Asianet Suvarna News Asianet Suvarna News

ಮೈಸೂರು: ಸಂತ್ರಸ್ತರ ನೆರವಿಗಾಗಿ ದೇಣಿಗೆ, ದಿನ ಬಳಕೆ ವಸ್ತುಗಳ ಸಂಗ್ರಹ

ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ಮೈಸೂರಿನಲ್ಲಿ ದಿನಬಳಕೆ ವಸ್ತು ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಲಾಯಿತು. ಬೆಟ್ಟದಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಅಂಗಡಿ ಮುಂಗಟ್ಟುಗಳಲ್ಲಿ ದೇಣಿಗೆಯನ್ನು ಹಾಗೂ ದಿನ ಬಳಕೆಯ ವಸ್ತುಗಳನ್ನು ಸಂಗ್ರಹಿಸಿದರು.

People collects relief materials in Mysore
Author
Bangalore, First Published Aug 15, 2019, 9:04 AM IST | Last Updated Aug 15, 2019, 9:04 AM IST

ಮೈಸೂರು(ಆ.15): ಬೆಟ್ಟದಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಅಂಗಡಿ ಮುಂಗಟ್ಟುಗಳಲ್ಲಿ ದೇಣಿಗೆಯನ್ನು ಹಾಗೂ ದಿನ ಬಳಕೆಯ ವಸ್ತುಗಳನ್ನು ಸಂಗ್ರಹಿಸಿದರು.

ಸಂಗ್ರಹಿಸಿದ ಪದಾರ್ಥಗಳನ್ನು ಪರಿಹಾರ ಕೇಂದ್ರಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಸೇರಿ ಒಟ್ಟಿಗೆ ತಹಸೀಲ್ದಾರ್‌ ಒಪ್ಪಿಗೆ ಮೇರೆಗೆ ಅವರ ನೇತೃತ್ವದಲ್ಲಿ ದಿನ ಬಳಕೆಯ ವಸ್ತುಗಳನ್ನು ತಲುಪಿಸಿಲಾಯಿತು.

ಮಂಡ್ಯ: ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖ

ವಿದ್ಯಾರ್ಥಿಗಳು ಈ ರೀತಿಯ ಬೆಳವಣೆಗೆ ಖುಷಿ ತಂದಿಗೆ ಎಂದು ಪ್ರಭಾರ ಪ್ರಾಂಶುಪಾಲರಾದ ಎಸ್‌.ಜಿ. ಚೈತ್ರಾ ತಿಳಿಸಿದ್ದಾರೆ. ಪ್ರಾಧ್ಯಾಪಕ ಪಿ.ಎಸ್‌. ರಘು, ವೆಂಕಟೇಶ್‌, ಶಿಲ್ಪಶ್ರೀ, ಉದಯಕುಮಾರ್‌, ರೂಪಶ್ರೀ, ರಾಜೇಶ್‌, ಡಾ. ಜಗದೀಶ್‌, ರಾಜು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಇದ್ದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Latest Videos
Follow Us:
Download App:
  • android
  • ios