Asianet Suvarna News Asianet Suvarna News

ಚಿತ್ರದುರ್ಗ: ಕೆಟ್ಟು ನಿಂತ ಶುದ್ಧ ನೀರಿನ ಘಟಕಗಳು, ಕುಡಿಯುವ ನೀರಿಗಾಗಿ ಜನರ ಪರದಾಟ..!

ಕಾವಾಡಿಗರಹಟ್ಟಿ ದುರಂತದ ಬಳಿಕ, ಕುಡಿಯುವ ನೀರಿನ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ನಗರಸಭೆ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ. ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡುವಲ್ಲೇ ಬಿಸಿಯಾಗಿದ್ದಾರೆ, ಹೀಗಾಗಿ ಚಿತ್ರದುರ್ಗ ನಗರದಲ್ಲಿನ 50 ಕ್ಕೂ ಅಧಿಕ ವಾಟರ್ ಫಿಲ್ಟರ್ ಗಳು ನಿರ್ವಹಣೆ ಇಲ್ಲದೇ‌ ಕೆಟ್ಟು‌ ನಿಂತಿವೆ. 

People Faces Dinking Water Problem in Chitradurga grg
Author
First Published Aug 22, 2023, 8:48 PM IST

ವರದಿ: ಕಿರಣ್, ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಆ.22): ಕಲುಷಿತ ನೀರು‌ ಸೇವಿಸಿ ಕೋಟೆನಾಡಿನಲ್ಲಿ ದೊಡ್ಡ‌ ದುರಂತವೇ ನಡೆದಿದೆ. ಹೀಗಾಗಿ ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡುವಲ್ಲಿ ಬ್ಯೂಸಿಯಾಗಿರುವ ಜಿಲ್ಲಾಡಳಿತ ಇಡೀ ನಗರದಲ್ಲಿನ ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನೇ ಮರೆತಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ......,

ನೋಡಿ ಹೀಗೆ ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳು. ಕುಡಿಯುವ ನೀರಿಗಾಗಿ ಪರದಾಡ್ತಿರುವ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗದ ಆಶ್ರಯ ಬಡಾವಣೆಯಲ್ಲಿ. ಹೌದು, ಕವಾಡಿಗರಹಟ್ಟಿ ಪಕ್ಕದಲ್ಲೇ ಇರುವ ಈ ಬಡಾವಣೆಗೂ ಸಹ ನಾಲ್ಕೈದು ದಿನಗಳ ಹಿಂದಷ್ಟೇ ನಾಲ್ವರು ವಾಂತಿ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿದ್ರು. ಸಣ್ಣ ಪುಟ್ಟ ತೊಂದರೆಗಳು ಆದ ಕಾರಣ ಉತ್ತಮ ಚಿಕಿತ್ಸೆಯಿಂದಾಗಿ ಗುಣಮುಖರಾಗಿ ಮನೆಗೆ ತೆರಳಿದ್ರು. 

ನಗರಸಭೆ ಪೌರ ಕಾರ್ಮಿಕರಿಗೆ ಕಳಪೆ ಆಹಾರ ಪೂರೈಕೆ ಆರೋಪ: ಕಾರ್ಮಿಕರ ಪ್ರತಿಭಟನೆ

ಆದ್ರೆ ಕಾವಾಡಿಗರಹಟ್ಟಿ ದುರಂತದ ಬಳಿಕ, ಕುಡಿಯುವ ನೀರಿನ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ನಗರಸಭೆ ಹಾಗು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ. ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡುವಲ್ಲೇ ಬಿಸಿಯಾಗಿದ್ದಾರೆ, ಹೀಗಾಗಿ ಚಿತ್ರದುರ್ಗ ನಗರದಲ್ಲಿನ 50 ಕ್ಕೂ ಅಧಿಕ ವಾಟರ್ ಫಿಲ್ಟರ್ ಗಳು ನಿರ್ವಹಣೆ ಇಲ್ಲದೇ‌ ಕೆಟ್ಟು‌ ನಿಂತಿವೆ. ಗ್ರಾಮಾಂತರ ಪ್ರದೇಶದಲ್ಲಿನ ಬಹುತೇಕ ಎಲ್ಲಾ ಫಿಲ್ಟರ್ ಗಳು ನಿರುಪಯುಕ್ತವಾಗಿವೆ‌ ಇದರಿಂದಾಗಿ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸುಮಾರು ಒಂದೆರಡು ಕಿಲೋ ಮೀಟರ್ ದೂರಕ್ಕೆ ತೆರಳಿ ನೀರು ತರುವಂತಾಗಿದೆ. ಕೈಲಾಗದವರು ಹಾಗು ಸಮಯವಿಲ್ಲದವರು  ಕೈಗೆ ಸಿಕ್ಕ ನೀರು ಕುಡಿದು ಅನಾರೋಗ್ಯಕ್ಕೀಡಾಗುವ ಸ್ಥಿತಿ ಕೋಟೆನಾಡಲ್ಲಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. 

ಇನ್ನೂ  ವಾಟರ್ ಫಿಲ್ಟರ್ ನಿರ್ವಹಣೆ ಮಾಡಬೇಕಾದ ಏಜೆನ್ಸಿಗಳು, ನಿಯಮದಂತೆ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ಹೀಗಾಗಿ ಘಟಕಗಳು ಸಂಪೂರ್ಣ ಕೆಟ್ಟುಹೋಗಿವೆ‌. ಈ ಬಗ್ಗೆ ನಗರಸಭೆ ಹಾಗೂ ಜಿಪಂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಜವಾಬ್ದಾರಿ ಹೊತ್ತಿರುವ ಏಜೆನ್ಸಿಗಳನ್ನು ಬ್ಲಾಕ್‌ಲೀಸ್ಟ್ ಗೆ ಹಾಕಿ, ಶುದ್ಧ ಕುಡಿಯುವ ನೀರನ್ನು‌ ನಾಗರೀಕರಿಗೆ‌ ಒದಗಿಸಲು ಜಿಲ್ಲಾಡಳಿತ ಮುಂದಾಗೇಬೆಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

ಒಟ್ಟಾರೆ ಕಲುಷಿತ ನೀರಿನಿಂದ ದೊಡ್ಡ ದುರಂತವೇ ನಡೆದು ಹೋಗಿದೆ. ಆದರೂ ಚಿತ್ರದುರ್ಗ ಜಿಲ್ಲಾಡಳಿತ ಎಚ್ಚೆತ್ತಿಲ್ಲ‌. ಶುದ್ಧ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ಮಾಡ್ತಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿನ‌ ಘಟಕಗಳು‌ ನಿರುಪಯುಕ್ತವಾಗಿದ್ದು, ಇಡೀ ಚಿತ್ರದುರ್ಗದ ಜನರು, ಕುಡಿಯುವ ನೀರಿಗಾಗಿ  ಪರಿತಪಿಸುವಂತಾಗಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ವಾಟರ್ ಫಿಲ್ಟರ್ ಗಳನ್ನು ಸರಿಪಡಿಸಲಿ ಎಂಬುದು ಜನರ ಒತ್ತಾಯ.... 

Follow Us:
Download App:
  • android
  • ios