ಸರಣಿಯಾಗಿ ಸಾವಿಗೀಡಾಗುತ್ತಿವೆ ಕಾಗೆಗಳು : ಆತಂಕದಲ್ಲಿ ಜನತೆ
ಕಾಗೆಗಳು ಸಾಮೂಹಿಕವಾಗಿ ಸಾವಿಗೀಡಾಗುತ್ತಿದ್ದು, ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾಗೆಗಳ ಸಾವಿಗೆ ಕಾರಣವೇನು ಎನ್ನುವ ಆತಂಕ ಮೂಡಿದೆ.
ಶಿವಮೊಗ್ಗ [ಮಾ.17]: ದೇಶದಲ್ಲಿ ಕೊರೋನಾ ಹಾವಳಿ ಬೆಚ್ಚಿ ಬೀಳಿಸುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ರಾಜ್ಯಕ್ಕೆ ಎದುರಾಗಿದೆ. ಎಲ್ಲೆಡೆ ಪಕ್ಷಿ, ಕೋಳಿಗಳು ಸಾವಿಗೀಡಾಗುತ್ತಿವೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸರಣಿ ಸರಣಿಯಾಗಿ ಸಾವಿಗೀಡಾಗುತ್ತಿವೆ. ಯಲವಳ್ಳಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಕಾಗೆಗಳು ಸಾವಿಗೀಡಾಗಿವೆ.
ಏಕಾಏಕಿ ಬಿದ್ದು ಒದ್ದಾಡಿ ಕಾಗೆಗಳು ಪ್ರಾಣ ಬಿಡುತ್ತಿವೆ. ಕಾಗೆಗಳ ಸರಣಿ ಸಾವಿನಿಂದ ಜನರು ಆತಂಕಕ್ಕೆ ಈಡಾಗಿದ್ದಾರೆ. ಕಾಡಿನಲ್ಲಿಯೂ ಕೂಡ ಕಾಗೆಗಳು ಸಾವಿಗೀಡಾಗುತ್ತಿವೆ.
25 ಡಿಗ್ರಿ ತಾಪದಲ್ಲಿ ಕೊರೋನಾ ವೈರಸ್ ಮರಣ...
ಹಕ್ಕಿ ಜ್ವರ ಅಥವಾ ನಿಗೂಢ ಕಾಯಿಲೆಯಿಂದ ಕಾಗೆಗೆಳು ಸಾವಿಗೀಡಾಗುತ್ತಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಈ ಬಗ್ಗೆ ಗ್ರಾಮಸ್ಥರು ತಾಲೂಕು ಕಚೇರಿಗೆ ಮಾಹಿತಿ ನೀಡಿದ್ದು, ಆದರೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಇನ್ನಾದರೂ ಪರಿಶೀಲನೆ ನಡೆಸಿಲ್ಲ.