ವಿಜಯಪುರ(ಜು.18): ಕೊರೋನಾ ಮಧ್ಯೆ ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿ ದುರ್ಗಾದೇವಿ ಹಾಗೂ ಸೇವಾಲಾಲ್‌ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿ ಖುಷಿ ಪಟ್ಟಿದ್ದಲ್ಲದೆ, ಬಾಡೂಟ ಸವಿದು ಭರ್ಜರಿಯಾಗಿ ಜಾತ್ರೆ ಆಚರಿಸಿದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾದಲ್ಲಿ ಶುಕ್ರವಾರ ನಡೆದಿದೆ. 

ಕೊರೋನಾ ಭೀತಿಯಿಂದ ಈ ತಾಂಡಾ ಜನರು ಗುರುವಾರವಷ್ಟೇ ಸ್ವಯಂ ಪ್ರೇರಿತರಾಗಿ ಲಾಕ್‌ಡೌನ್‌ ವಿಧಿಸಿಕೊಂಡಿದ್ದರು. 

ಇದೇನು ಕ್ವಾರಂಟೈನ್ ಕೇಂದ್ರವೇ, ಕಸದ ತೊಟ್ಟಿಯೇ! ಯಪ್ಪಾ ಗಬ್ಬು

ಆದರೆ ಈ ತಾಂಡಾದ ಜನರು ಜಾತ್ರೆಯ ನೆಪದಲ್ಲಿ ಬಾಡೂಟ ಸಿದ್ಧಪಡಿಸಿ ಗುಂಪು ಗುಂಪಾಗಿ ಸೇರಿ ಭೋಜನ ಮಾಡಿದ್ದಾರೆ. ಯಾರೊಬ್ಬರು ಮಾಸ್ಕ್‌ ಧರಿಸಿರಲಿಲ್ಲ. ಸಾಮಾಜಿಕ ಅಂತರ ಗಾಳಿಗೆ ತೂರಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.