ಬಳ್ಳಾರಿ(ಮೇ.21): ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಟ್ಕಾ ಖರೀದಿಗಾಗಿ ಜನರು ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. 

ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಗುಟ್ಕಾ ಡೀಲರ್ ಅಂಗಡಿ ಮುಂದೆ ನೂರಾರು ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದಲೇ ಜನರು ಗುಟ್ಕಾ ಖರೀದಿಗೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಒಬ್ಬರಿಗೆ ಎರಡು ಪ್ಯಾಕೆಟ್‌ಗಳನ್ನ ಮಾತ್ರ ವಿತರಣೆ ಮಾಡಲಾಗುತ್ತಿದೆ. ಒಂದು ಪ್ಯಾಕೆಟ್‌ಗೆ ರೂ.125 ರಂತೆ ವಿತರಣೆ ಮಾಡಲಾಗುತ್ತಿದೆ. ರಿಟೇಲ್ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಗುಟ್ಕಾ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. 

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ಗುಟ್ಕಾ ಖರೀದಿ ವೇಳೆ ಯಾರೊಬ್ಬರು ಮಾಸ್ಕ್‌ ಧರಿಸಿಲ್ಲ ಜೊತೆಗೆ ಸಾಮಾಜಿಕ ಅಂತರವನ್ನೂ ಕೂಡ ಕಾಯ್ದುಕೊಂಡಿಲ್ಲ. ಸಾವಿರಾರು ಜನ ಜಮಾವಣೆಯಾದರೂ ಹೇಳೋರಿಲ್ಲ ಕೇಳೋರಿಲ್ಲ ಅಂತ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.