ಕೋಲ್ಕತಾ ಬಿಟ್ರೆ ವಿಜೃಂಭಣೆಯಿಂದ ಹೋಳಿ ಆಚರಿಸೋದು ಕರ್ನಾಟಕದ ಈ ಜಿಲ್ಲೆಯಲ್ಲಿ!
ಬಾಗಲಕೋಟೆ(ಮಾ.11): ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಮೊದಲ ದಿನ(ಮಂಗಳವಾರ)ದಂದು ಸಂಭ್ರಮದಿಂದ ಬಣ್ಣದೋಕುಳಿಯನ್ನ ಆಡಿದ್ದಾರೆ. ವಯಸ್ಸಿನ ಬೇಧವಿದಲ್ಲದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ.
ಕೋಲ್ಕತಾ ಬಿಟ್ಟರೆ ದೇಶದಲ್ಲಿಯೇ ಅತೀ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸುವುದು ಬಾಗಲಕೋಟೆಯಲ್ಲಿ
ಹೋಳಿ ಮೊದಲ ದಿನವಾದ ಮಂಗಳವಾರ ಕೋಟೆ ನಾಡಿನಾದ್ಯಂತ ರಂಗೇರಿಸಿತ್ತು ಬಣ್ಣದೋಕುಳಿ
ವಯಸ್ಸಿನ ಬೇಧವಿದಲ್ಲದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟ ಜನತೆ
ಕಿಲ್ಲಾ ಭಾಗದ ಹೊನ್ನಾಳ ದೇಸಾಯಿರವರ ಮನೆ, ಮರಾಟಾ ಗಲ್ಲಿಗಳಲ್ಲಿ ಮೆರಗು ತಂದ ಹೋಳಿ
ಬಂಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಬಣ್ಣದ ಬ್ಯಾರೇಲ್ ಇಟ್ಟು ಬಣ್ಣ ಎರಚಿಸಿದ ಯುವಕರು
ಸುಡು ಬಿಸಿಲಿನ ನಡುವೇ ಕಿಲ್ಲಾ ಭಾಗದ ಕಾಮಣ್ಣನ ಮುಂದೆ ಕುಣಿದು ಕುಪ್ಪಳಿಸಿದ ಮಕ್ಕಳು
ವೃದ್ಧರು, ಮಕ್ಕಳು ಎನ್ನದೇ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮ