Asianet Suvarna News Asianet Suvarna News

ನಗರಸಭೆ ಪೌರ ಕಾರ್ಮಿಕರಿಗೆ ಕಳಪೆ ಆಹಾರ ಪೂರೈಕೆ ಆರೋಪ: ಕಾರ್ಮಿಕರ ಪ್ರತಿಭಟನೆ

ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡಲಿಲ್ಲ ಅಂದ್ರೆ ಸಾಕು ಇಡೀ ನಗರವೇ ಗಬ್ಬೆದ್ದು ನಾರುತ್ತೆ. ಅಂಥವರು ಹೊಟ್ಟೆಗೆ ತಿನ್ನುವ ಅನ್ನವನ್ನು ಅಧಿಕಾರಿಗಳು ಉತ್ತಮ ಗುಣಮಟ್ಟದಲ್ಲಿ ನೀಡಲು ಆಗ್ತಿಲ್ಲ ಎಂಬುದು ಶೋಚನೀಯ. 

Workers protest in front of Chitradurga DC office against officials gvd
Author
First Published Aug 21, 2023, 9:10 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.21): ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡಲಿಲ್ಲ ಅಂದ್ರೆ ಸಾಕು ಇಡೀ ನಗರವೇ ಗಬ್ಬೆದ್ದು ನಾರುತ್ತೆ. ಅಂಥವರು ಹೊಟ್ಟೆಗೆ ತಿನ್ನುವ ಅನ್ನವನ್ನು ಅಧಿಕಾರಿಗಳು ಉತ್ತಮ ಗುಣಮಟ್ಟದಲ್ಲಿ ನೀಡಲು ಆಗ್ತಿಲ್ಲ ಎಂಬುದು ಶೋಚನೀಯ. ಪೌರ ಕಾರ್ಮಿಕರಿಗೆ ಕಳಪೆ ಆಹಾರ ನೀಡಲಾಗ್ತಿದೆ ಎಂದು ಕಾರ್ಮಿಕರು ಡಿಸಿ ಕಚೇರಿ ಮುಂದೆ ಧರಣಿ ನಡೆಸಲು ಮುಂದಾಗಿದ್ದಾರೆ. ಇಡೀ ರಾಜ್ಯದಲ್ಲಿಯೇ ನಗರಗಳು ಪ್ರದೇಶಗಳು ಸ್ವಚ್ಚವಾಗಿ ಇದ್ದಾವೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ನಮ್ಮ ಪೌರ ಕಾರ್ಮಿಕರು. ಅಂಥವರು ತಿನ್ನುವ ಅನ್ನದಲ್ಲಿಯೇ ಕಳಪೆ ಆಹಾರ ಪೂರೈಕೆ ಮಾಡಲಾಗ್ತಿದೆ ಎಂಬ ಗಂಭೀರ ಆರೋಪ ಕೋಟೆನಾಡು ಚಿತ್ರದುರ್ಗದಲ್ಲಿ ಕೇಳಿ‌ ಬಂದಿದೆ. 

ಹೀಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಊಟದ ಬಾಕ್ಸ್ ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡ್ತಿರೋ ಕಾರ್ಮಿಕರು. ಮತ್ತೊಂದೆಡೆ ಇರುವ ಅನ್ನದಲ್ಲಿ ಸತ್ತು ಬಿದ್ದಿರೋ ಜಿರಲೆಯನ್ನು ಕಂಡು ಅಧಿಕಾರಿಗಳ ವಿರುದ್ದ ಕಿಡಿ ಕಾರುತ್ತಿದ್ದಾರೆ. ನಿತ್ಯ ಬೆಳಗಾದ್ರೆ ಸಾಕು ಒಂದು ರಸ್ತೆಯನ್ನು ಬಿಡದೇ ಸ್ವಚ್ಚಗೊಳಿಸೋ ಕಾರ್ಮಿಕರಿಗ್ಯಾಕೆ ಈ ಸ್ಥಿತಿ ಎಂದು ಹೋರಾಟಗಾರರು ಪ್ರಶ್ನೆ ಮಾಡ್ತಿದ್ದಾರೆ. ಇನ್ನೂ ಕಳೆಪೆ ಆಹಾರ ವಿತರಣೆ ಇಂದು ಮಾತ್ರ ಆಗಿಲ್ಲ. ಈ ಹಿಂದೆ ಮೂರ್ನಾಲ್ಕು ಬಾರಿಯೂ ಉಪಹಾರ ಸರಿಯಿಲ್ಲ ಅದನ್ನು ಸರಿಪಡಿಸಿ ಎಂದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. 

ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಂಜಾಪುಂಡರ ಕಾಟ: ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

ಇಂದು ಕೂಡ ಕೆಲಸ ಮಾಡಿದ ಸಾಕಷ್ಟು ಕಾರ್ಮಿಕರು ಕಳಪೆ ಆಹಾರ ಕಂಡು ಕಸಕ್ಕೆ ಎಸೆದು ಉಪವಾಸವೇ ಕೆಲಸ ಮಾಡಿದರು‌. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಆಹಾರ ವಿತರಿಸಿ ಎಂದು ಕಾರ್ಮಿಕರು ಆಗ್ರಹಿಸಿದರು. ನಮ್ಮ ಜಿಲ್ಲೆಯ ಜಿಲ್ಲಾಡಳಿತ ಎಷ್ಟು ಅವ್ಯವಸ್ಥೆಯ ಆಗಾರವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನ. ಹಗಲು ರಾತ್ರಿ ಎನ್ನದೇ ಕೆಲಸ ಮಾಡುವ ಪೌರ ಕಾರ್ಮಿಕರಿಗೂ ಸೂಕ್ತ ಅಹಾರದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಕೋವಿಡ್ ಮಾತ್ರವಲ್ಲದೇ ಇತ್ತೀಚೆಗಷ್ಟೇ ನಡೆದ ಕವಾಡಿಗರಹಟ್ಟಿಯಲ್ಲಿಯೂ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. 

HIV, ಏಡ್ಸ್ ಪೀಡಿತರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ: ಸಮಸ್ಯೆಗಳನ್ನ ಬಿಚ್ಚಿಟ್ಟ ಸೋಂಕಿತರು!

ಆದ್ರೆ ಇಂತಹ ಪೌರ ಕಾರ್ಮಿಕರಿಗೆ ಬೆಳಗಿನ ಸಮಯದಲ್ಲಿ ಸರ್ಕಾರದಿಂದ ವಿತರಣೆ ಮಾಡುವ ಉಪಹಾರದಲ್ಲಿ ಜಿರಲೆ ಸತ್ತು ಬಿದ್ದಿದೆ ಇದಕ್ಕೆ ಯಾರು ಹೊಣೆ. ಇನ್ನೂ ಈ ಬಗ್ಗೆ ಪೌರ ಕಾರ್ಮಿಕರು ಅಧಿಕಾರಿಗಳಿಗೆ ತಿಳಿಸಿದ್ರು ಡೋಂಟ್ ಕೇರ್ ಎಂದಿದ್ದಾರೆ. ಈ ಕೂಡಲೇ ಆಹಾರ ಸರಬರಾಜು ಮಾಡಿದ ಅಧಿಕಾರಿಯ ಮೇಲೆ ದೂರು ದಾಖಲು ಮಾಡಬೇಕು‌. ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ, ಸೂಕ್ತ ವ್ಯವಸ್ಥೆ ಕಲ್ಲಿಸಬೇಕು ಎಂದು ವಿಜಯಸೇನೆ ಕರುನಾಡ ಸೇನೆ ಪದಾಧಿಕಾರಿಗಳು ಆಗ್ರಹಿಸಿದರು. ಒಟ್ಟಾರೆಯಾಗಿ ಕಷ್ಟಪಟ್ಟು ಬೆವರು ಸುರಿಸಿ ಚರಂಡಿ, ರಸ್ತೆ ಕ್ಲೀನ್ ಮಾಡೋ ಪೌರ ಕಾರ್ಮಿಕರಿಗೆ ಈ ಪರಿಸ್ಥಿತಿ ಆದ್ರೆ ಮುಂದೆ ಅವರಿಗೆ ಆಗುವ ನೋವುಗಳಿಗೆ ಯಾರು ಹೊಣೆ. ಆದ್ದರಿಂದ ಕೂಡಲೇ ಇದಕ್ಕೆ ಪರಿಹಾರ ಸಿಗಬೇಕು, ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಆಹಾರ ಸರಬರಾಜು ಮಾಡಬೇಕಿದೆ.

Follow Us:
Download App:
  • android
  • ios