾವನ್ನಪ್ಪಿವೆ.

ನೂರಾರು ನೀರು ಕಾಗೆ ಮತ್ತು ಬೆಳ್ಳು ಕೊಕ್ಕರೆಗಳು ಈ ಮರದಲ್ಲಿ ವಾಸವಾಗಿವೆ. ಆದರೆ ಇಂದು ಸುಮಾರು 3 ಹಕ್ಕಿಗಳು ಮರದ ಮೇಲಿಂದ ಬಿದ್ದು ಮೃತಪಟ್ಟಿವೆ. ಸ್ಥಳಕ್ಕೆ ಬಂದಿದ್ದ ಪಶು ವೈದ್ಯಧಿಕಾರಿಗಳು ವಯಸ್ಸಾಗಿರುವ ಕಾರಣ ಬಿದ್ದಿವೆ. ಆದರೂ ಪರೀಕ್ಷೆ ನಡೆಸಿ, ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸರಣಿಯಾಗಿ ಸಾವಿಗೀಡಾಗುತ್ತಿವೆ ಕಾಗೆಗಳು : ಆತಂಕದಲ್ಲಿ ಜನತೆ..

ಈ ಮರದಿಂದ ಆನೇಕ ವರ್ಷಗಳಿಂದ ಬೇರೆ ಬೇರೆ ಕಡೆಯಿಂದ ಪಕ್ಷಿಗಳು ಬಂದು, ಕೆಲ ತಿಂಗಳು ಇದ್ದು ಹೋಗುತ್ತವೆ. ಆದರೆ ಈಗ ಪಕ್ಷಿಗಳು ಸಾಯುತ್ತಿರುವುದು ಹಕ್ಕಿಜ್ವರ ಕಾರಣ ಇರಬಹುದೇ ಎಂದು ಶಂಕಿಸಲಾಗಿದೆ.

ಈಗಾಗಲೇ ರಾಜ್ಯದ ಹಲವೆಡೆ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಇದರ ಬೆನ್ನಲ್ಲೇ ಹಕ್ಕಿಗಳ ಸಾವು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.