ಬಾಗಲಕೋಟೆ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಮುಳುಗಡೆ ನಗರಿ!
ಮೊದಲ ದಿನ ಕಂಡು ಬಂದ ನಿರುತ್ಸಾಹ| ವಯಸ್ಸಿನ ಹಂಗಿಲ್ಲದ ಬಣ್ಣ ಹಚ್ಚಿ ಸಂಭ್ರಮ| ರಂಗಿನಾಟದಲ್ಲಿ ಹೇಳಿಕೊಳ್ಳುವಂತಹ ಜನ ಕಾಣಿಸಿಕೊಳ್ಳಲಿಲ್ಲ|
ಬಾಗಲಕೋಟೆ(ಮಾ.11): ಕೋಲ್ಕತಾ ಬಿಟ್ಟರೆ ದೇಶದಲ್ಲಿಯೇ ಅತೀ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸುವುದು ಅದು ಬಾಗಲಕೋಟೆಯಲ್ಲಿ ಮಾತ್ರ. ಹೀಗಾಗಿ ಹೋಳಿ ಮೊದಲ ದಿನವಾದ ಮಂಗಳವಾರ ಕೋಟೆನಾಡಿನಾದ್ಯಂತ ಎಲ್ಲೆಡೆ ಬಣ್ಣದೋಕುಳಿ ರಂಗೇರಿಸಿತ್ತು. ವಯಸ್ಸಿನ ಬೇಧವಿದಲ್ಲದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.
ಕೋಲ್ಕತಾ ಬಿಟ್ರೆ ವಿಜೃಂಭಣೆಯಿಂದ ಹೋಳಿ ಆಚರಿಸೋದು ಕರ್ನಾಟಕದ ಈ ಜಿಲ್ಲೆಯಲ್ಲಿ!
ಕಿಲ್ಲಾ ಓಣಿಯ ಮೊದಲ ದಿನದ ದಿನವಾದ ಮಂಗಳವಾರ ರಂಗಿನಾಟದಲ್ಲಿ ಹೇಳಿಕೊಳ್ಳುವಂತಹ ಜನ ಕಾಣಿಸಿಕೊಳ್ಳಲಿಲ್ಲ. ಸುಡು ಬಿಸಿಲಿನ ನಡುವೇ ಕಿಲ್ಲಾ ಭಾಗದ ಕಾಮಣ್ಣನನ್ನು ಮಕ್ಕಳು ಕುಣಿದು ಕುಪ್ಪಳಿಸಿ ಹೋಳಿ ಹಬ್ಬದ ಮೊದಲ ದಿನ ಬಣ್ಣದಲ್ಲಿ ಸಂಭ್ರಮಿಸಿದರು. ಬಾಗಲಕೋಟೆ ರಂಗು ರಂಗಿನಾಟ ಮೊದಲ ಕಿಲ್ಲಾ ಭಾಗದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಕಂಡು ಬಂದವು. ಕಿಲ್ಲಾ ಭಾಗದ ಹೊನ್ನಾಳ ದೇಸಾಯಿರವರ ಮನೆ, ಮರಾಟಾ ಗಲ್ಲಿಗಳಲ್ಲಿ ಹೋಳಿ ತನ್ನ ಮೆರಗು ಕಂಡುಕೊಂಡಿತ್ತು. ಹೋಳಿ ಬಣ್ಣದಾಟದಲ್ಲಿ ಎಲ್ಲರು ಮುಖಗಳು ಕೆಂಪಾಗಿದ್ದವು. ಚೈನಾರೆಡ್ ಕೆಂಪು ಬಣ್ಣ ಎಲ್ಲರ ಮುಖವನ್ನು ಕೆಂಪಾಗಿಸಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಿಲ್ಲಾ ಭಾಗದ ಮೊದಲ ದಿನದ ಬಣ್ಣದಾಟದ ವಿವಿಧ ಪ್ರದೇಶಗಳಲ್ಲಿ ಬಂಡಿ ಹಾಗೂ ಟ್ರ್ಯಾಕ್ಟರಗಳಲ್ಲಿ ಯುವಕರು ಬಣ್ಣದ ಬ್ಯಾರೇಲ್‌ಗಳನ್ನು ಇಟ್ಟುಕೊಂಡು ಕಿಲ್ಲಾದ ಕೊತ್ತಲೇಶ ದೇವಸ್ಥಾನದ ಮಾರ್ಗವಾಗಿ ಸಾಗಿ, ಬಣ್ಣದ ಬಂಡಿಗಳು ಪಂಖಾಮಸೀದಿ, ಮಾಬುಸುಬಾನಿ ದರ್ಗಾ, ಜೈನಪೇಟೆ, ಕುಂಬಾರಮಡು, ಅಡತ ಬಜಾರ ಚಿನಗೇರಕಟ್ಟಿ, ಪಶು ಆಸ್ಪತ್ರೆ ಕಾಲೇಜ ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ ರಸ್ತೆ ಮೂಲಕ ವಲ್ಲಭಭಾಯಿ ಚೌಕಕ್ಕೆ ಬಂದು ಮುಟ್ಟಿದರು. ಇದರ ಮಧ್ಯ ರಸ್ತೆ ಮಾರ್ಗದದ್ದೂಕ್ಕೂ ರಸ್ತೆಯ ಅಕ್ಕಪಕ್ಕದಲ್ಲಿ ಯುವಕರು ಮಕ್ಕಳು ಇಟ್ಟಿದ್ದ ಬಣ್ಣದ ನೀರಿನ ಬ್ಯಾರಲ್‌ಗಳನ್ನು ಒಬ್ಬರಿಗೊಬ್ಬರು ಎರಚುತ್ತಿದ್ದ ದೃಶ್ಯಗಳು ಸರ್ವೆ ಸಾಮಾನ್ಯವಾಗಿದ್ದವು. ಬಣ್ಣದ ಬಂಡಿಗಳ ಸಾಲಿನ ಮುಂದೆ ಕಿಲ್ಲಾ ಭಾಗದ ತುರಾಯಿ ಹಲಗೆಯ ಸದ್ದ ಬಲು ಜೋರಾಗಿತ್ತು. ಯುವಕರು ಮಕ್ಕಳು ಬಣ್ಣದ ಬಂಡಿಯಲ್ಲಿ ಕೇಕೆ, ಚಪ್ಪಾಳೆ, ವಿವಿಧ ಘೋಷಣೆಗಳನ್ನು ಹಾಕುತ್ತಿದ್ದ ದೃಶ್ಯ ನೆರೆ ಯುವ ಸಮೂಹವನ್ನು ಹೆಚ್ಚೆಬ್ಬಿಸುವಂತೆ ಮಾಡಿತ್ತು. ಬಣ್ಣದಾಟದೊಂದಿಗೆ ಬಾಯಿ ಬಾಯಿ ಬಡಿದುಕೊಂಡು ಲಬೋ ಲಬೋ ಹೊಯ್ಕೊಳ್ಳುವುದು ಸಹ ಕಂಡು ಬಂದಿತು.ಅನಾದಿ ಕಾಲದಿಂದಲೂ ಬಾಗಲಕೋಟೆ ಹೋಳಿ ಬಣ್ಣದಲ್ಲಿ ಬಂಡಿಗಳ ಸಾಲುಗಳು ಇರುತ್ತಿದ್ದವು. ಈ ಸಲ ಕೇವಲ ಎರಡು ಬಂಡಿಗಳು ಬಣ್ಣದಲ್ಲಿ ಭಾಗವಹಿಸಿದ್ದವು.
ಐತಿಹಾಸಿಕ ಪರಂಪರೆಯುಳ್ಳ ಬಾಗಲಕೋಟೆಯ ಹೋಳಿ ಆಚರಣೆಗೆ ಶತಮಾನಗಳ ಇತಿಹಾಸವಿದ್ದು, ಕೋಲ್ಕತಾ ಹೊರತುಪಡಿಸಿದರೆ ಐದು ದಿನಗಳ ಕಾಲ ಹೋಳಿ ಆಚರಿಸುವ ಹೆಗ್ಗಳಿಕೆ ಬಾಗಲಕೋಟೆಯದ್ದಾಗಿದೆ. ನಗರ ಸೇರಿದಂತೆ ವಿವಿಧ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಎಲ್ಲರು ಸಂಭ್ರಮದಿಂದ ಆಚರಿಸಿದರು. ವೃದ್ಧರು, ಮಕ್ಕಳು ಎನ್ನದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಹೋಳಿಗೆ ರಂಗು ತುಂಬಿದರು. ಬಾಗಲಕೋಟೆಯಲ್ಲಿ ಮೊದಲ ದಿನ ಅಷ್ಟು ದಿನ ಕಾಣಿಸಿಕೊಳ್ಳದೇ ಇರುವುದು ಹೋಳಿಗೆ ರಂಗು ಕಡಿಮೆ ಇದ್ದಂತೆ ಕಂಡು ಬಂದಿತು.